ದಾವಣಗೆರೆ: ನನ್ನ ತಮ್ಮನ ಮಗ ಕಿಡ್ನ್ಯಾಪ್ ಆಗಿದ್ದಾನೆ. ಯಾರೋ ಪ್ಲ್ಯಾನ್ ಮಾಡಿ ಈ ಕೆಲಸ ಮಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಆರೋಪಿಸಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೆಲ ದಿನಗಳಿಂದ ನನ್ನ ತಮ್ಮನ ಮಗ ಚಂದ್ರಶೇಖರ್‌ನನ್ನು ಹಿಂಬಾಲಿಸುತ್ತಿದ್ದರು. ಅವರೇ ಕಿಡ್ನ್ಯಾಪ್ ಮಾಡಿದ್ದಾರೆ. ಆದರೆ ಯಾವ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಅವರು ಉದ್ದೇಶ ಪೂರ್ವಕವಾಗಿಯೇ ಈ ರೀತಿ ಕೆಲಸ ಮಾಡಿದ್ದಾರೆ ಎಂದು ಸ್ಫೋಟಕ ಮಾಹಿತಿ ನೀಡಿದರು.
ಕ್ಷೇತ್ರದ ಜನರು ದೇವರನ್ನು ಕೇಳಿಸುವುದು, ದೇವರಿಗೆ ಪೂಜೆ ಮಾಡುವುದನ್ನೆಲ್ಲ ಮಾಡುತ್ತಿದ್ದಾರೆ. ಆದರೂ ಇಷ್ಟು ದಿನವಾದರೂ ಚಂದ್ರಶೇಖರ್ ಸುಳಿವು ಸಿಗದೇ ಇರುವುದು ಒಂದು ಕಡೆ ಅನುಮಾನ ಬರುತ್ತಿದೆ. ಆದರೆ ಪೊಲೀಸರ ತನಿಖೆ ಬಗ್ಗೆ ನಾನು ಆರೋಪ ಮಾಡುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತಮಾತೆ ವಿಧವೆಯಲ್ಲ – ಹಣೆಗೆ ಬೊಟ್ಟು ಇಡದ ಪತ್ರಕರ್ತೆಗೆ ಪ್ರತಿಭಟನಾಕಾರನಿಂದ ತರಾಟೆ
ಶಾಸಕ ಎಂ.ಪಿ ರೇಣುಕಾಚಾರ್ಯ (M.P Renukacharya) ಸಹೋದರನ ಪುತ್ರ ಕಳೆದ 4 ದಿನಗಳಿಂದ ನಾಪತ್ತೆಯಾಗಿರುವುದು ಈಗಾಗಲೇ ಭಾರೀ ಅನುಮಾನ ಹುಟ್ಟಿಸಿದೆ. ಚಂದ್ರಶೇಖರ್ (Chandrashekhar) ಕಾರು ಭಾನುವಾರ ಶಿವಮೊಗ್ಗ (Shivamogga) ಮೂಲಕ ಹೊನ್ನಾಳಿ ಕಡೆ ಬಂದಿತ್ತು. ಆದರೆ ಕಾರು ಹೊನ್ನಾಳಿ ತಲುಪಿಲ್ಲ ಅಂತ ಮೂಲಗಳು ತಿಳಿಸಿವೆ. ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ರೇಣುಕಾಚಾರ್ಯ ಸೋದರನ ಪುತ್ರ ನಾಪತ್ತೆ ಪ್ರಕರಣ- ಕಾರಿನಲ್ಲಿ ಹೋಗ್ತಿರೋ ಸಿಸಿಟಿವಿ ದೃಶ್ಯ ಲಭ್ಯ