ಉಡುಪಿ: ಚಂದ್ರಗ್ರಹಣ (Chandra Grahan) ಇರುವುದರಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ (Udupi Krishna Mutt) ಪೂಜೆ ಪುನಸ್ಕಾರ, ಅನ್ನಪ್ರಸಾದ ವಿಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
10:30ಕ್ಕೆ ಕೃಷ್ಣಮಠದಲ್ಲಿ ಭೋಜನ ವ್ಯವಸ್ಥೆ ಆರಂಭವಾಗಲಿದ್ದು, ಊಟ 12 ಗಂಟೆಗೆ ಮುಕ್ತಾಯವಾಗುತ್ತದೆ. ಮಠದಲ್ಲಿ ಗ್ರಹಣ ಶಾಂತಿ ಹೋಮ-ಹವನಗಳ ವ್ಯವಸ್ಥೆ ಇರಲಿದೆ. ಗ್ರಹಣ ಆರಂಭಕ್ಕೂ ಮೊದಲು ನೈರ್ಮಲ್ಯ ವಿಸರ್ಜನ ಪೂಜೆ ನಡೆಯಲಿದೆ. ಇದನ್ನೂ ಓದಿ: ನಾಳೆ ರಕ್ತಚಂದ್ರಗ್ರಹಣ – ಕೌತುಕದ ಬಗ್ಗೆ ವಿಜ್ಞಾನಿಗಳು ಹೇಳೋದೇನು?
ಗ್ರಹಣ ಸ್ಪರ್ಶಕಾಲ ಮಧ್ಯಕಾಲ ಮತ್ತು ಮೋಕ್ಷಕಾಲದಲ್ಲಿ ಮಧ್ವ ಸರೋವರದಲ್ಲಿ ಭಕ್ತರಿಗೆ ತೀರ್ಥ ಸ್ನಾನ ಮಾಡುವ ವ್ಯವಸ್ತೆ ಕಲ್ಪಿಸಲಾಗಿದೆ. ಚಂದ್ರಗ್ರಹಣ ಆರಂಭಕ್ಕೂ ಮೊದಲು ರಾತ್ರಿ ಪೂಜೆ ನಡೆದು ಅಲಂಕಾರಗಳನ್ನೆಲ್ಲ ತೆಗೆದು ನೈರ್ಮಲ್ಯ ವಿಸರ್ಜನ ಪೂಜೆ ನಡೆಸಲಾಗುತ್ತದೆ.