ಚಿಕ್ಕಬಳ್ಳಾಪುರ: ರಾಜಸ್ಥಾನದಲ್ಲಿ (Rajasthana) 60 ಸಾವಿರಕ್ಕೂ ಹೆಚ್ಚು ಹಸುಗಳನ್ನು ಬಲಿ ಪಡೆದಿದ್ದ ಲಂಪಿ ವೈರಸ್ (Lumpy virus) ಇದೀಗ ಕರ್ನಾಟಕಕ್ಕೂ (Karnataka) ಲಗ್ಗೆಯಿಟ್ಟಿದೆ.
ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯೊಂದರಲ್ಲೇ ನೂರಾರು ಹಸುಗಳಿಗೆ (Cow) ರೋಗ ಕಾಣಿಸಿಕೊಂಡಿದ್ದು, ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಜಾನುವಾರು ಜಾತ್ರೆಯನ್ನೇ ನಿಷೇಧಿಸಿದೆ. ಇದನ್ನೂ ಓದಿ: ಜಗತ್ತನ್ನು ಅಚ್ಚರಿಗೊಳಿಸಿದ ISRO – ಚಂದ್ರನ ಮೇಲ್ಮೈಯಲ್ಲಿ ದೊಡ್ಡ ಪ್ರಮಾಣದ ಸೋಡಿಯಂ ಪತ್ತೆಹಚ್ಚಿದ ಚಂದ್ರಯಾನ-2
Advertisement
Advertisement
ರಾಜಸ್ಥಾನದಲ್ಲಿ (Rajastana) 11 ಲಕ್ಷ ಹಸುಗಳಿಗೆ ವೈರಸ್ ಕಾಣಿಸಿಕೊಂಡಿದೆ. ಅದರಲ್ಲಿ 60 ಸಾವಿರಕ್ಕೂ ಹೆಚ್ಚು ಹಸುಗಳು ಮೃತಪಟ್ಟಿವೆ. ಅವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಲಸಿಕೆ ಹಾಕಿಸುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 42 ಗ್ರಾಮಗಳಿಗೆ ವೈರಸ್ ಎಂಟ್ರಿ ಕೊಟ್ಟಿದ್ದು, ಕಳೆದ 20 ದಿನಗಳಲ್ಲಿ 184 ಹಸುಗಳಿಗೆ ಕಾಯಿಲೆ ಕಾಣಿಸಿಕೊಂಡಿದೆ. ರೋಗಬಾಧೆಗೆ ತುತ್ತಾಗಿರುವ ಹಸುಗಳು ವಿಲವಿಲ ಒದ್ದಾಡುತ್ತಿವೆ.
Advertisement
ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಹೈನುಗಾರಿಕೆಯೇ ಕುಲ ಕಸುಬು, ದೈನಂದಿನ ಆರ್ಥಿಕ ಸಂಪನ್ಮೂಲವೂ ಸಹ ಅದೇ ಆಗಿದೆ. ಆದರೀಗ ಹಸುಗಳಿಗೆ ಚರ್ಮಗಂಟು ರೋಗ (Lumpy virus) ಕಾಣಿಸಿಕೊಂಡಿದ್ದು, ಹೈನುಗಾರಿಕೋದ್ಯಮಕ್ಕೆ ಪೆಟ್ಟು ನೀಡುತ್ತಿದೆ. ಇದನ್ನೂ ಓದಿ: ಲಿಂಪಿ ವೈರಸ್ ಕಾಟ: ಹಾಲಿನ ಸಂಗ್ರಹ ಕುಸಿತ – ಸಿಹಿ ತಿಂಡಿಗಳ ಬೆಲೆ ದಿಢೀರ್ ಏರಿಕೆ
Advertisement
ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ಕಳೆದ 20 ದಿನಗಳಿಂದ 184ಕ್ಕೂ ಹೆಚ್ಚು ಹಸುಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. 42 ಗ್ರಾಮಗಳಲ್ಲಿ ಈ ಡೆಡ್ಲಿ ಖಾಯಿಲೆ ಕಾಣಿಸಿಕೊಂಡಿದ್ದು ರೋಗಬಾಧೆಗೆ ತುತ್ತಾಗಿರೋ ಜಾನುವಾರುಗಳು ವಿಲವಿಲ ಒದ್ದಾಡುತ್ತಿವೆ. ರಾಸುಗಳು ವೀಪರೀತ ಜ್ವರಕ್ಕೆ ಒಳಗಾಗುತ್ತಿವೆ. ಮೇವು ತಿನ್ನದೆ, ನೀರು ಕುಡಿಯದೇ ನಿತ್ರಾಣ ಸ್ಥಿತಿಗೆ ತಲುಪಿ ಸಾವನ್ನಪ್ಪುತ್ತಿವೆ. ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗುತ್ತಿಲ್ಲ. ಇದರಿಂದ ಹೈನುಗಾರಿಕೆ ಉದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ ರೋಗಪೀಡಿದ ಹಸುವನ್ನು ಕಚ್ಚಿದ ಸೊಳ್ಳೆ, ನೊಣಗಳಿಂದ ಆರೋಗ್ಯವಂತ ಹಸುಗಳಿಗೂ ಕಾಯಿಲೆ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಜಾನುವಾರು ಜಾತ್ರೆ ನಿಷೇಧಿಸಿ ಆದೇಶ ಹೊರಡಿಸಿದೆ.
ಅಕ್ಟೋಬರ್ 1 ರಿಂದ 30ರ ವರೆಗೆ ಜಾನುವಾರು ಜಾತ್ರೆಗಳನ್ನು ಮಾಡುವಂತಿಲ್ಲ ಎಂದು ಆದೇಶಿಸಿದೆ. ಪಶುಪಾಲನಾ ಸೇವಾ ಹಾಗೂ ಪಶುವೈದ್ಯ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ರೋಗಬಾಧೆಗೆ ಒಳಗಾದ ರಾಸುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನೂ ಓದಿ: ರಶ್ಮಿಕಾ- ವಿಜಯ್ ದೇವರಕೊಂಡ ಜೋಡಿನ ಮತ್ತೆ ಬೆಸೆದ ‘ಲೈಗರ್’ ಸೋಲು
ಈ ಮಾರಣಾಂತಿಕ ಕಾಯಿಲೆಗೆ ಇನ್ನೂ ನಿಖರವಾದ ಲಸಿಕೆ ಕಂಡುಹಿಡಿದಿಲ್ಲ. ಆದರೂ ಸೋಂಕಿಗೆ ಒಳಗಾದ ಗ್ರಾಮಗಳ 5 ಕಿಮೀ ವ್ಯಾಪ್ತಿಯಲ್ಲೇ ಲಸಿಕೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಒಟ್ಟಿನಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಈ ಮಾರಣಾಂತಿಕ ಕಾಯಿಲೆಯಿಂದ ಹೈನುಗಾರಿಕೋದ್ಯಮಕ್ಕೆ ಪೆಟ್ಟುಬಿದ್ದಂತಾಗಿದೆ.