ಬೆಂಗಳೂರು: ನನಗೆ ಹೇಳೋಕೆ ಇರ‍್ಯಾರು? ನಿಮ್ಮ ಉದ್ದೇಶವೇನು? ನನ್ನ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ತಪ್ಪು ಸಂದೇಶ ಕೊಡೋಕೆ ಹೊರಟಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ (Shivanand Patil) ವಿರುದ್ಧ ಸಚಿವ ಎಂ.ಬಿ ಪಾಟೀಲ್ (MB Patil) ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಮಾತನಾಡಿದ್ದ ಶಿವಾನಂದ ಪಾಟೀಲ್ ರಾಜೀನಾಮೆ ಕೊಟ್ಟ ವಿಚಾರವಾಗಿ ಮಾತನಾಡಿ, ಬಸವಣ್ಣ ಅವರು ಜನ್ಮತಾಳಿದ ನಾಡಿನಲ್ಲಿ ಈ ರೀತಿ ಅಶ್ಲೀಲ ಪದ ಬಳಕೆ ಸರಿಯಲ್ಲ. ನಾನು ಹೇಳ್ತೀನಿ ಈ ರೀತಿ ಅಶ್ಲೀಲ ಪದ ಬಳಸಿ ಮಾತಾಡೋದು ತಪ್ಪು. ಮೊಹಮ್ಮದ್ ಪೈಗಂಬರ್ ಬಗ್ಗೆ ಹೇಳಿಕೆ ಕೊಟ್ಟಿದ್ದು ತಪ್ಪು ಎಂದು ಮೊನ್ನೆ ಕೂಡ ಹೇಳಿದ್ದೆ. ಅದಾದ ಬಳಿಕ ನಡೆದ ಮುಸ್ಲಿಮರ ಸಭೆಗಳಲ್ಲಿಯೂ ಅಶ್ಲೀಲ ಪದ ಬಳಕೆ ಮಾಡಿದ್ದರು. ಇದಕ್ಕೆಲ್ಲ ಮೂಲ ಕಾರಣ ಯತ್ನಾಳ್ ಅವರು. ಯತ್ನಾಳ್ ನೀವು ಅಭಿವೃದ್ಧಿ ಬಗ್ಗೆ ಸವಾಲು ಹಾಕಿ ಈ ರೀತಿ ತಂದೆ, ತಾಯಿ ಎಂದು ಮಾತನಾಡುವುದು ತಪ್ಪು ಎಂದು ಹೇಳಿದರು.ಇದನ್ನೂ ಓದಿ: ಕರಾವಳಿಯಲ್ಲಿ ಕೋಮುಗಲಭೆ ನಿಗ್ರಹ ಪಡೆ ರಚನೆ: ಸಚಿವ ಪರಮೇಶ್ವರ್ ಘೋಷಣೆ
ಇದೇ ಶಿವಾನಂದ್ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೂ ಗೊತ್ತಿತ್ತು. ಅಂದು ಬೆಳಗಾವಿಯಲ್ಲಿ ನಮ್ಮ ಪಕ್ಷದ ಪ್ರತಿಭಟನೆ ಇತ್ತು. ಗೊತ್ತಿದ್ದರೂ ಕೂಡ ಎಂಬಿ ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವರು ಸಭೆಗೆ ಬರಬೇಕು ಎನ್ನುವುದು ತಪ್ಪು. ಇದನ್ನು ನಾನು ಪಕ್ಷದ ವರಿಷ್ಠರು, ಹೈಕಮಾಂಡ್ ಅಧ್ಯಕ್ಷರು ಹಾಗೂ ಸಿಎಂ ಗಮನಕ್ಕೆ ತರುತ್ತೇನೆ. ನನಗೆ ಹೇಳೋಕೆ ಇರ‍್ಯಾರು? ನಿಮ್ಮ ಉದ್ದೇಶವೇನು? ನನ್ನ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ತಪ್ಪು ಸಂದೇಶ ಕೊಡೋಕೆ ಹೊರಟಿದ್ದಾರೆ. ಇದಕ್ಕೂ ಮೊದಲು ನಮ್ಮ ತಂದೆ ಅವರು ಶಾಸಕರಾಗಿದ್ದಾಗ ಮುಸ್ಲಿಂ ಸಮುದಾಯದ ಪರವಾಗಿ ತುಂಬಾ ಕೆಲಸ ಮಾಡಿದ್ದಾರೆ. ಇವಾಗ ನಾನು ಶಾಸಕ ಆಗಿದೀನಿ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಇವರೇ ಯತ್ನಾಳ್ ಅವರಿಗೆ ನಮ್ಮನ್ನು ಹಾಡಿ ಹೊಗಳುವಂತೆ ಕಲಿಸಿದ್ದು, ಅವರಿಗೆ ಪುಷ್ಟಿ ಕೊಟ್ಟು ಮಾತನಾಡಲು ಕಲಿಸಿದ್ದು ಇವರೇ. ಅವರು ನನ್ನ ಹೆಸರನ್ನು ಪ್ರಸ್ತಾಪಿಸಿದ ಕಾರಣ ನಾನು ಇದನ್ನು ಮಾತನಾಡುತ್ತಿದ್ದೇನೆ. ಆ ದಿನ ನಾನು ಮುಸ್ಲಿಮರ ಪ್ರತಿಭಟನೆಗೆ ಹೋಗಿರಲಿಲ್ಲ. ಅದಕ್ಕೂ ಹಿಂದೆ ನಾನು ಅವರಿಗೆ ಭೇಟಿ ನೀಡಿ, ಬರದೇ ಇರುವ ಬಗ್ಗೆ ತಿಳಿಸಿದ್ದೆ. ಜೊತೆಗೆ ನನ್ನ ಸಹೋದರನನ್ನ ಕಳುಹಿಸಿದ್ದೆ. ನಾನು ನನ್ನ ಸಹೋದರ ಒಂದೇ ಪಕ್ಷದಲ್ಲಿದ್ದೀವಿ, ನಾವು ಬೇರೆಯವರ ಥರ ಅಲ್ಲ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಒಂದೇ ದಿನ 30,000ಕ್ಕೂ ಹೆಚ್ಚು ಜನರಿಂದ ಕೇದಾರನಾಥನ ದರ್ಶನ
ಶಿವಾನಂದ ಪಾಟೀಲ್ ಅವರೇ ಈ ರೀತಿ ಮಾಡಬೇಡಿ, ಒಂದೇ ಪಕ್ಷದಲ್ಲಿ ಇದ್ದೀವಿ. ಒಟ್ಟಿಗೆ ಯತ್ನಾಳ್ ವಿರುದ್ಧ ಹೋರಾಡೋಣ. ತಕ್ಕ ಪಾಠ ಕಲಿಸೋಣ ಎಂದು ಹೇಳಿದರು.
ಇದೇ ವೇಳೆ ಕೇಂದ್ರದ ಜಾತಿ ಜನಗಣತಿ ವಿಚಾರವಾಗಿ ಮಾತನಾಡಿ, ಬಿಹಾರ ಚುನಾವಣೆ ಸಲುವಾಗಿ ಜಾತಿ ಜನಗಣತಿ ಘೋಷಣೆ ಮಾಡಿದ್ದಾರೆ. ಬಿಹಾರ ಚುನಾವಣೆಯಲ್ಲಿ ಮತಗಳ ಆಸೆಗಾಗಿ ಘೋಷಣೆ ಮಾಡಿದ್ದಾರೆ. ಜಾತಿಗಣತಿ ಮಾಡುವ ಬಗ್ಗೆ 2014ರಿಂದ ಇಲ್ಲಿ ತನಕ ಯಾಕೆ ನಿರ್ಧಾರ ಮಾಡಿರಲಿಲ್ಲ? ರಾಹುಲ್ ಗಾಂಧಿ ಯಾವಾಗ ಹೋರಾಟ ಮಾಡಿದರೋ ಅವರ ಒತ್ತಾಯಕ್ಕೆ ಮಣಿದಿದೆ. ಕೇಂದ್ರ ಸರ್ಕಾರದ ಗಣತಿಯಲ್ಲಿ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಆಗುವುದಿಲ್ಲ ಕೇವಲ ಜಾತಿಗಣತಿ ಮಾತ್ರ ಆಗುತ್ತದೆ. ನಮ್ಮ ರಾಜ್ಯದ ಗಣತಿ ಬಗ್ಗೆ ಕ್ಯಾಬಿನೆಟ್‌ನಲ್ಲಿ ಇದೇ 9ನೇ ತಾರೀಖು ಚರ್ಚೆ ಮಾಡುತ್ತೇವೆ. ನಾವೆಲ್ಲ ಲಿಂಗಾಯತ ಸಚಿವರು ಒಗ್ಗಟ್ಟಾಗಿದ್ದೇವೆ, ಬಹಳಷ್ಟು ಸಮಸ್ಯೆಗಳಿವೆ ಅದೆಲ್ಲವನ್ನೂ ಕ್ಯಾಬಿನೆಟ್‌ನಲ್ಲಿ ಒಂದೇ ವಾಯ್ಸ್ನಲ್ಲಿ ಮಾತಾಡುತ್ತೇವೆ. ಸಣ್ಣ ಸಣ್ಣ ಸಮುದಾಯಗಳು ಬಹಳಷ್ಟು ಇವೆ. ಅವುಗಳನ್ನು ಮಾತಾಡಿಸುವವರಿಲ್ಲ ಅವರಿಗೂ ನ್ಯಾಯ ಸಿಗಬೇಕು ಎಂದರು.ಇದನ್ನೂ ಓದಿ: ಜೂ.10ರ ಒಳಗೆ ಸಿದ್ದರಾಮಯ್ಯ ಒಳಮೀಸಲಾತಿ ಘೋಷಣೆ ಮಾಡಬೇಕು: ಗೋವಿಂದ ಕಾರಜೋಳ