ದಾವಣಗೆರೆ: ಮಾಜಿ ಸಿಎಂ ಕುಮಾರಸ್ವಾಮಿಯವರೇ ನೀವು ಕಾಂಗ್ರೆಸ್ ಮುಖಂಡರಿಗೆ ಧಮ್ಮು, ಗಂಡಸ್ತನ ಎನ್ನುವ ಮಾತುಗಳನ್ನು ಹೇಳಿ. ಬಿಜೆಪಿ ಅಭಿವೃದ್ಧಿ ಹಾಗೂ ಕೋಮು ಸಾಮರಸ್ಯದಲ್ಲಿ ಗಂಡಸ್ತನ ತೋರಿಸುತ್ತದೆ. ಗಂಡಸ್ತನ ಎಂದು ವಿವಾದ ಹುಟ್ಟಿಹಾಕುವುದು ಗಂಡಸ್ತನ ಅಲ್ಲ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಟಾಂಗ್ ನೀಡಿದರು.
ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಹೇಳಿಕೆ ವಾಪಸ್ ಪಡೆದು ಬೇಷರತ್ ಕ್ಷೇಮೆ ಕೇಳಬೇಕು. ಅವರು ಎರಡು ಬಾರಿ ಸಿಎಂ ಆಗಿದ್ದವರು. ಅವರಿಗೆ ಆಡಳಿತದ ಅನುಭವ ಇದೆ. ಅವರು ಸಿಎಂ ಬಸವರಾಜ ಬೊಮ್ಮಾಯಿಯವರ ಬಗ್ಗೆ ಗಂಡಸ್ತನದ ಮಾತನಾಡಿದ್ದು ನಾನು ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೇಜ್ರಿವಾಲ್ ಮನೆ ಮೇಲೆ ದಾಳಿ- 8 ಮಂದಿ ಬಂಧನ
Advertisement
Advertisement
ಬೊಮ್ಮಾಯಿ ಅವರಿಗೆ ಯಾವ ರೀತಿ ಅಡಳಿತ ಮಾಡಬೇಕು ಎನ್ನುವುದು ಗೊತ್ತಿದೆ. ಸಂಘರ್ಷಕ್ಕೆ ಅನುವು ಮಾಡಿಕೊಡುವುದಲ್ಲ. ಸಾಮರಸ್ಯ ಕಾಪಾಡುತ್ತಾರೆ. ಹಿಜಬ್, ಕಾಶ್ಮೀರ ಫೈಲ್ಸ್, ಭಗವದ್ಗೀತೆ, ಹಲಾಲ್, ಇವೆಲ್ಲ ವಿವಾದ ಹುಟ್ಟಿ ಹಾಕಿದ್ದು ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್‍ನವರು ಹಿಜಾಬ್‍ಗೆ ಬೆಂಬಲಿಸದಿದ್ದರೆ ಇವೆಲ್ಲ ನಡೆಯುತ್ತಿರಲಿಲ್ಲ ಎಂದರು. ಇದನ್ನೂ ಓದಿ: ಯುವಕ ಸಾವನ್ನಪ್ಪಿಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ: ಶ್ರೀ ಶೈಲ ಸ್ವಾಮೀಜಿ
Advertisement
Advertisement
ಈ ಎಲ್ಲಾ ಸಂಘರ್ಷ ನಡೆಯಲು ಕಾಂಗ್ರೆಸ್ ಕಾರಣ. ರಾಜ್ಯದಲ್ಲಿ ಕೋಮು ಗಲಭೆ ಹುಟ್ಟಿಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಹಗಲುಗನಸು ಕಾಣುತ್ತಿದೆ. ಬಿಜೆಪಿ ಕೋಮುಗಲಭೆ ರಾಜಕಾರಣ ಯಾವತ್ತು ಮಾಡೋದಿಲ್ಲ ಎಂದು ಹೇಳಿದರು.