ಬೆಳಗಾವಿ: ಮೇಕೆದಾಟು ಪಾದಯಾತ್ರೆಯಂತೆಯೇ ಮಹದಾಯಿ ಪಾದಯಾತ್ರೆ ಮಾಡುತ್ತೇವೆ. ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈ ಸಂಬಂಧ ನಿಲುವು ತೆಗೆದುಕೊಂಡು ಅಧಿಕೃತ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹದಾಯಿ ಯೋಜನೆಯು ಹುಬ್ಬಳ್ಳಿ, ಧಾರವಾಡ ಸೇರಿ ನಾಲ್ಕಾರು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಇರುವ ಯೋಜನೆಯಾಗಿದೆ. ಮಹದಾಯಿ ಕಣಿವೆಯಲ್ಲಿ ಸುಮಾರು 200 ಟಿಎಂಸಿ ನೀರು ಸಿಗುತ್ತದೆ. ನಮ್ಮ ಸರಹದ್ದಿನಲ್ಲಿ 50 ರಿಂದ 60 ಟಿಎಂಸಿ ನೀರು ಬರುತ್ತದೆ ಎಂದರು. ಇದನ್ನೂ ಓದಿ: ಬಿಜೆಪಿಯಲ್ಲಿ ಸಂಪುಟ ಸರ್ಜರಿಗೆ ಡೆಡ್‍ಲೈನ್ – ಮಾರ್ಚಲ್ಲ ಈಗ್ಲೇ ವಿಸ್ತರಿಸಿ ಅಂತ ಬಿಗಿಪಟ್ಟು
Advertisement
Advertisement
ಮಲಪ್ರಭಾ ಡ್ಯಾಮನಲ್ಲಿ ನೀರಿನ ಕೊರತೆ ಇರುವುದರಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬೇಡಿಕೆ ಇದೆ. ಒಟ್ಟಾರೆ ನಾವು 36 ಟಿಎಂಸಿ ನೀರಿಗಾಗಿ ಬೇಡಿಕೆ ಸಲ್ಲಿಸಿದ್ದೆವು. ಅದರಲ್ಲಿ 7.5 ಟಿಎಂಸಿ ಕುಡಿಯುವ ನೀರಿಗಾಗಿ ಕೇಳಿದ್ದೆವು. ಆದರೆ, ಟ್ರಿಬ್ಯುನಲ್ ನಮಗೆ 3.9 ಟಿಎಂಸಿ ನೀರು ನೀಡಿದೆ. ಅದು ನಮಗೆ ಯಾವುದಕ್ಕೂ ಸಾಲುವುದಿಲ್ಲ ಎಂದು ತಿಳಿಸಿದರು.
Advertisement
ಖಾನಾಪುರ ಇನ್ ಬೇಸ್ ಬರುತ್ತೆ. ಅಲ್ಲಿ ಒಂದೂವರೆ ಟಿಎಂಸಿ ನೀರು ಸಿಕ್ಕಿದ್ದು, ಇನ್ನೂ ಜಾಸ್ತಿ ಸಿಗಬಹುದು. ಖಾನಾಪುರ ತಾಲೂಕಿಗೆ ಯಾವುದೇ ಕಾನೂನು ಅಡೆತಡೆ ಬರಲ್ಲ. ವಿದ್ಯುತ್ ಉತ್ಪಾದನೆಯಿಂದ ಗೋವಾಗೆ ಏನೂ ಹಾನಿಯಾಗಲ್ಲ. ಕರ್ನಾಟಕಕ್ಕೆ ಕೇವಲ ರಾಜಕೀಯವಾಗಿ ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಾದಯಾತ್ರೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ನಮ್ಮ ಕೆಪಿಸಿಸಿ ಕಾರ್ಯಾಧ್ಯಕ್ಷರು, ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಸೇರಿ ನಿರ್ಧಾರ ಮಾಡುತ್ತಾರೆ ಎಂದರು. ಇದನ್ನೂ ಓದಿ: ಆಣೆ ಪ್ರಮಾಣ ಎಷ್ಟರ ಮಟ್ಟಿಗೆ ಸರಿ ಆ ಬಗ್ಗೆ ಗೊತ್ತಿಲ್ಲ : ಸತೀಶ್ ಜಾರಕಿಹೊಳಿ
Advertisement
ಮಹದಾಯಿ ಯೋಜನೆಗೆ ಗೋವಾ ವಿರೋಧ ವಿಚಾರವಾಗಿ ಮಾತನಾಡಿ, ಗೋವಾದವರು ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರ ವಿರೋಧ ಮಾಡುತ್ತಿದ್ದಾರೆ. ಗೋವಾದವರಿಗೂ ಗೊತ್ತಾಗಿದೆ. ವಿರೋಧ ಮಾಡುವುದರಿಂದ ಯಾವುದೇ ಹುರುಳಿಲ್ಲ ಎಂದು ಮಾತನಾಡಿದರು.
ಗೋವಾ ವಿಧಾನಸಭೆ ಚುನಾವಣೆ ವೇಳೆ ಮಹದಾಯಿ ಯೋಜನೆ ಪ್ರಸ್ತಾಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ರಾಜ್ಯ, ಅವರ ರಾಜ್ಯದ ನಿಲುವುಗಳು ಬೇರೆ ಬೇರೆ ಇರುತ್ತವೆ. ಅದೇ ರೀತಿ ಪಕ್ಷದ ನಿಲುವುಗಳು ಕೂಡ ಬೇರೆ ಇರುತ್ತವೆ. ನೀರಿನ ವಿಚಾರ ಬಂದಾಗ ನಾವು ರಾಜಿಯಾಗುವ ಪ್ರಶ್ನೆಯೇ ಇಲ್ಲ. ಇದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಅಲ್ಲಿಯ ಸರ್ಕಾರಗಳು ಅವರ ರಾಜ್ಯದ ನಿಲುವು ಹೇಳುತ್ತವೆ. ಹಾಗೇ ನಮ್ಮ ರಾಜ್ಯದ ನಿಲುವು ತೆಗೆದುಕೊಳ್ಳಲು ನಮಗೆ ಹಕ್ಕು ಇರುತ್ತದೆ. ಆ ದಿಸೆಯಲ್ಲಿ ನಾವು ಯಾವುದೇ ರೀತಿ ರಾಜಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ