ಚಯನ್ ಶೆಟ್ಟಿ ನಿರ್ದೇಶನದ ‘ಅಧಿಪತ್ರ’ ಚಿತ್ರ ಫೆ. 7ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ 9ರ ವಿನ್ನರ್ ಆದ ಬಳಿಕ ನಾಯಕನಾಗಿ ನಟಿಸಿರುವ ಮೊದಲ ಕನ್ನಡ ಚಿತ್ರವಾಗಿಯೂ ‘ಅಧಿಪತ್ರ’ ಗಮನ ಸೆಳೆದುಕೊಂಡಿದೆ. ಈವರೆಗೂ ಟೈಟಲ್‌ನಿಂದಲೇ ಪ್ರೇಕ್ಷಕರನ್ನು ಆವರಿಸಿಕೊಂಡು ಗೆದ್ದು ಬೀಗಿದ ಸಿನಿಮಾಗಳ ಸಂಖ್ಯೆ ಸಾಕಷ್ಟಿದೆ. ‘ಅಧಿಪತ್ರ’ (Adhipatra) ಕೂಡ ಆ ಸಾಲಿಗೆ ಸೇರ್ಪಡೆಗೊಳ್ಳುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ಯಾಕೆಂದರೆ, ಈ ಸಿನಿಮಾ ಆರಂಭದ ಹಂತದಲ್ಲಿ ಸದ್ದು ಮಾಡಿದ್ದದ್ದು ಟೈಟಲ್‌ನ ಕಾರಣದಿಂದಲೇ. ಆಂಗ್ಲ ಭಾಷೆಯ ಟೈಟಲ್ ಇಡುವ ಟ್ರೆಂಡು ಚಾಲ್ತಿಯಲ್ಲಿರುವಾಗಲೇ, ಅರ್ಥವತ್ತಾದ, ಇಡೀ ಕಥೆಯ ಸಾರ ಬಚ್ಚಿಟ್ಟುಕೊಂಡಿರುವ ಟೈಟಲ್ ಅನ್ನು ನಿರ್ದೇಶಕರು ಅನ್ವೇಷಿಸಿದ್ದಾರೆ. ಈ ಚಿತ್ರದಲ್ಲಿ ಅನುಭವಿ ನಟರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ, ಥರ ಥರದ ಪಾತ್ರಗಳನ್ನು ನಿರ್ವಹಿಸಿರುವ ಎಂ.ಕೆ ಮಠ ಕೂಡ ಇಲ್ಲಿ ವಿಶೇಷ, ವಿಲಕ್ಷಣ ಚಹರೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ.
Advertisement
ನಿರ್ದೇಶಕ ಚಯನ್ ಶೆಟ್ಟಿ ಕಥೆ ಸೃಷ್ಟಿಸುವ ಹಂತದಲ್ಲಿಯೇ ಈ ಪಾತ್ರಕ್ಕೆ ಎಂ.ಕೆ ಮಠ (M. K Mata) ಸೂಕ್ತ ಎಂಬಂಥಾ ನಿರ್ಧಾರಕ್ಕೆ ಬಂದಿದ್ದರು. ಕಥೆಯೆಲ್ಲ ಸಿದ್ಧವಾದ ನಂತರ ಎಂ.ಕೆ ಮಠ ಅವರನ್ನು ಸಂಪರ್ಕಿಸಿದ್ದ ಚಯನ್ ಶೆಟ್ಟಿ ಎಲ್ಲವನ್ನೂ ವಿವರಿಸಿದ್ದರು. ಸದಾ ಹೊಸತನದ ಪಾತ್ರಗಳಿಗಷ್ಟೇ ತುಡಿಯುವ ಮನಃಸ್ಥಿತಿ ಹೊಂದಿರುವವರು ಮಠ. ಇಂಥಾದ್ದೇ ಪಾತ್ರವಿರಬೇಕು, ಅದಕ್ಕೆ ಪ್ರಾಧಾನ್ಯತೆ ಇರಲೇಬೇಕು ಎಂಬಂಥಾ ಯಾವ ಬೇಡಿಕೆಗಳೂ ಇಲ್ಲದೇ, ಪಾತ್ರ ಯಾವುದಿದ್ದರೂ ಪ್ರೇಕ್ಷಕರ ಮನಸಲ್ಲುಳಿಯುವಂತಿರಬೇಕು ಎಂಬುದು ಎಂ.ಕೆ ಮಠರ ಮೊದಲ ಆದ್ಯತೆ. ಅವರ ಪಾಲಿಗೆ ಚಯನ್ ವಿವರಿಸಿದ್ದ ಆ ಪಾತ್ರ ಒಂದೇ ಸಲಕ್ಕೆ ಇಷ್ಟವಾಗಿ ಹೋಗಿತ್ತು. ಈ ಕಾರಣದಿಂದಲೇ ಮರು ಮಾತಿಲ್ಲದೆ ಒಪ್ಪಿಗೆ ಸೂಚಿಸಿದ್ದರು. ಇದನ್ನೂ ಓದಿ:ಅಧಿಪತ್ರಕ್ಕಾಗಿ ಟಿಪಿಕಲ್ ಪತ್ರಕರ್ತರಾದ್ರು ಪ್ರಶಾಂತ್ ನಟನಾ!
Advertisement
Advertisement
ಆ ನಂತರದಲ್ಲಿ ಕಡಲ ತಡಿಯಲ್ಲಿ ನಡೆದ ಚಿತ್ರೀಕರಣದ ಅಷ್ಟೂ ಅನುಭವ ಮಠ ಅವರ ಪಾಲಿಗೆ ಹೊಸಾ ಜಗತ್ತನ್ನೇ ತರೆದಿಟ್ಟಿತ್ತು. ಇಲ್ಲಿ ಕಡಲ ಕಿನಾರೆಯ ಕಥನವಿದೆ. ಈವರೆಗೂ ಕಡಲೂರಿನಿಂದ ಕದಲಿಕೊಳ್ಳುವ ಒಂದಷ್ಟು ಸಿನಿಮಾಗಳು ಬಂದಿವೆ. ಸ್ವತಃ ಎಂ.ಕೆ ಮಠ ಅಂಥಾ ಸಿನಿಮಾಗಳಲ್ಲಿ ಪಾತ್ರವಾಗಿದ್ದಾರೆ. ಆದರೆ, ನವ ನಿರ್ದೇಶಕ ಚಯನ್ ಶೆಟ್ಟಿ ಈ ಕಥೆಯನ್ನು ರೂಪಿಸಿರುವ ರೀತಿ, ಸೃಷ್ಟಿಸಿರುವ ಪಾತ್ರಗಳು, ಕಲಾವಿದರಿಂದ ಕೆಲಸ ತೆಗೆಸಿಕೊಳ್ಳುವ ಬಗೆ, ಹೊಸಬರೆಂಬುದನ್ನೇ ಮರೆಸುವಂಥಾ ಕಸುಬುದಾರಿಕೆಯೆಲ್ಲ ಮಠ ಅವರ ಮನಸೆಳೆದಿದೆ. ಜೊತೆಗೆ ಈ ಸಿನಿಮಾದ ನಾಯಕ ರೂಪೇಶ್ ಶೆಟ್ಟಿಯವರ ಸ್ನೇಹಶೀಲ ಗುಣವೂ ಎಂ.ಕೆ ಮಠರನ್ನು ಮತ್ತೆ ತಾಕಿದೆ. ಈ ಚಿತ್ರದಲ್ಲಿ ವಿಲಕ್ಷಣ ಛಾಯೆಯಿರುವ ಪಾತ್ರ ಮಠರಿಗೆ ಸಿಕ್ಕಿದೆ. ಆ ಪಾತ್ರದ ಗುಣಲಕ್ಷಣಗಳೇನೆಂಬುದು ದಿನದೊಪ್ಪತ್ತಿನಲ್ಲಿ ಪ್ರೇಕ್ಷಕರ ಮುಂದೆ ತೆರೆದುಕೊಳ್ಳಲಿದೆ.
Advertisement
ಹೀಗೆ ಸಿದ್ಧಗೊಂಡಿರುವ ಈ ಸಿನಿಮಾ ಒಂದು ಅಪರೂಪದ ಅನುಭೂತಿಯನ್ನು ಪ್ರೇಕ್ಷಕರಿಗೆಲ್ಲ ಕೊಡಮಾಡಲಿದೆ ಎಂಬ ತುಂಬು ನಂಬಿಕೆ ಎಂ.ಕೆ ಮಠ ಅವರಲ್ಲಿದೆ. ಹೀಗೆ ಪಾತ್ರವಾದ ಪ್ರತೀ ಕಲಾವಿದರೊಳಗೂ ಭಿನ್ನ ಅನುಭವ, ಗೆಲುವಿನ ಭರವಸೆ ತುಂಬಿರುವ ಈ ಸಿನಿಮಾ ತೆರೆಗಾಣಲು ದಿನಗಣನೆ ಶುರುವಾಗಿದೆ. ಕೆಆರ್ ಸಿನಿ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅಧಿಪತ್ರ ನಿರ್ಮಾಣಗೊಂಡಿದೆ. ರೂಪೇಶ್ ಶೆಟ್ಟಿ, ಜಾನ್ವಿ, ಎಂ.ಕೆ ಮಠ, ಪ್ರಕಾಶ್ ತುಮಿನಾಡು, ದೀಪಕ್ ರೈ, ಪ್ರಶಾಂತ್ ನಟನಾ, ರಘು ಪಾಂಡೇಶ್ವರ ಮುಂತಾದವರ ತಾರಾಗಣವಿದೆ. ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಶ್ರೀಕಾಂತ್ ಅವರೇ ಸಂಕಲನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.