ಬೆಂಗಳೂರು: ಇಂದು ಮಧ್ಯರಾತ್ರಿ ಸಂಭವಿಸಲಿರುವ ಬ್ಲಡ್ ಮೂನ್ ಚಂದ್ರಗ್ರಹಣ (Lunar Eclipse) ವೀಕ್ಷಣೆಗೆ ನೆಹರು ತಾರಾಲಯಯದಲ್ಲಿ (Nehru Taralaya) ವಿಶೇಷ ಅವಕಾಶ ಮಾಡಲಾಗಿದೆ.
ಚಂದ್ರಗ್ರಹಣ ಮಧ್ಯರಾತ್ರಿಯ ವೇಳೆಗೆ ನಡೆಯಲಿದ್ದು, ದೇಶಾದ್ಯಂತ ಗೋಚರಿಸಲಿದೆ. ಗ್ರಹಣ ವೀಕ್ಷಣೆಗೆ ನಗರದ ಜನರಿಗೆ ಅನುಕೂಲವಾಗುವಂತೆ ನೆಹರು ತಾರಾಲಯದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಹಣ ರಾತ್ರಿ 11:31 ರಿಂದ ಪ್ರಾರಂಭವಾಗುತ್ತದೆ ಮತ್ತು ಮುಂಜಾನೆ 3:36 ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣ ಆರಂಭದ ಸಮಯದಿಂದ ಮುಗಿಯುವವರೆಗೂ ಸಾರ್ವಜನಿಕರಿಗೆ ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದೆ. ಚಂದ್ರಗ್ರಹಣವನ್ನು ಬರೀ ಕಣ್ಣಿನಿಂದಲೇ ನೋಡಬಹುದಾದ ಕಾರಣ ಯಾವುದೇ ಕನ್ನಡಕ ಅಥವಾ ಉಪಕರಣ ಇಲ್ಲದೇ ನೋಡಲು ಅವಕಾಶ ಮಾಡಲಾಗಿದೆ. ಇದನ್ನೂ ಓದಿ: ಇಂದು ವರ್ಷದ ಕೊನೆಯ ಚಂದ್ರಗ್ರಹಣ- ಮಧ್ಯರಾತ್ರಿ 1 ಗಂಟೆಗೆ ಗ್ರಹಣ ಸ್ಪರ್ಶ
Advertisement
Advertisement
ಬೆಂಗಳೂರಿನಲ್ಲಿ (Bengaluru) ಕೇವಲ 6%ನಷ್ಟು ಮಾತ್ರ ಗ್ರಹಣ ಗೋಚರವಾಗಲಿದೆ. ಇದರಿಂದಾಗಿ ಅವಶ್ಯಕತೆ ಇದ್ದಲ್ಲಿ ಬೈನಾಕ್ಯೂಲರ್ ಹಾಗೂ ಟೆಲಿಸ್ಕೋಪ್‍ಗಳನ್ನು ಕೂಡ ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ವಯಸ್ಸಿನ ಮಿತಿ ಮತ್ತು ಜನರ ಸಂಖ್ಯೆಯಲ್ಲಿ ಮಿತಿ ಇಲ್ಲದೆ ಚಂದ್ರಗ್ರಹಣ ವೀಕ್ಷಣೆ ಮಾಡಬಹುದಾಗಿದೆ. ಇದನ್ನೂ ಓದಿ: ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಪಾರ್ಟಿ- ಗೃಹಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದ್ರಾ ಸಿಎಂ?
Advertisement
Web Stories