ಬೆಂಗಳೂರು: ಸಿಎಂ ಸ್ಥಾನಕ್ಕೆ ಯಾರು ಬೇಕಾದರು ಆಸೆ ಪಡಬಹುದು ಆದರೆ ಸಿಎಂ ಆಯ್ಕೆ ಮಾಡುವುದು ಶಾಸಕರು ಹಾಗೂ ಹೈಕಮಾಂಡ್ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಆಯಾ ಸಮುದಾಯದ ನಾಯಕರು ಆಯಾ ಸಮುದಾಯದ ಬೆಂಬಲ ಕೇಳುವುದು ತಪ್ಪಲ್ಲ. ಕಾಂಗ್ರೆಸ್‍ನಲ್ಲಿ ಯಾರೇ ಸಿಎಂ ಅಭ್ಯರ್ಥಿ ಅಂದರೂ, ಅಂತಿಮವಾಗಿ ತೀರ್ಮಾನ ಮಾಡುವುದು ಕಾಂಗ್ರೆಸ್ ಹೈಕಮಾಂಡ್. ಜಮೀರ್ ಅಹಮ್ಮದ್ ಪದೇ, ಪದೇ ಹೇಳಿಕೆ ಕೊಡುತ್ತಿರುವ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಹಾಗೂ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸಿಎಂ ಅರ್ಹತೆ ಇರುವವರು ಇದ್ದರು, ಮೊದಲು ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು. ಅಲ್ಲಿ ಶಾಸಕಾಂಗ ಪಕ್ಷದ ನಾಯಕ ಆಯ್ಕೆ ಆಗಿ ಅವರು ಸಿಎಂ ಆಗುತ್ತಾರೆ ಅದನ್ನು ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಎಲ್ಲಾ 224 ಶಾಸಕರು ಸಿಎಂ ಸ್ಥಾನದ ಆಕಾಂಕ್ಷಿಗಳು ಎನ್ನುವ ಡಿಕೆಶಿ ಹೇಳಿಕೆ ಸರಿ ಇದೆ. ಎಲ್ಲರು ಆಕಾಂಕ್ಷಿಗಳಾಗಿರುತ್ತಾರೆ ಎಂದು ಹೇಳಿದ್ದಾರೆ.
Advertisement
Advertisement
ಪಕ್ಷದಲ್ಲಿ ಸಮೂಹಿಕ ನಾಯಕತ್ವ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದು ಸರಿಯಾಗಿದೆ. ನಾನು ಅದನ್ನೆ ಹೇಳಿದ್ದು ಖರ್ಗೆ ಅವರು ಹೇಳಿದ್ದು ಸ್ವಾಭಾವಿಕ ಶಾಸಕಾಂಗ ಪಕ್ಷದಲ್ಲಿ ಶಾಸಕರು ನಿರ್ಧಾರ ಮಾಡುತ್ತಾರೆ. ಅವರು ಹಿರಿಯ ನಾಯಕರು ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಅವಕಾಶ ಕೊಡುತ್ತಾರೋ ಅವರು ಸಿಎಂ ಆಗುತ್ತಾರೆ. ಶಾಸಕರು ಹಾಗೂ ಹೈಕಮಾಂಡ್ ಖರ್ಗೆ ಅಥವಾ ಬೇರೆ ಯಾರದೇ ಹೆಸರು ಹೇಳಿದರೂ, ಅವರೇ ಸಿಎಂ ಆಗುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ದೇಶಕ್ಕಾಗಿ ಮನೆಯವರನ್ನೇ ಕಳೆದುಕೊಂಡವರು ಹಣಕ್ಕಾಗಿ ಅವ್ಯವಹಾರ ಮಾಡುತ್ತಾರೇನ್ರಿ: ಖರ್ಗೆ
Advertisement
ಯಡಿಯೂರಪ್ಪನವರನ್ನು ಬಿಜೆಪಿ ಮೂಲೆಗುಂಪು ಮಾಡಿದೆ. ಯಡಿಯೂರಪ್ಪ ಅವರಿಗೆ ಬೇರೆ ಏನು ಮಾರ್ಗ ಇದೆ ಹೇಳಿ, ಅವರನ್ನು ಅವಧಿಗೆ ಮುನ್ನವೇ ಸಿಎಂ ಸ್ಥಾನದಿಂದ ತೆಗೆದರು. ರಾಜೀನಾಮೆ ಕೊಡುವ ಪರಿಸ್ಥಿತಿ ತಂದಿಟ್ಟರು. ಬಿಜೆಪಿಯನ್ನು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಯಶಸ್ವಿಯಾಗಿ ಕೆಳ ಮಟ್ಟದಿಂದ ಕಟ್ಟಿದವರು, ಸುದೀರ್ಘ ಹೋರಾಟದಿಂದ ಅಧಿಕಾರಕ್ಕೆ ತಂದಂತಹ ಅವರ ಕೈಯಲ್ಲಿ ರಾಜೀನಾಮೆ ಕೊಡಿಸಿದರು. ಅವರ ಕೈಯಲ್ಲಿ ಆಪರೇಷನ್ ಕಮಲದಂತ ಕೆಟ್ಟ ಕೆಲಸ ಮಾಡಿಸಿದರು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಗ್ಯಾಂಗ್ ರೇಪ್ – ನಾಲ್ವರು ರೈಲ್ವೆ ಸಿಬ್ಬಂದಿ ಅರೆಸ್ಟ್
ಮೊದಲು ಸಿಎಂ ಆಗಿದ್ದಾಗ ಅವರು ಅವಧಿ ಪೂರ್ಣ ಮಾಡಲಿಲ್ಲ. ಜೈಲಿಗೆ ಹೋದರು. ಕೇಸು ಅಂತ ತೆಗೆದು ಹಾಕಿದರು. ಈ ಬಾರಿಯು ಅವಧಿ ಪೂರ್ಣ ಮಾಡಲಿಲ್ಲ. ಈ ಬಾರಿಯು ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು. ಅವರನ್ನು ಉಪಯೋಗಿಸಿಕೊಂಡು ಸಿಎಂ ಸ್ಥಾನದಿಂದ ತೆಗೆದು ಹಾಕಲಾಯಿತು. ಅವರನ್ನು ಮೂಲೆಗುಂಪು ಮಾಡಲಾಯಿತು. ಹೇಗಿದ್ದರೂ, ಮುಂದೆ 75 ವರ್ಷದ ಕಾರಣ ನೀಡಿ ಇವರಿಗೆ ಅವಕಾಶ ನಿರಾಕರಿಸುತ್ತಾರೆ. ಅವರಿಗೆ ಒತ್ತಡ ನೀಡಿ ಸಿಎಂ ಸ್ಥಾನದಿಂದ ಕೆಳಗಿಳಿಸಿದರು ಮತ್ತು ಅವರನ್ನು ಮೂಲೆ ಗುಂಪು ಮಾಡಿದರು ಎಂದು ತಿಳಿಸಿದ್ದಾರೆ.
ಸ್ಬಾಭಾವಿಕವಾಗಿ ಶಿಕಾರಿಪುರದಿಂದ ತಮ್ಮ ಪುತ್ರ ಸ್ಪರ್ಧೆ ಮಾಡುತ್ತಾರೆ ಎಂದು ಘೋಷಿಸಿದರು. ಅವರನ್ನು ಯಾವ ರೀತಿ ದೆಹಲಿಗೆ ಕರೆಸಿಕೊಂಡರು. ಮೊದಲೇ ರಾಷ್ಟ್ರೀಯ ವಾಹಿನಿ ಮೂಲಕ ರಾಜೀನಾಮೆ ಕೊಟಿದ್ದಾರೆ ಅಂತ ಮೊದಲೇ ಲೀಕ್ ಮಾಡಿದರು. ಅವರ ಆತ್ಮ ಸ್ಥೈರ್ಯ ಕುಗ್ಗಿಸಿದರು. ಅವರನ್ನು ಕೆಳಗೆ ಇಳಿಸಿದರು ಎಂದಿದ್ದಾರೆ.