ರಜನಿಯ 170ನೇ ಚಿತ್ರ ಘೋಷಿಸಿದ ಲೈಕಾ ಪ್ರೊಡಕ್ಷನ್ : ನಿರ್ದೇಶಕ ಯಾರು ಗೊತ್ತಾ?

Public TV
1 Min Read
Rajani

ಮಿಳಿನ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ (Lyca Production) ರಜನಿಕಾಂತ್ (Rajinikanth) ನಟನೆಯ 170ನೇ ಸಿನಿಮಾವನ್ನು (New Cinema) ಘೋಷಣೆ ಮಾಡಿದೆ. ಲೈಕಾ ಸಂಸ್ಥೆಯ ಮುಖ್ಯಸ್ಥ ಸುಭಾಸ್ಕರನ್ ಹುಟ್ಟು ಹಬ್ಬದ ದಿನದಂದು ಈ ಮಹತ್ವದ ಸುದ್ದಿಯನ್ನು ಪ್ರಕಟಿಸಿದ್ದು, ಜೈ ಭೀಮ್ (Jai Bheem) ಚಿತ್ರ ಖ್ಯಾತಿಯ ಟಿ.ಜಿ ಜ್ಞಾನವೇಲ್ (Gnanavel) ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಿಕೊಂಡಿದೆ.

Rajinikanth Petta COVER

ಸದ್ಯ ರಜನಿಕಾಂತ್ 169ನೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಜೈಲರ್ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಹಲವು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಕನ್ನಡದಿಂದ ಶಿವರಾಜ್ ಕುಮಾರ್, ಮಲಯಾಳಂನಿಂದ ಮೋಹನ್ ಲಾಲ್ ಸೇರಿದಂತೆ ಹಲವು ಹೆಸರಾಂತ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ. ಮಂಗಳೂರು ಸೇರಿದಂತೆ ದೇಶದ ನಾನಾ ಕಡೆ ಚಿತ್ರೀಕರಣವಾಗಿದೆ. ಈ ಸಿನಿಮಾದ ಶೂಟಿಂಗ್ ಮುಗಿಯುತ್ತಿದ್ದಂತೆಯೇ 170ನೇ ಸಿನಿಮಾದಲ್ಲಿ ತೊಡಗಲಿದ್ದಾರೆ ರಜನಿ.

shivarajkumar with rajinikanth

ಜೈ ಭೀಮ್ ಸಿನಿಮಾದ ಮೂಲಕ ತಮಿಳು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದ್ದ ಜ್ಞಾನವೇಲು, ಮತ್ತೊಂದು ಹೊಸ ಕಥೆಯೊಂದಿಗೆ ಲೈಕಾ ಪ್ರೊಡಕ್ಷನ್ ಜೊತೆ ಕೈ ಜೋಡಿಸಿದ್ದಾರೆ. ರಜನಿಕಾಂತ್ ಗಾಗಿಯೇ ಅವರು ಹೊಸ ಬಗೆಯ ಪಾತ್ರವನ್ನು ಬರೆದುಕೊಂಡಿದ್ದು, ಈ ಮೂಲಕ ಮತ್ತೊಂದು ಸಮಾಜಮುಖಿ ಸಿನಿಮಾವನ್ನು ನೀಡಲಿದ್ದಾರಂತೆ. ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ ಸ್ವೀಟ್‌ ಹಾರ್ಟ್‌ಗೆ ವಿಶ್‌ ಮಾಡಿದ ರಿಷಬ್ ಶೆಟ್ಟಿ

 Gnanavel

ಲೈಕಾ ಪ್ರೊಡಕ್ಷನ್ ಈ ಮೊದಲು ರಜನಿಕಾಂತ್ ನಟನೆಯ ದರ್ಬಾರ್ ಮತ್ತು ಕಾಲ ಚಿತ್ರವನ್ನು ನಿರ್ಮಾಣ ಮಾಡಿದೆ. ಇದೇ ಮೊದಲ ಬಾರಿಗೆ ಜ್ಞಾನವೇಲ್ ಚಿತ್ರಕ್ಕೆ ಹಣ ಹೂಡುತ್ತಿದೆ. ಹೆಸರಾಂತ ಸಂಸ್ಥೆಯ ಜೊತೆಗೆ ಹೆಸರಾಂತ ನಟ ಮತ್ತು ಪ್ರತಿಭಾವಂತ ನಿರ್ದೇಶಕ ಒಟ್ಟಾಗಿರುವುದರಿಂದ ರಜನಿಯ 170ನೇ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *