ಬೆಂಗಳೂರು: ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ (M.B Patil) ದಾವೋಸ್ ಸಮ್ಮೇಳನಕ್ಕೆ (Davos World Economic Forum 2025) ಹೋಗಬೇಕು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಎಂ.ಬಿ ಪಾಟೀಲ್ ಅವರು ದಾವೋಸ್ ಸಮ್ಮೇಳನಕ್ಕೆ ಹೋಗಬೇಕು. ಅವರು ಹೋಗದೇ ಇರೋದು ಸರಿಯಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ನಷ್ಟ ಆಗುತ್ತದೆ. ಕೈಗಾರಿಕೆ ಬಾರದೇ ಹೋದರೆ ಉದ್ಯೋಗ ಸೃಷ್ಟಿ ಆಗೋದಿಲ್ಲ. ಇದರಿಂದ ರಾಜ್ಯಕ್ಕೆ ಬಹಳ ನಷ್ಟ ಆಗಲಿದೆ ಎಂದು ಬೇಸರ ವ್ಯಕ್ತಪಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಸ್ಟ್ರಾಂಗ್ ಇದೆ, ಆದಷ್ಟು ಬೇಗ ಬಿಜೆಪಿ ಕಿತ್ತಾಟಕ್ಕೆ ಅಂತ್ಯ: ಮುರುಗೇಶ್ ನಿರಾಣಿ
Advertisement
Advertisement
ಜಗತ್ತಿನ ದೊಡ್ಡ ದೊಡ್ಡ ಕೈಗಾರಿಕೆಗಳು ಅಲ್ಲಿಗೆ ಬಂದಿರುತ್ತವೆ. ಜಗತ್ತಿನಲ್ಲಿ ಯಾವುದೇ ಸಮ್ಮೇಳನ ನಡೆದರೂ ಹೋಗಿ ಕರ್ನಾಟಕದ ಬಗ್ಗೆ ಅಲ್ಲಿ ಮಾಹಿತಿ ಕೊಡಬೇಕು. ನಮ್ಮ ಸರ್ಕಾರ ಇದ್ದಾಗ ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಟಾಪ್ 3ನೇ ಸ್ಥಾನದಲ್ಲಿ ಇತ್ತು. ಇವತ್ತು ರಾಜ್ಯ ಡಬಲ್ ಡಿಜಿಟ್‌ಗೆ ತಲುಪಿದೆ. ಇದಕ್ಕೆ ಕಾಂಗ್ರೆಸ್ ಕಾರಣ. ಸಚಿವರು ಕಾರಣ ಎಂದು ಕಾಂಗ್ರೆಸ್ (Conress) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಎರಡು ಲಕ್ಷಕ್ಕೆ 25 ಲಕ್ಷ.. ಮೀಟರ್ ಬಡ್ಡಿ ದಂಧೆಯಲ್ಲಿ ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ