ಬೆಂಗಳೂರು: ಅಚಾತುರ್ಯದಿಂದ ಬಳ್ಳಾರಿಯಲ್ಲಿ ಘಟನೆ ಆಗಿದ್ದು, ಯಾರನ್ನು ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಈಗ ವಾತಾವರಣ ತಿಳಿಯಾಗಿದೆ ಎಂದು ಸಚಿವ ಡಾ. ಸುಧಾಕರ್ (Dr. M.C.Sudhakar) ತಿಳಿಸಿದ್ದಾರೆ.
ಬಳ್ಳಾರಿ ಗಲಾಟೆ (Ballary Clash) ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಳ್ಳಾರಿ ಗಲಾಟೆ ಬಗ್ಗೆ ಮಾಹಿತಿ ಸಿಕ್ಕಿದೆ. ಫ್ಲೆಕ್ಸ್ ವಿಚಾರಕ್ಕೆ ಗಲಾಟೆ ಆಗಿ ಘರ್ಷಣೆ ಆಗಿದೆ. ಗನ್ ಮ್ಯಾನ್ ಮುಂಜಾಗ್ರತಾ ಕ್ರಮವಾಗಿ ಫೈಯರ್ ಮಾಡಿದ್ದಾರೆ. ಈ ಸಮಯದಲ್ಲಿ ಆ ಗುಂಡು ತಗುಲಿ ಕಾರ್ಯಕರ್ತ ಸತ್ತಿದ್ದಾನೆ. ಗಂಭೀರವಾಗಿ ಸಿಎಂ ಚರ್ಚೆ ಮಾಡ್ತಾ ಇದ್ದಾರೆ. ಯಾಕೆ ಆಯ್ತು, ಏನು ಅಂತ ತನಿಖೆ ಮಾಡ್ತಾ ಇದ್ದಾರೆ. ನಾಳೆ ನಡೆಯಬೇಕಾದ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ. ಸದ್ಯಕ್ಕೆ ವಾತಾವರಣ ತಿಳಿಯಾಗಿದೆ. ಘಟನೆ ಆಗಬಾರದಿತ್ತು. ಎಲ್ಲರೂ ತಾಳ್ಮೆಯಿಂದ ಇರಬೇಕಿತ್ತು. ಫ್ಲಕ್ಸ್ ವಿಚಾರಕ್ಕೆ ಇಷ್ಟು ಗಲಾಟೆ ಅವಶ್ಯಕತೆ ಇರಲಿಲ್ಲ. ಘಟನೆ ಆಗಿದೆ. ಇದರಿಂದ ಎಲ್ಲರಿಗೂ ನೋವಾಗಿದೆ ಎಂದರು. ಇದನ್ನೂ ಓದಿ: ರೆಡ್ಡಿಯ ಮನೆ ಕಾಂಪೌಂಡ್ ಒಳಗೆ ನುಗ್ಗಿ ಫ್ಲೆಕ್ಸ್ ಹಾಕಿಸಿದ್ದಾರೆ, ಕೈ ಕಾರ್ಯಕರ್ತನ ಸಾವಿಗೆ ಭರತ್ ರೆಡ್ಡಿ ಕಾರಣ: ಅಶೋಕ್
ಜನಾರ್ದನ ರೆಡ್ಡಿ ಹತ್ಯೆಗೆ ಇದು ಸಂಚು ಎಂಬ ಅಶೋಕ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಅಚಾತುರ್ಯದಿಂದ ಆಗಿರೋ ಘಟನೆ. ಯಾರನ್ನು ಹತ್ಯೆ ಮಾಡೋ ಉದ್ದೇಶ ಅಲ್ಲ. ಗೊಂದಲ ಆದಾಗ ಶಾಸಕರ ಗನ್ ಮ್ಯಾನ್ ಫೈಯರ್ ಮಾಡಿದ್ದಾರೆ. ಆ ಸಮಯದಲ್ಲಿ ಇದು ಆಗಿದೆ. ಯಾರನ್ನು ಗುರಿಯಾಗಿಸಿ ಫೈಯರ್ ಮಾಡಿಲ್ಲ. ಯಾರನ್ನು ಹತ್ಯೆ ಮಾಡೋ ಉದ್ದೇಶ ಇಲ್ಲ ಎಂದು ಹೇಳಿದರು.
ರಾಮುಲು-ರೆಡ್ಡಿ ಒಂದಾಗಿರೋದು ಕಾಂಗ್ರೆಸ್‌ಗೆ ಸಹಿಸೋಕೆ ಆಗ್ತಿಲ್ಲ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ರೆಡ್ಡಿ-ರಾಮುಲು ಮನಪೂರ್ವಕವಾಗಿ ಒಂದಾಗಿಲ್ಲ. ಮೇಲ್ನೋಟಕ್ಕೆ ಒಂದಾಗಿದ್ದಾರೆ. ಅವರು ಒಂದಾದರೂ ಕಾಂಗ್ರೆಸ್‌ಗೆ ಸಮಸ್ಯೆ ಇಲ್ಲ. ಬಳ್ಳಾರಿಯಲ್ಲಿ ಕಾಂಗ್ರೆಸ್ ಅವರ ವಿರುದ್ಧ ನಿರಂತರವಾಗಿ ಹೋರಾಟ ಮಾಡಿಕೊಂಡೇ ಬಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜನಾರ್ದನ ರೆಡ್ಡಿ ಒಬ್ಬ ನೀಚ, ರಾಕ್ಷಸ: ಏಕವಚನದಲ್ಲೇ ಭರತ್ ರೆಡ್ಡಿ ವಾಗ್ದಾಳಿ

