ಮಂಗಳೂರು: ಇಂದು ಚಂದ್ರಗ್ರಹಣ (Lunar Eclipse) ಹಿನ್ನೆಲೆ ದೇವಸ್ಥಾನಗಳಲ್ಲಿ ಭಕ್ತಸಾಗರ ಹರಿದುಬರುತ್ತಿದೆ. ಅದೇ ರೀತಿ ಮಂಗಳೂರಿನ (Mangaluru) ಕದ್ರಿ (Kadri) ದೇಗುಲದಲ್ಲಿ ಗ್ರಹಣ ಹಿನ್ನೆಲೆ ದೇವರ ದರ್ಶನ ಮತ್ತು ವಿಶೇಷ ಪೂಜೆ ಸಲ್ಲಿಕೆಗಾಗಿ ಭಕ್ತರ ದಂಡೇ ಆಗಮಿಸುತ್ತಿದೆ.
ಕದ್ರಿ ಶ್ರೀ ಮಂಜುನಾಥ ದೇಗುಲದ (Kadri Shree Manjunatha Temple) ಏಳು ಕೆರೆಗಳಲ್ಲಿ ತೀರ್ಥ ಸ್ನಾನ ಮಾಡಿ ಕಾಶಿ ತೀರ್ಥದಲ್ಲಿ ಮಿಂದು ದೇವರಿಗೆ ಪೂಜೆ ಸಲ್ಲಿಸುವ ಸಲುವಾಗಿ ಭಕ್ತರು ಆಗಮಿಸುತ್ತಿದ್ದಾರೆ. ವಾರಾಂತ್ಯ ಹಾಗೂ ಗ್ರಹಣ ಹಿನ್ನೆಲೆ ಭಕ್ತರು ಬರುತ್ತಿದ್ದು, ಗ್ರಹಣ ಪ್ರಾಯಶ್ಚಿತಕ್ಕಾಗಿ ದೇವರಿಗೆ ಎಣ್ಣೆ ಹಾಗೂ ಧಾನ್ಯವನ್ನು ಸಮರ್ಪಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ- ಶಾಸಕರಿಗೆ ಡಿಕೆಶಿ ಖಡಕ್ ಎಚ್ಚರಿಕೆ
Advertisement
Advertisement
ಕದ್ರಿ ಸೇರಿದಂತೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲೂ ಜನಜಂಗುಳಿ ಸೇರಿದ್ದು, ಧರ್ಮಸ್ಥಳದಲ್ಲಿ ದೇವರ ದರ್ಶನ ಯಥಾಸ್ಥಿತಿ ಇದ್ದರೂ ಭಕ್ತ ಸಾಗರ ಹರಿದುಬರುತ್ತಿದೆ. ಕುಕ್ಕೆಯಲ್ಲಿ ಮಾತ್ರ ಇಂದು ದೇವರ ದರ್ಶನ ಸಮಯದಲ್ಲಿ ಬದಲಾವಣೆ ಆಗಿದೆ. ರಾತ್ರಿಯ ಮಹಾಪೂಜೆ ಸಂಜೆ 6:30ಕ್ಕೆ ಮುಕ್ತಾಯವಾಗಲಿದೆ. ಇಂದು ಸಂಜೆ 6:30ರ ಬಳಿಕ ದೇವರ ದರ್ಶನ ಬಂದ್ ಆಗಲಿದ್ದು, ಸಂಜೆಯ ಆಶ್ಲೇಷಾ ಬಲಿ ಹಾಗೂ ರಾತ್ರಿಯ ಅನ್ನದಾನ ಸೇವೆಯೂ ಬಂದ್ ಮಾಡಲಾಗಿದೆ. ಇದನ್ನೂ ಓದಿ: ನೆಹರು ತಾರಾಲಯದಲ್ಲಿ ಬ್ಲಡ್ ಮೂನ್ ಗ್ರಹಣ ವೀಕ್ಷಣೆಗೆ ಅವಕಾಶ
Advertisement
Web Stories