ಲಂಡನ್: ಕೆಲವು ವಾರಗಳ ಹಿಂದೆ ಲಂಡನ್‌ನಲ್ಲಿ ಕಳುವಾಗಿದ್ದ 3 ಲಕ್ಷ ಡಾಲರ್(ಸುಮಾರು 2 ಕೋಟಿ ರೂ.)ಗೂ ಹೆಚ್ಚಿನ ಮೌಲ್ಯದ ಐಷಾರಾಮಿ ಬೆಂಟ್ಲಿ ಕಾರು ಪಾಕಿಸ್ತಾನದ ಕರಾಚಿಯಲ್ಲಿ ಬಂಗಲೆಯೊಂದರಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಅತ್ಯಾಧುನಿಕ ಕಾರನ್ನು ಸಾಗಾಟ ಮಾಡಲು ಹೇಗೆ ಸಾಧ್ಯವಾಯಿತು ಎಂಬುದು ಇದೀಗ ತನಿಖೆಯಲ್ಲಿ ತಿಳಿದುಬಂದಿದೆ.
ವರದಿಯ ಪ್ರಕಾರ ಕಳ್ಳತನದಲ್ಲಿ ಭಾಗಿಯಾಗಿದ್ದವರು ಅತ್ಯಾಧುನಿಕ ಕಾರಿನಲ್ಲಿದ್ದ ಟ್ರೇಸಿಂಗ್ ಟ್ರ‍್ಯಾಕರ್ ಅನ್ನು ತೆಗೆದುಹಾಕಲು ವಿಫಲರಾಗಿದ್ದಾರೆ. ಇದರ ಸುಧಾರಿತ ಟ್ರ‍್ಯಾಕಿಂಗ್ ಸಿಸ್ಟಮ್ ಮೂಲಕ ವಾಹನದ ನಿಖರವಾದ ಸ್ಥಳವನ್ನು ಪತ್ತೆ ಹಚ್ಚಲು ಬ್ರಿಟನ್ ಅಧಿಕಾರಿಗಳಿಗೆ ಅನುಕೂಲವಾಗಿದೆ.
Advertisement
ಬ್ರಿಟನ್‌ನ ರಾಷ್ಟ್ರೀಯ ಅಪರಾಧ ಏಜೆನ್ಸಿ ಮೊದಲಿಗೆ ಕರಾಚಿಯ ಕಸ್ಟಮ್ಸ್ ಎನ್‌ಫೋರ್ಸ್ಮೆಂಟ್ ಕಲೆಕ್ಟರೇಟ್(ಸಿಸಿಇ)ಗೆ ಕದ್ದ ಬೆಂಟ್ಲಿ ಕಾರಿನ ಬಗ್ಗೆ ಮಾಹಿತಿ ನೀಡಿದೆ. ಮುಲ್ಸನ್ನೆ ಸೆಡಾನ್ ನಗರದ ಡಿಹೆಚ್‌ಎ ಪ್ರದೇಶದ ಮನೆಯೊಂದರಲ್ಲಿ ಕಾರನ್ನು ನಿಲ್ಲಿಸಲಾಗಿದೆ ಎಂಬ ಸುಳಿವು ಪಡೆದ ಬಳಿಕ ಕರಾಚಿಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ
Advertisement
Advertisement
ದಾಳಿಯ ವೇಳೆ ಅಧಿಕಾರಿಗಳು ಪಾಕಿಸ್ತಾನಿ ನೋಂದಣಿ ಹಾಗೂ ನಂಬರ್ ಪ್ಲೇಟ್ ಇರುವ ಬೆಂಟ್ಲಿ ಕಾರನ್ನು ಕಂಡುಹಿಡಿದರು. ಬಳಿಕ ತಪಾಸಣೆ ನಡೆಸಿದಾಗ ಕಾರಿನ ಚಾಸಿಸ್ ಸಂಖ್ಯೆಯು ಬ್ರಿಟನ್ ಅಧಿಕಾರಿಗಳು ಒದಗಿಸಿದ ಕದ್ದ ವಾಹನದ ವಿವರಗಳಿಗೆ ಹೊಂದಿಕೆಯಾಗಿದೆ. ಬಳಿಕ ಬಂಗಲೆ ಮಾಲೀಕರ ಬಳಿ ಕಾರಿನ ದಾಖಲೆಗಳನ್ನು ಕೇಳಿದಾಗ ಅವರು ಅದನ್ನು ನೀಡಲು ವಿಫಲರಾಗಿದ್ದಾರೆ.
Advertisement
ವಾಹನದ ನೊಂದಣಿ ನಕಲಿ ಎಂಬುದು ತಿಳಿದ ತಕ್ಷಣ ಅಧಿಕಾರಿಗಳು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಬಂಗಲೆ ಮಾಲೀಕ ಹಾಗೂ ಆತನಿಗೆ ಕಾರನ್ನು ಮಾರಾಟ ಮಾಡಿದ್ದ ದಲ್ಲಾಳಿಯನ್ನೂ ಬಂಧಿಸಿದ್ದಾರೆ. ಇದನ್ನೂ ಓದಿ: ಮುಂದಿನ ಐಪಿಎಲ್‌ಗೂ ಧೋನಿ ಚೆನ್ನೈ ತಂಡ ನಾಯಕ
ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಈ ಐಷಾರಾಮಿ ಕಾರನ್ನು ಲಂಡನ್‌ನಿಂದ ಪಾಕಿಸ್ತಾನಕ್ಕೆ ಸಾಗಾಟ ಮಾಡಲು ಪೂರ್ವ ಯುರೋಪಿಯನ್ ದೇಶದ ಉನ್ನತ ರಾಜತಾಂತ್ರಿಕರ ದಾಖಲೆಗಳನ್ನು ಬಳಸಲಾಗಿದೆ ಎಂಬುದು ತಿಳಿದುಬಂದಿದೆ. ಈ ಮೂಲಕ ಯಶಸ್ವಿಯಾಗಿ ಕಾರನ್ನು ಪಾಕಿಸ್ತಾನಕ್ಕೆ ಕಳ್ಳ ಸಾಗಣೆ ಮಾಡಿದ್ದಾರೆ. ಈ ಕಳ್ಳ ಸಾಗಣೆಯ ಮುಖ್ಯ ಮಾಸ್ಟರ್‌ಮೈಂಡ್‌ಗಾಗಿ ಇನ್ನೂ ಶೋಧ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.