ಬೆಂಗಳೂರು: ನಾಳೆಯಿಂದ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ ದರ ಹೆಚ್ಚಳವಾಗಲಿದ್ದು, ನೂತನ ಪರಿಷ್ಕ್ರತ ದರ ಜಾರಿಯಾಗಲಿದೆ.
ಈ ಬಗ್ಗೆ ಕೆಎಸ್‌ಆರ್‌ಟಿಸಿ ಎಂಡಿ ಅಕ್ರಂ ಪಾಷಾರಿಂದ ಮಾಹಿತಿ ನೀಡಿದ್ದು, ನಾಳೆಯಿಂದ (ಫೆ.16) ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್‌ಗೆ ನೂತನ ಪರಿಷ್ಕ್ರತ ದರ ಜಾರಿಗೆಯಾಗಲಿದೆ ಎಂದು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಜೊತೆ ಸಂಸಾರ ಮಾಡಲು ಮಾಸ್ಟರ್ ಪ್ಲ್ಯಾನ್ – ಪ್ರಿಯಾಂಕಳ ರಹಸ್ಯ ಭೇದಿಸಿದ ಪೊಲೀಸರು!
ಡಿಸೇಲ್, ಸಿಬ್ಬಂದಿ ಹಾಗೂ ಇತರೆ ಖರ್ಚುಗಳ ಹಿನ್ನೆಲೆ ಲಗೇಜ್ ದರ ಏರಿಕೆ ಮಾಡಲಾಗಿದೆ. ಈ ಮೊದಲು 2021ರಲ್ಲಿ ಲಗೇಜ್ ದರ ಏರಿಕೆಯಾಗಿತ್ತು. ಅದಾದ ಬಳಿಕ ಟಿಕೆಟ್ ದರ ಪರಿಷ್ಕ್ರರಣೆ ಆದಾಗ ಲಗೇಜ್ ದರ ಏರಿಕೆಯಾಗಿರಲಿಲ್ಲ ಎಂದಿದ್ದಾರೆ
ಈಗಾಗಲೇ ಕೆಎಸ್‌ಆರ್‌ಟಿಸಿಯಿಂದ ಪರಿಷ್ಕೃತ ಲಗೇಜ್ ದರ ಪಟ್ಟಿ ರಿಲೀಸ್ ಆಗಿದ್ದು, ಈ ರೀತಿಯಾಗಿದೆ.
1ರಿಂದ 5 ಸ್ಟೇಜ್‌ವರೆಗೆ 6 ರೂ.
6ರಿಂದ 12 ಸ್ಟೇಜ್‌ವರೆಗೆ 12 ರೂ.
156 ರಿಂದ 160 ಸ್ಟೇಜ್‌ವರೆಗೆ 145 ರೂ.ಇದನ್ನೂ ಓದಿ: ಮಹಾಶಿವರಾತ್ರಿ – ಮಾದಪ್ಪನ ದರ್ಶನ ಪಡೆದ ಡಿಕೆಶಿ ಪತ್ನಿ

