ಬೆಂಗಳೂರು: ಇಂದು ಕೇತುಗ್ರಸ್ತ ರಕ್ತ ಚಂದ್ರ ಗ್ರಹಣ ಸಂಭವಿಸಲಿದೆ. ಇದಕ್ಕೆ ಮಹರ್ಷಿ ಆನಂದ್ ಗುರುಜಿ ಅವರು ಪರಿಹಾರ ಸೂತ್ರಗಳನ್ನು ಸೂಚಿಸಿದ್ದಾರೆ.
ಈ ಬಾರಿ ಸಂಭವಿಸುತ್ತಿರುವ ಕೇತುಗ್ರಸ್ತ ಚಂದ್ರಗ್ರಹಣ ಬಹಳಷ್ಟು ಕ್ರೂರವಾಗಿದೆ. ಒಂದೇ ಮಾಸದಲ್ಲಿ ಸೂರ್ಯ ಗ್ರಹಣ ಮತ್ತು ಚಂದ್ರ ಗ್ರಹಣ ಬರುವ ಎರಡು ಗ್ರಹಣವಾಗಿದ್ದರಿಂದ ಇದು ತುಂಬಾ ಸಮಸ್ಯೆಯನ್ನುಂಟು ಮಾಡುತ್ತದೆ. ಈ ಗ್ರಹಣದಿಂದ ಉಂಟಾಗುವ ಸಮಸ್ಯೆ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
Advertisement
ಗ್ರಹಣ ಪರಿಹಾರ 1: ಚಿಕ್ಕಮಕ್ಕಳು ಏನ್ಮಾಡಬೇಕು?
ಸಣ್ಣ ಮಕ್ಕಳಿಗೆ ಸಂಜೆ 7.00 ಗಂಟೆ ಅಥವಾ ರಾತ್ರಿ 8.00 ಗಂಟೆವರೆಗೂ ಗ್ರಹಣ ಕಾಲವಾದ್ದರಿಂದ ಸಂಜೆ 6.00 ಗಂಟೆಯಿಂದ 7.00 ಗಂಟೆಯೊಳಗೆ ಊಟವನ್ನು ನೀಡಬೇಕು.
Advertisement
Advertisement
ಗ್ರಹಣ ಪರಿಹಾರ 3: ಗ್ರಹಣ ವೇಳೆ ಏನು ಮಾಡಬೇಕು?
ಗ್ರಹಣ ಸ್ಪರ್ಶ ಕಾಲ ಆರಂಭವಾಗುವುದು 11.54 ನಿಮಿಷ, ಗ್ರಹಣ ಮಧ್ಯಕಾಲ 1.52 ನಿಮಿಷ, ಗ್ರಹಣ ಮೋಕ್ಷ ಕಾಲ 3.49 ನಿಮಿಷವಾಗಿದೆ. ಆದ್ದರಿಂದ ಗ್ರಹಣ ಪ್ರಾರಂಭದ ಕಾಲದಲ್ಲಿ ಅಂದರೆ ಸಂಜೆ 4.30ರ ಒಳಗಾಗಿ ಮನೆಯಲ್ಲಿರುವ ಎಲ್ಲ ಪದಾರ್ಥಗಳಿಗೂ ಒಂದಿಷ್ಟು ದರ್ಬೆಯನ್ನು ಹಾಕಿ. ದೇವಾಲಯದಲ್ಲಿ, ಹುಲ್ಲು ಬೆಳೆದಿರುವ ಕಡೆಗಳಲ್ಲಿ ಮತ್ತು ಅರ್ಚಕರು, ಪೂಜಾರಿ, ಪೂಜಾ ಸಾಮಾಗ್ರಿ ಸಿಗುವ ಅಂಗಡಿಗಳಲ್ಲಿ, ಜ್ಯೋತಿಷಿಗಳ ಬಳಿ ದರ್ಬೆ ಸಿಗುತ್ತದೆ.
Advertisement
ಗ್ರಹಣ ಪರಿಹಾರ 4: ಗರ್ಭಿಣಿಯರು ಏನು ಮಾಡಬೇಕು?
ಮನೆಯಲ್ಲಿ ಗರ್ಭಿಣಿಯರು ಇದ್ದರೆ ಸಾಧ್ಯವಾದಷ್ಟು ಮನೆಯಲ್ಲಿರುವ ಕಿಟಕಿ, ಬಾಗಿಲು ಎಲ್ಲವನ್ನು ಮುಚ್ಚಿ. ಇಲ್ಲವಾದರೆ ಮನೆಯಲ್ಲಿಯೇ ಒಂದು ಕೋಣೆಯಲ್ಲಿ ಕುಳಿತುಕೊಂಡು ಒಂದು ಕಿರಣವೂ ರೂಮಿಗೆ ಬೀಳದಂತೆ ನೋಡಿಕೊಳ್ಳಬೇಕು. ಮುಂದೆ ಹುಟ್ಟುವ ಮಗುವಿಗೆ ಯಾವುದೇ ತೊಡಕು, ತೊಂದರೆ ಉಂಟಾಗದೇ ಇರಲು ಈ ರೀತಿ ಮಾಡುವುದು ಉತ್ತಮವಾಗಿದೆ.
ಗ್ರಹಣ ಪರಿಹಾರ 5: ರಾಶಿಫಲ ಹೇಗಿದೆ?
ಗ್ರಹಣದಲ್ಲೂ ಕೆಲವು ರಾಶಿಯವರಿಗೆ ಶುಭಫಲವನ್ನು ಉಂಟು ಮಾಡುತ್ತದೆ. ಮೇಷ, ಸಿಂಹ, ವೃಶ್ಚಿಕ ಮತ್ತು ಮೀನ ಈ ರಾಶಿಯವರು ಚಂದ್ರ ಗ್ರಹಣದಿಂದ ದೂರವಿದ್ದು, ಯಾವುದೇ ಗ್ರಹಣದ ದೋಷವೂ ಇಲ್ಲ. ಆದರೆ ರಾತ್ರಿ 10 ಗಂಟೆಯ ಮೇಲೆ ಊಟ ಮಾಡಬೇಡಿ ಅದು ಒಳ್ಳೆಯದಲ್ಲ.
ಈ ಗ್ರಹಣದಿಂದ ತುಲಾ, ಮಿಥುನ, ಮಕರ ಮತ್ತು ಕುಂಭ ಈ ನಾಲ್ಕು ರಾಶಿಯವರಿಗೆ ಸಮಸ್ಯೆ ಇದೆ. ಸಮಸ್ಯೆಯನ್ನು ನಿವಾರಿಸಲು ದೇವಾಲಯಕ್ಕೆ ಹೋಗಬೇಕು, ಇಲ್ಲ ಮನೆಯಲ್ಲಿಯೇ ದೇವರಲ್ಲಿ ಪ್ರಾರ್ಥನೆ ಮಾಡಬೇಕು. ದೇವಾಲಯದಲ್ಲಿ ನಡೆಯುವ ಪೂಜೆಗಳಲ್ಲಿ ಪಾಲ್ಗೊಳ್ಳಬೇಕು. ಮನೆಯಲ್ಲಿರುವ ಹಿರಿಯ ಪಾದ ಮುಟ್ಟಿ ನಮಸ್ಕರಿಸಬೇಕು. ಸಾಧ್ಯವಾದರೆ ಗೋ ಪ್ರಾರ್ಥನೆ ಮಾಡಬೇಕು. ಗೋ ಮೂತ್ರವನ್ನು ತಲೆಗೆ ಸಿಂಪಡಿಸಿಕೊಳ್ಳಬೇಕು. ವೃಷಭ, ಕರ್ಕಾಟಕ, ಧನಸ್ಸು ಹಾಗು ಕನ್ಯಾ ಈ ರಾಶಿಯವರು ಅಧಿಕ ಭಯ ಪಡುವ ಅವಶ್ಯಕತೆ ಇಲ್ಲ.
ಗ್ರಹಣ ಪರಿಹಾರ 6: ಮೊಸರನ್ನದಿಂದ ಒಳ್ಳೆಯದು:
ಗ್ರಹಣಕ್ಕೂ ಮುನ್ನ ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು. ಜೊತೆಗೆ ಮೊಸರನ್ನವನ್ನು ಮಾಡಿ ಅದನ್ನು ನಿಮ್ಮ ಮನೆ ಮಹಡಿಯ ಮೇಲೆ ಸ್ವಲ್ಪ ಇಡಬೇಕು. ಇದರಿಂದ ಮನೆ ಶಾಂತಿಯಾಗುತ್ತದೆ. ಯಾವುದೇ ತೊಂದರೆಯಾಗುವುದಿಲ್ಲ.
ಗ್ರಹಣ ಪರಿಹಾರ 7: ಚಂದ್ರನಿಗೆ ಮುತ್ತುಗ ವೃಕ್ಷ ಇಷ್ಟ. ಆದ್ದರಿಂದ ಗ್ರಹಣ ಕಾಲ ಪ್ರಾರಂಭ, ಅಂತ್ಯ ಅಥವಾ ಮಾರನೆಯ ದಿನ ಅಂತಹ ಮುತ್ತಗ ವೃಕ್ಷ ಎಲ್ಲಾದರೂ ಇದ್ದರೆ ಅದಕ್ಕೆ 11 ನಮಸ್ಕಾರ ಹಾಕಿ. ಜೊತೆಗೆ ಒಂದು ಹಿಡಿ ಅಕ್ಕಿ, ಹಾಲು, ಮೊಸರನ್ನು ಮರದ ಬುಡಕ್ಕೆ ಹಾಕಿದರೆ ಒಳ್ಳೆಯದು. ದರ್ಬೆ ಮತ್ತು ಮುತ್ತುಗ ಎರಡನ್ನು ಒಂದು ಕಡೆ ಇಟ್ಟು ಪ್ರದಕ್ಷಿಣೆ ಹಾಕಿದರೆ ಗ್ರಹಣ ದೋಷ ಶೀಘ್ರವಾಗಿ ದೂರವಾಗುತ್ತದೆ.
ಗ್ರಹಣ ಪರಿಹಾರ 8: ವಯಸ್ಸಾದ ಹಿರಿಯರು ರಾಮ, ದಾಸ, ಕೃಷ್ಣ ಆರಾಧನೆ ಮಾಡಬೇಕು. ಗ್ರಹಣ ಮುಗಿಯವರೆಗೂ ದೇವತಾ ಆರಾಧನೆಯಲ್ಲಿ ಇದ್ದರೆ ಶುಭವಾಗುತ್ತದೆ. ಆದಷ್ಟು ಸಂಜೆ 6 ಗಂಟೆಯಿಂದ 7 ಗಂಟೆಯೊಳಗೆ ಊಟವನ್ನು ಮಾಡಬೇಕು. ಆಸ್ಪತ್ರೆಯಲ್ಲಿ ಇರುವವರು, ಮಾತ್ರೆ ತೆಗೆದು ಕೊಳ್ಳುವವರು ಕೂಡ ಆದಷ್ಟು ಬೇಗ ಊಟವನ್ನು ಮುಗಿಸಬೇಕು.