ಭೋಪಾಲ್: ಲವರ್ (Girl Friend) ಕೈಕೊಟ್ಟಿದ್ದಕ್ಕೆ ಆ ದ್ವೇಷ ತೀರಿಸಿಕೊಳ್ಳಲು ಯುವಕನೊಬ್ಬ ಚಾಯ್ ಅಂಗಡಿ ತೆಗೆದು ಎಂ ಬೇವಾಫಾ ಚಾಯ್‍ವಾಲಾ ಎಂದು ಹೆಸರಿಟ್ಟ ವಿಚಿತ್ರ ಘಟನೆ ಮಧ್ಯಪ್ರದೇಶದ (Madhya Pradesh) ರಾಜ್‍ಗಢ್‍ನಲ್ಲಿ ನಡೆದಿದೆ.
ಅಂತರ್ ಗುಜ್ಜಾರ್ ಎಂಬಾತ ತನ್ನ ಮಾಜಿ ಪ್ರೇಯಸಿಯು ತನಗೆ ದ್ರೋಹ ಬಗೆದಿದ್ದಾಳೆ ಎಂಬ ಸಿಟ್ಟಿನಿಂದ ಖಲ್ಚಿಪುರ್ ನಗರದ ಬಸ್ ನಿಲ್ದಾಣದ ಬಳಿ ಚಹಾದ ಅಂಗಡಿಯನ್ನು ತೆರೆದಿದ್ದಾನೆ. ಅದಕ್ಕೆ ಎಂ ಬೇವಾಫಾ ಚಾಯ್‍ವಾಲ್ (M Bewafa Chaiwala) ಎಂದು ಹೆಸರಿಟ್ಟಿದ್ದಾನೆ. ಎಂ ಎಂದರೆ ಅಂತರ್‌ನ ಮಾಜಿ ಪ್ರೇಯಸಿಯ ಹೆಸರಿನ ಮೊದಲ ಅಕ್ಷರವಾಗಿದೆ. ಬೇವಫಾ ಎಂದರೆ ವಿಶ್ವಾಸದ್ರೋಹ ಎಂದಾಗಿದ್ದು, ʼಎಂ ವಿಶ್ವಾಸದ್ರೋಹಿ ಚಹಾದ ಅಂಗಡಿʼ ಎಂಬುದು ಕನ್ನಡದಲ್ಲಿ ಅಂಗಡಿಯ ಹೆಸರಾಗಿದೆ.
Advertisement
Advertisement
ಅಂತರ್‌ಗೆ ಐದು ವರ್ಷಗಳ ಹಿಂದೆ ಸಂಬಂಧಿಕರೊಬ್ಬರ ಮದುವೆಯಲ್ಲಿ ಹುಡುಗಿಯೊಬ್ಬಳ ಪರಿಚಯವಾಗಿತ್ತು. ಅದಾದ ಬಳಿಕ ಅವರಿಬ್ಬರು ಸ್ನೇಹಿತರಾಗಿದ್ದು, ಆ ಸ್ನೇಹವೇ ಮುಂದೆ ಪ್ರೀತಿಗೆ ತಿರುಗಿತ್ತು. ಸುಮಾರು 2 ವರ್ಷಗಳ ಕಾಲ ಸಂಬಂಧದಲ್ಲಿದ್ದರಿಂದ ಅಂತರ್ ಆ ಹುಡುಗಿಯ ಬಳಿ ಮದುವೆ (Marriage) ಪ್ರಸ್ತಾಪವನ್ನು ಇಟ್ಟಿದ್ದಾನೆ. ಆದರೆ ಆಕೆ ಆ ಪ್ರಸ್ತಾಪವನ್ನು ತಿರಸ್ಕರಿಸಿ ಇನ್ನೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಳು. ಅಷ್ಟೇ ಅಲ್ಲದೇ ಅಂತರ್‌ನಿಗೆ ನೀನು ನಿರುದ್ಯೋಗಿ, ನನ್ನ ವರನ ಬಳಿ ಎಲ್ಲವೂ ಇದೆ ಎಂದು ಹೇಳಿ ಅಂತರ್ ಅನ್ನು ಹೀಯಾಳಿಸಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು.
Advertisement
ಇದಾದ ಬಳಿಕ ಪ್ರೇಯಸಿ ಕೈಕೊಟ್ಟಿದ್ದರಿಂದ ಡಿಪ್ರೆಶನ್‌ಗೆ ಒಳಗಾದ ಅಂತರ್ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದನು. ಆದರೆ ಆತನ ಸ್ನೇಹಿತರು ಧೈರ್ಯದ ಮಾತುಗಳು ಅವರ ಮಾರ್ಗದರ್ಶನವು ಅಂತರ್‌ಗೆ ಡಿಪ್ರೆಶನ್‌ನಿಂದ ಹೊರಬರಲು ಸಾಧ್ಯವಾಯಿತು. ಇದಾದ ನಂತರ ತನ್ನ ಮಾಜಿ ಗೆಳತಿಯ ಮೇಲಿನ ದ್ವೇಷವನ್ನು ತೀರಿಸಿಕೊಳ್ಳಲು ಸಿದ್ಧನಾಗಿ, ಆಕೆಯ ಹೆಸರ ಮೊದಲ ಅಕ್ಷರವನ್ನು ಬಳಸಿಕೊಂಡು ಅವಳನ್ನು ಕೀಟಲೆ ಮಾಡಲು ಚಹಾ ಅಂಗಡಿಯನ್ನು ತೆರೆದಿದ್ದಾನೆ. ಇದನ್ನೂ ಓದಿ: ಶ್ರದ್ಧಾ ಕೊಲೆ ಆಕಸ್ಮಿಕ, ಇದರಲ್ಲಿ ಹೊಸದೇನಿಲ್ಲ- ಅಶೋಕ್ ಗೆಹ್ಲೋಟ್ ವಿವಾದಿತ ಹೇಳಿಕೆಗೆ ಬಿಜೆಪಿ ಕಿಡಿ
Advertisement
ಈ ಚಾಯ್ ಅಂಗಡಿಯಲ್ಲಿ ಅಂತರ್ ವಿಭಿನ್ನ ರೀತಿಯಲ್ಲಿ ದರ ಫಿಕ್ಸ್ ಮಾಡಿದ್ದಾನೆ. ಈತ ದಂಪತಿ ಬಳಿ ಚಹಾಕ್ಕೆ 10 ರೂ. ತೆಗೆದುಕೊಂಡರೆ, ಇನ್ನೂ ಲವ್ ಫೇಲ್ ಆದವರ ಬಳಿ ಅಥವಾ ಹುಡುಗಿ ಕೈಕೊಟ್ಟವರ ಬಳಿ ಒಂದು ಚಹಾಕ್ಕೆ ಕೇವಲ 5 ರೂ. ತೆಗೆದುಕೊಳ್ಳುತ್ತಿದ್ದಾನೆ. ಇದನ್ನೂ ಓದಿ: ಮಾನ, ಮರ್ಯಾದೆ ಇದ್ದರೆ ಡಿಕೆಶಿ ರಾಜೀನಾಮೆ ನೀಡಲಿ: ಈಶ್ವರಪ್ಪ