Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಗೆಳತಿ ಜೊತೆ ಸಂಭ್ರಮದ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ – ಪಾಂಡ್ಯ ವಿರುದ್ಧ ದೂರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಗೆಳತಿ ಜೊತೆ ಸಂಭ್ರಮದ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ – ಪಾಂಡ್ಯ ವಿರುದ್ಧ ದೂರು

Cricket

ಗೆಳತಿ ಜೊತೆ ಸಂಭ್ರಮದ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ – ಪಾಂಡ್ಯ ವಿರುದ್ಧ ದೂರು

Public TV
Last updated: March 12, 2026 1:50 pm
Public TV
Share
2 Min Read
Hardik Pandya
SHARE

ಮುಂಬೈ: 2026 ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಗೆದ್ದ ನಂತರ ಸಂಭ್ರಮಾಚರಣೆ ವೇಳೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya) ರಾಷ್ಟ್ರಧ್ವಜಕ್ಕೆ (National Flag) ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಕೀಲರೊಬ್ಬರು ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ.

ಮಾ.8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಭಾರತ ಜಯಗಳಿಸಿತ್ತು. ಈ ವೇಳೆ ನಡೆದ ಸಂಭ್ರಮಾಚರಣೆ ಸಮಯದಲ್ಲಿ ಪಾಂಡ್ಯ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪುಣೆ ಮೂಲದ ವಕೀಲ ವಾಜಿದ್ ಖಾನ್ ಬಿಡ್ಕರ್ ಅವರು ಮಹಾರಾಷ್ಟ್ರದ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಸಿಕ್ಸರ್‌ನಲ್ಲಿ ಶತಕ ಹೊಡೆದು ವಿಶ್ವದಾಖಲೆ – ಯಾರು ಎಷ್ಟು ಸಿಕ್ಸ್‌?

ಹಾರ್ದಿಕ್ ಪಾಂಡ್ಯ ಅವರು ತಮ್ಮ ಗೆಳತಿ ಮಹೀಕಾ ಅವರೊಂದಿಗೆ ರಾಷ್ಟ್ರಧ್ವಜ ಹಿಡಿದು ಡ್ಯಾನ್ಸ್ ಮಾಡುತ್ತಿರುವ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರ ಜೊತೆ ಪಾಂಡ್ಯ ರಾಷ್ಟ್ರಧ್ವಜವನ್ನು ಬೆನ್ನಿಗೆ ಸುತ್ತಿಕೊಂಡು ವೇದಿಕೆಯ ಮೇಲೆ ಮಲಗಿ ಸೆಲ್ಫಿ ಕ್ಲಿಕ್ಕಿಸಿದ್ದರು.

I have never seen Bigger Cringe attention seekers than Hardik Pandya and Mahieka

Other players also celebrate with their Wives or Girlfriends on the field, but no one behaves like this

pic.twitter.com/knGs844HyZ

— Veena Jain (@Vtxt21) March 9, 2026

ಪಾಂಡ್ಯ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಕಟು ಟೀಕೆಗಳು ವ್ಯಕ್ತವಾಗಿವೆ. ಇತರ ಆಟಗಾರರು ತಮ್ಮ ಪತ್ನಿಯರು ಅಥವಾ ಗೆಳತಿಯರೊಂದಿಗೆ ಮೈದಾನದಲ್ಲಿ ಸಂಭ್ರಮಿಸುತ್ತಾರೆ. ಆದರೆ ಯಾರೂ ಇವರ ರೀತಿ ವರ್ತಿಸುವುದಿಲ್ಲ ಎಂದು ನೆಟ್ಟಿಗರು ಸಿಟ್ಟು ಹೊರಹಾಕಿದ್ದರು.

#WATCH | Pune: Advocate Wajid Khan says, “You must have seen the T20 World Cup here. Hardik Pandya was dancing with his girlfriend in celebration of his victory. The national flag was tied to his back… According to Section 2 of the 1971 National Flag Act, we should respect the… pic.twitter.com/mHVHn336ql

— ANI (@ANI) March 12, 2026

ಈ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ವಾಜಿದ್ ಖಾನ್ ಬಿಡ್ಕರ್, ಹಾರ್ದಿಕ್ ಪಾಂಡ್ಯ ವಿಜಯೋತ್ಸವದ ಸಂಭ್ರಮದಲ್ಲಿ ತನ್ನ ಗೆಳತಿಯೊಂದಿಗೆ ಡ್ಯಾನ್ಸ್ ಮಾಡುತ್ತಿದ್ದರು. ರಾಷ್ಟ್ರಧ್ವಜವನ್ನು ಅವರ ಬೆನ್ನಿಗೆ ಕಟ್ಟಲಾಗಿತ್ತು. 1971 ರ ರಾಷ್ಟ್ರೀಯ ಧ್ವಜ ಕಾಯ್ದೆಯ ಸೆಕ್ಷನ್ 2 ರ ಪ್ರಕಾರ, ನಾವು ರಾಷ್ಟ್ರಧ್ವಜದ ಘನತೆಯನ್ನು ಗೌರವಿಸಬೇಕು. ಆದಾಗ್ಯೂ, ಹಾರ್ದಿಕ್ ಪಾಂಡ್ಯ ತಮ್ಮ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ತುಂಬಾ ಕಳೆದುಹೋಗಿದ್ದರು ಎಂದು ಅಸಮಾಧಾನ ಹೊರಹಾಕಿದ್ದಾರೆ.

ದೂರು ದಾಖಲಿಸಲು ಹೋದಾಗ, ಘಟನೆ ಇಲ್ಲಿ ನಡೆದಿಲ್ಲ. ಅಹಮದಾಬಾದ್‌ನಲ್ಲಿ ನಡೆದಿದೆ ಎಂದು ಪೊಲೀಸರು ನನಗೆ ಹೇಳಿದರು. ರಾಷ್ಟ್ರಧ್ವಜವು ಇಡೀ ರಾಷ್ಟ್ರದ ಸಂಕೇತವಾಗಿದೆ. ನಾವು ಇಲ್ಲಿ ದೂರು ಸಲ್ಲಿಸಬಹುದು ಎಂದು ವಾದಿಸಿದೆ. ಅವರು ನನ್ನ ದೂರನ್ನು ಸ್ವೀಕರಿಸಿ ನನಗೆ ಪ್ರತಿಯನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್‌ ಗೆದ್ದ ಟೀಂ ಇಂಡಿಯಾಗೆ ಬಂಪರ್‌; 131 ಕೋಟಿ ಬಹುಮಾನ ಘೋಷಿಸಿದ BCCI

TAGGED:Hardik PandyaNarendra Modi Stadiumnational flagnew zealandT20 World Cup 2026Team india
Share This Article
Facebook Whatsapp Whatsapp Telegram

Cinema news

Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories

You Might Also Like

apples Goods vehicle overturns belagavi national highway 1
Belgaum

ಗೂಡ್ಸ್ ವಾಹನ ಪಲ್ಟಿ- ಲಕ್ಷಾಂತರ ರೂ. ಸೇಬುಗಳು ರಸ್ತೆ ಪಾಲು

Public TV
By Public TV
11 seconds ago
trump crude oil
Latest

ಟ್ರಂಪ್‌ ಭಾಷಣ ಮುಗಿದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ದಿಢೀರ್‌ ಭಾರೀ ಏರಿಕೆ

Public TV
By Public TV
47 minutes ago
Chitradurga BAMS Student Suicide
Chitradurga

ಅಧ್ಯಾಪಕನೊಂದಿಗೆ ಸಂಬಂಧ ಕಲ್ಪಿಸಿ ಅಪಪ್ರಚಾರ – ಬಿಎಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ

Public TV
By Public TV
58 minutes ago
APSRTC Bus Accident Bengaluru
Bengaluru City

ಡಿವೈಡರ್‌ಗೆ ಡಿಕ್ಕಿ ಹೊಡೆದ ಆಂಧ್ರ ಸಾರಿಗೆ ಬಸ್ – ಪ್ರಯಾಣಿಕರು ಸೇಫ್

Public TV
By Public TV
1 hour ago
Donald Trump
Latest

ಮಧ್ಯಪ್ರಾಚ್ಯ ದೇಶಗಳ ರಕ್ಷಣೆಗೆ ಯುದ್ಧ ಅನಿವಾರ್ಯ – ಈ ಪರಿಸ್ಥಿತಿಗೆ ಒಬಾಮಾ ನೀತಿಯೇ ಕಾರಣ: ಟ್ರಂಪ್‌ ಕಿಡಿ

Public TV
By Public TV
2 hours ago
Bengaluru Karaga
Bengaluru City

ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಮಹೋತ್ಸವ – ಕಣ್ತುಂಬಿಕೊಂಡ ಭಕ್ತಗಣ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?