– ಯಡಿಯೂರಪ್ಪಗೆ ಅವಮಾನ ಮಾಡಿದ್ರು
– ಮೈಸೂರು ಸಂಸದರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ವಾ?
ಬೆಂಗಳೂರು: ಬಹಿರಂಗ ಹೇಳಿಕೆಗಳನ್ನು ಕೊಡಬೇಡಿ ಎಂದು ಬಿಜೆಪಿ (BJP) ಶಿಸ್ತು ಸಮಿತಿ ನೋಟಿಸ್ ಮೂಲಕ ಎಚ್ಚರಿಕೆ ಕೊಟ್ಟಿದ್ದರೂ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ (M.P.Renukacharya) ಸ್ವಪಕ್ಷೀಯರ ವಿರುದ್ಧವೇ ಮತ್ತೆ ಬಹಿರಂಗವಾಗಿ ಗುಡುಗಿದರು.
Advertisement
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Yediyurappa) ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಅವರು, ಈಗಿರುವ ಯಾರೂ ಬಿಜೆಪಿ ಕಟ್ಟಿಲ್ಲ. ಯಡಿಯೂರಪ್ಪ ಬಗ್ಗೆ ಮಾತನಾಡಿದಾಗ ಕ್ರಮ ಇಲ್ಲ. ಯಡಿಯೂರಪ್ಪ ಯಾವತ್ತೂ ಕೀಳು ರಾಜಕಾರಣ ಮಾಡಿಲ್ಲ. ಯಡಿಯೂರಪ್ಪ ಅವರು ಗೌರವಯುತವಾಗಿ ರಾಜೀನಾಮೆ ಕೊಟ್ಟರು. ಆದರೆ ಅವರಿಗೆ ಅಪಮಾನ, ಅವಮಾನ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅನ್ನಭಾಗ್ಯ ಹಣ ಜುಲೈ 1 ರಂದೇ ಕೊಡ್ತೀವಿ ಅಂತಾ ಹೇಳಿಲ್ಲ – ಸಿಎಂ ಸ್ಪಷ್ಟನೆ
Advertisement
Advertisement
ನನಗೆ ಕೊಟ್ಟಿದ್ದೇನು ಗಿಫ್ಟ್? ರೇಣುಕಾಚಾರ್ಯಗೆ ನೋಟೀಸ್ ಅಂತಾರೆ. ಶಿಸ್ತು ಸಮಿತಿ ಇದೆ ಅನ್ನೋದು ಗೊತ್ತಾಗಿದ್ದೆ ನಿನ್ನೆ. ರಾಜ್ಯಾಧ್ಯಕ್ಷರು 11 ಜನರಿಗೆ ನೋಟೀಸ್ ಅಂತಾರೆ. ಆದರೆ ರೇಣುಕಾಚಾರ್ಯ ನೋಟೀಸ್ ಹೊರಗೆ ಬರುತ್ತೆ. ಉಳಿದವರಿಗೆ ಕೊಟ್ಟಿರುವ ನೋಟೀಸ್ ಎಲ್ಲಿ? ಏಕೆ ಬಿಡುಗಡೆ ಮಾಡಿಲ್ಲ? ನಾನು ಮೋದಿ, ಅಮಿತ್ ಶಾ, ನಡ್ಡಾ ಅವರಿಗೆ ಪತ್ರ ಬರೆಯುತ್ತೇನೆ. ರಾಜ್ಯದ ಸ್ಥಿತಿಗಳ ಬಗ್ಗೆ ಅವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
Advertisement
ಮೈಸೂರು ಸಂಸದರು ಮಾತಾಡ್ತಾರೆ. ಮೈಸೂರು ಸಂಸದರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲವಾ? ಮೈಸೂರು ಸಂಸದರದ್ದು ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಅಲ್ವಾ? ಒಬ್ಬ ಮಹಾನ್ ನಾಯಕನಿಗೆ ಅಪಮಾನ ಮಾಡೋದು ಸರಿಯಿಲ್ಲ ಎಂದು ಪ್ರತಾಪ್ ಸಿಂಹ ಹೆಸರು ಹೇಳದೇ ರೇಣುಕಾಚಾರ್ಯ ತಿರುಗೇಟು ನೀಡಿದರು. ಇದನ್ನೂ ಓದಿ: ದ್ವಿಪಕ್ಷೀಯ ಸಂಬಂಧಗಳು ಹಾಳಾಗಲು ಚೀನಾ ಕಾರಣ: ಜೈಶಂಕರ್
ಯಡಿಯೂರಪ್ಪನವರ ಮಾತಿಗೆ ಗೌರವ ಕೊಡುತ್ತೇನೆ. ಆದರೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ನು ಮುಂದೆ ಎಲ್ಲವನ್ನೂ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಮಾತನಾಡಲ್ಲ. ಬಿಜೆಪಿಯ ಅಗ್ರಮಾನ್ಯ ನಾಯಕ ಯಡಿಯೂರಪ್ಪ. ಅಂತಹವರನ್ನ ಷಡ್ಯಂತ್ರ ಮಾಡಿ ಎರಡು ಬಾರಿ ಇಳಿಸಿದರು ಎಂದು ಅಸಮಾಧಾನ ಹೊರಹಾಕಿದರು.
ಯಡಿಯೂರಪ್ಪರಂಥ ನಾಯಕರ ವಿರುದ್ಧ ಮಾತಾಡಿದರೆ ನೋಟಿಸ್ ಇಲ್ಲ. ಯಡಿಯೂರಪ್ಪ ನಮ್ಮ ನಾಯಕರು, ಗೌರವ ಕೊಡ್ತೀನಿ. ಗನ್ ಇಟ್ಟು ಯಡಿಯೂರಪ್ಪ ಹೇಳಿಸಿದ್ದಾರೆ ಅಂತಾ ಮಾತಾಡ್ತಾರೆ. ಅಂತಹ ಕೇಳುಮಟ್ಟಕ್ಕೆ ಯಡಿಯೂರಪ್ಪ ಹೋಗಿಲ್ಲ. ಹೀನಾಯ ಸ್ಥಿತಿಗೆ ಬಂದಿರೋದಕ್ಕೆ ಬಿಎಸ್‌ವೈಗೆ ನೋವಿದೆ. ಅವಮಾನ, ಅಪಮಾನ ಮಾಡಿದರು. ಪಾಪ ಗೌರವದಿಂದ ರಾಜೀನಾಮೆ ನೀಡಿದರು. ಅಲ್ಲಿಂದ ನಿರಂತರವಾಗಿ ಅವರ ವಿರುದ್ಧ ಅಪಪ್ರಚಾರ ಮಾಡ್ತಾರೆ ಎಂದು ಟೀಕಾಪ್ರಹಾರ ನಡೆಸಿದರು. ಇದನ್ನೂ ಓದಿ: ಅರ್ಜಿ ಹಾಕದಿದ್ರೆ ವಿದ್ಯುತ್ ಉಚಿತ ಇಲ್ಲ – ಸಚಿವ ಕೆ.ಜೆ.ಜಾರ್ಜ್
ನಿಮಗೆ ಅಪಮಾನ ಮಾಡಿದ್ರೆ ನಾನು ಸುಮ್ಮನಿರಲ್ಲ ಅಂತಾ ಯಡಿಯೂರಪ್ಪ ಅವರಿಗೆ ಹೇಳಿದ್ದೇನೆ. ಎಲ್ಲಾರೂ ಒಟ್ಟಾಗಿ ಹೋಗೋಣ ಅಂತಾ ಯಡಿಯೂರಪ್ಪ ಹೇಳಿದರು. ಬಿಎಸ್‌ವೈಗೆ ಎಲ್ಲ ಗೊತ್ತಿದೆ. ಮೋದಿ, ಬಿಎಸ್‌ವೈ ಮುಖ ನೋಡಿ ವೋಟ್ ಕೇಳಿದ್ದೇವೆ. ಮಾತಾಡುವವರ ಕೊಡುಗೆ ಏನು, ಸಂಘಟನೆ ಮಾಡಿದ್ದಾರಾ? ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಇನ್ಮುಂದೆ ಬಹಿರಂಗವಾಗಿ ಮಾತಾಡಬೇಡ ಅಂತಾ ಹೇಳಿದರು. ನಾನು ಯಡಿಯೂರಪ್ಪಗೆ ಗೌರವ ಕೊಡ್ತೀನಿ. ಕೇಂದ್ರದ ನಾಯಕರನ್ನ ಭೇಟಿ ಮಾಡಿ ಸೋಲಿಗೆ ಕಾರಣ ಯಾರು ಅಂತಾ ಹೇಳ್ತೀನಿ. ಕಾಂಗ್ರೆಸ್‌ಗೆ ಹೋಗ್ತಾರೆ ಅಂತಾ ಎಲ್ಲಿ ಸೃಷ್ಟಿ ಮಾಡಿದ್ರೋ ಗೊತ್ತಿಲ್ಲ. ನಾನು ಬಿಜೆಪಿ ಬಿಡಲ್ಲ. ನನ್ನ ಬಲಿಪಶು ಮಾಡಕ್ಕಾಗಲ್ಲ, ಟಾರ್ಗೆಟ್ ಮಾಡಕ್ಕಾಗಲ್ಲ. ಮೋದಿ, ಬಿಎಸ್‌ವೈ, ನನ್ನ ಕ್ಷೇತ್ರದ ಜನರ ಆಶೀರ್ವಾದ ಇದೆ ಎಂದು ಮಾತನಾಡಿದರು.
Web Stories