ಬೆಂಗಳೂರು: ಖಗ್ರಾಸ ರಕ್ತಚಂದ್ರಗ್ರಹಣ (Lunar Eclipse) ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದೇವಾಲಯಗಳಿಗೆ ದಿಗ್ಬಂಧನ ಹಾಕಲಾಗಿತ್ತು. ಆದ್ರೆ ಚಿಕ್ಕಮಗಳೂರಿನ (Chikkamagaluru) ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ನಿರಂತರ ಜಲಾಭಿಷೇಕ ಮಾಡಲಾಗಿತ್ತು. ಗ್ರಹಣದ ಆರಂಭದಿಂದ ಅಂತ್ಯದವರೆಗೂ ಅನ್ನಪೂಣೇಶ್ವರಿಗೆ ವಿಶೇಷ ಪೂಜೆ ಮತ್ತು ಜಲಾಭಿಷೇಕ ಮಾಡಲಾಯ್ತು.
ಗ್ರಹಣ ಕಾಲದಲ್ಲಿ ಉತ್ತರ ಕನ್ನಡ (Uttarakannada) ಜಿಲ್ಲೆ ಗೋಕರ್ಣ ಮಹಾಬಲೇಶ್ವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು. ಗ್ರಹಣ ಕಾಲದಲ್ಲಿ ಮಹಾಬಲೇಶ್ವರನ ಆತ್ಮಲಿಂಗ ದರ್ಶನಕ್ಕೆ ಭಕ್ತ ಸಾಗರ ಹರಿದು ಬಂದಿತ್ತು. ಗ್ರಹಣ ಮೋಕ್ಷ ಕಾಲದವರೆಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದನ್ನೂ ಓದಿ: ನಭೋ ಮಂಡಲದಲ್ಲಿ ಖಗೋಳ ಕೌತುಕ – ಆಗಸದಲ್ಲಿ ರಕ್ತರೂಪಿ ಚಂದ್ರನ ದರ್ಶನ
ರಾಯಚೂರಿನ (Raichur) ದೇವದುರ್ಗ ತಾಲ್ಲೂಕಿನ ಕೋಣಚಪ್ಪಳಿ ಗ್ರಾಮದಲ್ಲಿ ಗ್ರಾಮಸ್ಥರು ಭಜನೆ ಮೊರೆ ಹೋಗಿದ್ದರು. ಆಂಜನೇಯ ದೇವಾಲಯದಲ್ಲಿ ಕೊಣಚಪ್ಪಳಿ ಗ್ರಾಮಸ್ಥರು ಲೋಕದ ಒಳಿತಿಗಾಗಿ ಭಜನೆ ಕೈಗೊಂಡರು. ನಗರದ ಜವಾಹರನಗರದಲ್ಲಿನ ಗುರು ರಾಘವೇಂದ್ರ ಸ್ವಾಮಿಗಳ ಶಾಖಾ ಮಠದಲ್ಲಿ ಗ್ರಹ ದೋಷಗಳ ಪರಿಹಾರಕ್ಕೆ ಭಕ್ತರಿಂದ ಜಪ ತಪ ನೆರವೇರಿಸಲಾಯಿತು. ನೂರಾರು ಭಕ್ತರು ತುಪ್ಪ, ಎಳ್ಳನ್ನ ಬಳಸಿ ಗ್ರಹಣ ಮುಕ್ತಾಯದವರೆಗೂ ಶಾಂತಿ ಹೋಮ ನೆರವೇರಿಸಿದರು.
ಬಾಗಲಕೋಟೆಯ ಬಾದಾಮಿಯ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮಹಾಕೂಟದಲ್ಲಿ ಚಂದ್ರಗ್ರಹಣ ಪ್ರಯುಕ್ತ ನೀರಿನಲ್ಲಿ ಧ್ಯಾನ ಮಾಡಲಾಯ್ತು. ಪುಷ್ಕರಣಿಯಲ್ಲಿ ಸಾವಿರಾರು ಜನರು, ಸಾಧು ಸಂತರು ಧ್ಯಾನ ಮಾಡಿದ್ರು. ಇದನ್ನೂ ಓದಿ: Blood Moon Photo Gallery | ಬಾನಂಗಳದಲ್ಲಿ ಖಗೋಳ ಕೌತುಕ – ರಾಜ್ಯದಲ್ಲಿ ಎಲ್ಲೆಲ್ಲಿ ರಕ್ತಚಂದ್ರನ ದರ್ಶನ?
ದಾವಣಗೆರೆ ಶ್ರೀರಾಘವೇಂದ್ರ ಮಠದಲ್ಲಿ ಗ್ರಹಣ ಶಾಂತಿ ಹೋಮ ನೆರವೇರಿಸಲಾಯಿತು. ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ನಿರಂತರ ಜಲಾಭಿಷಕದೊಂದಿಗೆ ಮುಖ್ಯ ಅರ್ಚಕರಿಂದ ಪೂಜಾ ಕೈಂಕರ್ಯ ಮಾಡಲಾಯಿತು. ಪೂಜೆಗೂ ಮುನ್ನ ಗುರು ರಾಘವೇಂದ್ರ ನಾಮ ಜಪ ಮೂಲಕ ನವಗ್ರಹ ದೇವತೆಗಳ ಆಹ್ವಾನ ನಡೆಯಿತು. ಹೋಮದಲ್ಲಿ ನೂರಾರು ಜನರು ಭಾಗಿಯಾಗಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋಡಗಳ ಮರೆಯಲ್ಲಿ ಮರೆಯಾಗಿರೋ ಚಂದ್ರ – ನೆಲಮಂಗಲದಲ್ಲಿ ಹುಣ್ಣಿಮೆ ಚಂದ್ರನ ದರ್ಶನ