ದಾವಣಗೆರೆ: ಬಿ.ವೈ ವಿಜಯೇಂದ್ರರನ್ನು (B.Y Vijayendra) ಬಿಜೆಪಿ (BJP) ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಬೇಕು ಹಾಗೂ ಅವರ ಬೆಂಬಲಿಗರ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿದ ಯತ್ನಾಳ್ ಟೀಮ್‌ನಲ್ಲಿ ಗುರುತಿಸಿಕೊಂಡ ಬಿಜೆಪಿ ನಾಯಕರು ದೆಹಲಿಗೆ ತೆರಳಿ ಕೇಂದ್ರ ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದಾರೆ. ಇದಕ್ಕೆ ದೆಹಲಿಯಲ್ಲಿ ಚಳಿ ಇದೆ ಇಲ್ಲಿಂದ ಹೋಗುವವರು ಅರೋಗ್ಯ ಜಾಗೃತವಾಗಿ ನೋಡಿಕೊಳ್ಳಿ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M.P Renukacharya) ವ್ಯಂಗ್ಯವಾಡಿದ್ದಾರೆ.
ದಾವಣಗೆರೆಯಲ್ಲಿ (Davanagere) ಮಾತನಾಡಿದ ಅವರು ವಿಜಯೇಂದ್ರರನ್ನು ಬದಲಾವಣೆ ಮಾಡಲು ಆಗುವುದಿಲ್ಲ. ಅವರು ಉತ್ತಮ ಕೆಲಸ ಮಾಡ್ತಾ ಇದ್ದಾರೆ ಇದರಿಂದ ಅವರನ್ನು ಬದಲಾಯಿಸಲು ಆಗುವುದಿಲ್ಲ. ನಾಳೆ ದೆಹಲಿಗೆ ಹೋಗುವವರಿಗೆ ಏನು ಹೇಳಲಿ, ದೆಹಲಿಯಲ್ಲಿ ಚಳಿ ಹೆಚ್ಚಿದೆ ಆರೋಗ್ಯ ಜಾಗೃತಿ ಎಂದು ಸಿದ್ದೇಶ್ವರ್ ಮತ್ತು ಟೀಂಗೆ ಕುಟುಕಿದರು. ಅಲ್ಲದೇ ನನಗೆ ನಾಯಕರು ಮೋದಿ, ಅಮಿತ್ ಷಾ, ಯಡಿಯೂರಪ್ಪ. ಜಿ ಎಂ ಸಿದ್ದೇಶ್ವರ್ ನನಗೆ ನಾಯಕರಲ್ಲ ಎಂದರು. ಇದನ್ನೂ ಓದಿ: ಸಿಎಂ ಕುರ್ಚಿಗೆ ಏಳೆಂಟು ಜನರಿಂದ ಪೈಪೋಟಿ: ಬಿ.ವೈ ವಿಜಯೇಂದ್ರ
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ದ ವಿರುದ್ದ ಕಿಡಿಕಾರಿದ ಅವರು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತ ವಿರೋಧಿ ಸರ್ಕಾರ. ಹೊನ್ನಾಳಿ, ನ್ಯಾಮತಿ ಹೋರಾಟದ ನಂತರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆಗೆ ಆಗ್ರಹಿಸಿ ರಾಜ್ಯದಲ್ಲಿ ಹೋರಾಟ ಆರಂಭವಾಯಿತು. ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ಮಾಡುವ ಮೂಲಕ ಎಚ್ಚರಿಕೆ ನೀಡಲಾಯಿತು. ಕೇಂದ್ರ ಸರ್ಕಾರ 2400 ರೂ. ದರ ನಿಗದಿ ಮಾಡಿದೆ. ರಾಜ್ಯ ಸರ್ಕಾರ 600 ರೂ. ಸೇರಿಸಿ ಮೂರು ಸಾವಿರ ಬೆಲೆಯನ್ನು ಮೆಕ್ಕೆಜೋಳಕ್ಕೆ ನೀಡಲೇಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಏನಾದರೂ ರೈತರ ಪರವಾಗಿ ಕೆಲಸ ಮಾಡದಿದ್ದರೆ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಬಿಸದೇ ಇದ್ದರೆ ಬೆಳಗಾವಿ ಅಧಿವೇಶನ ವೇಳೆ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಡಿಸಿಎಂ, ಸಿಎಂ ತಮ್ಮ ದೆಹಲಿ ಭೇಟಿ ವಿಚಾರವನ್ನು ಬಿಜೆಪಿ ಸೃಷ್ಟಿ ಎನ್ನುತ್ತಿದ್ದಾರೆ. ಒಳಗೆ ಕಚ್ಚಾಟ ಇದೆ, ನಿಮ್ಮ ಕಚ್ಚಾಟದಲ್ಲಿ ರೈತರು ಬೀದಿಗೆ ಬೀಳುವಂತಾಗಿದೆ. ಮೆಕ್ಕೆಜೋಳ ಖರೀದಿ ದಲ್ಲಾಳಿಗಳಿಗೆ ಅನುಕೂಲ ಆಗುವಂತೆ ಮಾಡಲು ಯತ್ನ ಮಾಡಿದ್ದೀರಿ. ಡಿ.8 ರಂದು ಸುವರ್ಣ ಸೌಧಕ್ಕೆ ಮುತ್ತಿಗೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಾಳೆ ಡಿಕೆಶಿ ಮನೆಯಲ್ಲಿ ಸಿಎಂಗೆ ಬ್ರೇಕ್‌ಫಾಸ್ಟ್ – ನಾಟಿ ಕೋಳಿ ಸಾರು ಸ್ಪೆಷಲ್

