ಚೆನ್ನೈ: ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಎಂ.ಕೆ.ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಸಾಮಾನ್ಯ ಸಮಿತಿ ಸಭೆಯಲ್ಲಿ ಪಕ್ಷದ ಕಾರ್ಯದರ್ಶಿ ಕೆ.ಅನ್ಬಳಗನ್ ಘೋಷಿಸಿದ್ದಾರೆ.
49 ವರ್ಷಗಳಿಂದ ಡಿಎಂಕೆ ಕರುಣಾನಿಧಿ ಅಧ್ಯಕ್ಷರಾಗಿದ್ದರು. ಅವರ ನಿಧನದ ನಂತರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ತಿಳಿಸಲಾಗಿತ್ತು. ಸ್ಟಾಲಿನ್‍ಗೆ ಪಕ್ಷದ 65 ಜನ ಜಿಲ್ಲಾ ಕಾರ್ಯದರ್ಶಿಗಳು ಬೆಂಬಲ ಸೂಚಿಸಿದ್ದರು. ಅಲ್ಲದೆ ಸ್ಟಾಲಿನ್ ಹೆಸರು ಹೆಚ್ಚಾಗಿ ಕೇಳಿಬರುತ್ತಿತ್ತು.
Advertisement
Advertisement
ಮಂಗಳವಾರ ಅರಿವಾಲಯಂನಲ್ಲಿರುವ ಡಿಎಂಕೆ ಕೇಂದ್ರ ಕಚೇರಿಯಲ್ಲಿ ಚುನಾವಣೆ ನಡೆಸಲಾಗಿತ್ತು. ಆಗ ಸ್ಟಾಲಿನ್ ಹೊರತಾಗಿ ಯಾರೊಬ್ಬರೂ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಸ್ಟಾಲಿನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
Advertisement
2017ರಲ್ಲಿ ಡಿಎಂಕೆ ನಾಯಕ ಕರುಣಾನಿಧಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಪಕ್ಷದ ಜವಾಬ್ದಾರಿಯನ್ನು ಕರುಣಾನಿಧಿ, ಸ್ಟಾಲಿನ್‍ಗೆ ನೀಡುವ ಮೂಲಕ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಿಸಿದ್ದರು. 2009ರಿಂದ ಸ್ಟಾಲಿನ್ ಪಕ್ಷದ ಖಜಾಂಚಿಯಾಗಿದ್ದರು. ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದ ತೆರುವುದಾದ ಖಜಾಂಚಿ ಹುದ್ದೆಗೆ ಎಸ್.ದೊರೆಮುರುಗನ್ ನೇಮಕಗೊಂಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಹೆಚ್ಚು ಸ್ಥಾನಗಳಲ್ಲಿ ಆಯ್ಕೆಯಾಗುವಂತೆ ಶ್ರಮಿಸುವ ಸವಾಲು ಸ್ಟಾಲಿನ್ ಮುಂದಿದೆ.
Advertisement
I feel honoured and grateful to have been elected as the President of the DMK party.
I pledge to protect, cherish and advance the four founding principles of our party: Self Respect, Social Justice, Rationalism and Secularism.
— M.K.Stalin (@mkstalin) August 28, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv