ಬೆಂಗಳೂರು: ಸಚಿವರ ಮೌಲ್ಯ ಮಾಪನದ ಬಗ್ಗೆ ಪಕ್ಷದ (Congress) ವೇದಿಕೆಯಲ್ಲಿ ಚರ್ಚೆ ನಡೆದಿಲ್ಲ ಎಂದು ಸಚಿವ ಎಂ.ಬಿ ಪಾಟೀಲ್ (M.B Patil) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ನಡೆದ ಸಭೆ ಕೇವಲ ಎರಡೇ ನಿಮಿಷದಲ್ಲಿ ಮುಗಿದಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾಕೆ ಹಿನ್ನಡೆಯಾಗಿದೆ ಎಂದು ರಾಹುಲ್ ಗಾಂಧಿಯವರಿಗೆ (Rahul Gandhi) ಸುರ್ಜೇವಾಲಾ ಅವರು ತಿಳಿಸಿದ್ದಾರೆ. ಯಾಕೆ ಎಂದು ವಿವರವಾಗಿ ವಿಮರ್ಶೆ ಮಾಡಿ ಎಂದು ಕೇಳಿದರು. ರಾಜ್ಯದಲ್ಲಿ ಪಕ್ಷಕ್ಕೆ ಯಾಕೆ ಹಿನ್ನಡೆಯಾಗಿದೆ? ಮುಂದೆ ಹೇಗೆ ಇರಬೇಕು? ಎಂಬ ಬಗ್ಗೆ ನಾವೇ ಆತ್ಮಾವಲೋಕನ ಮಾಡುತ್ತೇವೆ ಎಂದು ಅವರಿಗೆ ತಿಳಿಸಿದ್ದೇವೆ. ಇದರಲ್ಲಿ ಸಚಿವರ ಮೌಲ್ಯ ಮಾಪನ ಎಂಬುದು ಏನಿಲ್ಲ. ಆ ರೀತಿಯಾದ ಚರ್ಚೆ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಸು ಸೋಲಿಗೆ ಸಿದ್ದರಾಮಯ್ಯ & ಟೀಂ ಕಾರಣ: ಹೊಸ ಬಾಂಬ್ ಸಿಡಿಸಿದ ಸುರೇಶ್ ಗೌಡ
Advertisement
Advertisement
ಸಚಿವ ಶರಣಪ್ರಕಾಶ್ ಪಾಟೀಲ್ (Sharanprakash Patil) ವಿರುದ್ಧದ ಆರೋಪದ ವಿಚಾರವಾಗಿ, ಅವರು ಅಪ್ಪಟ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ಅವರು ಸಾಕ್ಷಿ ನಾಶ ಮಾಡುವ, ಭ್ರಷ್ಟಾಚಾರ ಮಾಡುವಂತಹ ವ್ಯಕ್ತಿಯಲ್ಲ. ಆ ಎಂ.ಡಿ ವಂಚಕ, ನಾಳೆ ಎಲ್ಲರ ಹೆಸರೂ ಹೇಳ್ತಾನೆ. ಇದರಲ್ಲಿ ಶರಣಪ್ರಕಾಶ್ ಪಾಟೀಲ್ ಹೆಸರು ತರೋದು ಬೇಡ ಎಂದು ಅವರು ಹೇಳಿದ್ದಾರೆ.
Advertisement
Advertisement
ಕೇಂದ್ರದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಿರುವ ವಿಚಾರವಾಗಿ, ನರೇಂದ್ರ ಮೋದಿಯವರು ಈಗ ಬಹಳ ದುರ್ಬಲರಾಗಿದ್ದಾರೆ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಮೇಲೆ ಅವಲಂಬಿತರಾಗಿದ್ದಾರೆ. ಮುಂದೆ ಇವರ ಕಥೆ ಯಾವಾಗ ಏನಾಗುತ್ತೋ ಗೊತ್ತಿಲ್ಲ. ಎರಡು ಬಾರಿ ಅವರು ಸ್ವಶಕ್ತಿಯಿಂದ ಪ್ರಧಾನಿ ಆಗಿದ್ದರು. ಮತ್ತೆ ಚುನಾವಣೆ ಬಂದರೂ ಬರಬಹುದು ಎಂದಿದ್ದಾರೆ. ಇದನ್ನೂ ಓದಿ: ಲೋಕಸಭೆಯ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ನೇಮಕಕ್ಕೆ CWC ನಿರ್ಣಯ ಅಂಗೀಕಾರ