ಬೆಂಗಳೂರು: ಪರಿಷತ್ ಸ್ಥಾನ ವಂಚಿತ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಚಿಂಥನ-ಮಂಥನದಲ್ಲಿ ಮುಕ್ತ ಚರ್ಚೆಗೆ ಮೊದಲ ಆದ್ಯತೆ ಕೊಡಿ ಎಂದು ಮನವಿ ಮಾಡಿದ್ದಾರೆ.
ಹೈಕಮಾಂಡ್ ನಾಯಕರಿಗೆ ಪ್ರಶ್ನೆಗಳನ್ನು ಮುಂದಿಟ್ಟಿರುವ ಸ್ಥಾನ ವಂಚಿತರು. ಚಿಂತನ-ಮಂಥನ ಸಭೆಯಲ್ಲಿ 6 ಪ್ರಶ್ನೆಗಳ ಮೇಲೆ ಚರ್ಚೆಗೆ ಅವಕಾಶ ಕೊಡಿ ಎಂದು ಎಂ.ಡಿ.ಲಕ್ಷ್ಮೀನಾರಾಯಣ್ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಪ್ರವೇಶಿಸುವಂತಿಲ್ಲ – ವೈರಲ್ ಆಯ್ತು ಬ್ಯಾನರ್
Advertisement
Advertisement
ಪ್ರಶ್ನೆಗಳೇನು?
1. ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಚುನಾವಣೆ ಸಮಿತಿ ಇದೆಯೇ?
2. ಇದ್ದಲ್ಲಿ ವಿಧಾನ ಪರಿಷತ್ ಚುನಾವಣೆಗೆ ಎಷ್ಟು ಸಭೆಗಳನ್ನು ನಡೆಸಲಾಯಿತು. ಯಾವ ಮಾನದಂಡವನ್ನು ಅನುಸರಿಸಿ ಆಯ್ಕೆ ಮಾಡಲಾಗಿದೆ.
3. ಅಪೇಕ್ಷೀತರ ಪಟ್ಟಿಯಲ್ಲಿ ಎಷ್ಟು ಜನರ ಹೆಸರನ್ನು ಎಐಸಿಸಿಗೆ ಶಿಫಾರಸ್ಸು ಮಾಡಲಾಯಿತು.
4. ಕೆಪಿಸಿಸಿ ಅಧ್ಯಕ್ಷರು, ಸಿದ್ದರಾಮಯ್ಯ ಶಿಫಾರಸ್ಸು ಮಾಡಿ ನೀಡಿದ ಪಟ್ಟಿಯಲ್ಲಿರುವ ಹೆಸರುಗಳನ್ನು ತಿರಸ್ಕಾರ ಮಾಡಲು ಕಾರಣವೇನು? ತೀರ್ಮಾನಿಸಿ ಪಟ್ಟಿಯನ್ನು ತಿರಸ್ಕಾರ ಮಾಡಿದ್ದು ಸರಿಯೇ?
5. ತಿರಸ್ಕಾರ ಮಾಡಿದ ನಂತರ ಯಾವ ಹೆಸರುಗಳನ್ನು ನೀಡಲಾಯಿತು?
6. ಕೊನೆಗಳಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರು ನೀಡಿದ ಹೆಸರುಗಳನ್ನು ಕೈಬಿಟ್ಟು ಬೇರೆಯವರು ಸೂಚಿಸಿದ ಹೆಸರುಗಳನ್ನು ಎಐಸಿಸಿ ಅನುಮೋದನೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.
Advertisement
Advertisement
ಕೆಪಿಸಿಸಿ ಅಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರ ಗೌರವಕ್ಕೆ ಚ್ಯುತಿ ಬಂದಂತಾಗಿದೆ. ಈ ಬಗ್ಗೆ ಚರ್ಚೆಯಾಗಲಿ ಎಂದು ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.