ನವದೆಹಲಿ: ಕಳೆದ ವರ್ಷ ಪಂಜಾಬ್‌ನ (Punjab) ಲೂಧಿಯಾನದ ಕೋರ್ಟ್‌ನಲ್ಲಿ (Ludhiana Court) ಬಾಂಬ್ ಸ್ಫೋಟಿಸಿದ (Bomb Blast) ಪ್ರಕರಣದ ಆರೋಪಿ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕ (Terrorist) ಹರ್‌ಪ್ರೀತ್ ಸಿಂಗ್‌ನನ್ನು (Harpreet Singh) ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಪಂಜಾಬ್‌ನ ಅಮೃತಸರ ನಿವಾಸಿ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಮಲೇಷ್ಯಾ ಇಂದು ಬೆಳಗ್ಗೆ ಕೌಲಾಲಂಪುರದಿಂದ ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದ ಕೆಲವೇ ಹೊತ್ತಿನಲ್ಲಿ ಬಂಧಿಸಲಾಗಿದೆ. ಆತನ ಬಳಿ 10 ಲಕ್ಷ ರೂ. ನಗದು ಪತ್ತೆಯಾಗಿರುವುದಾಗಿ ಎನ್‌ಐಎ ವಕ್ತಾರರು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಲೂಧಿಯಾನದ ಕೋರ್ಟ್ ಕಟ್ಟಡದಲ್ಲಿ ನಡೆದ ಭೀಕರ ಬಾಂಬ್ ಸ್ಫೋಟದಿಂದಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, 6 ಮಂದಿ ಗಾಯಗೊಂಡಿದ್ದರು. ಈ ಬಾಂಬ್ ಸ್ಫೋಟದ ಹಿಂದೆ ಹರ್‌ಪ್ರೀತ್ ಸಿಂಗ್ ಪ್ರಮುಖ ಸಂಚನ್ನು ರೂಪಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: ಸಿಧು ಹತ್ಯೆಯ ಮಾಸ್ಟರ್ ಮೈಂಡ್ ಕ್ಯಾಲಿಫೋರ್ನಿಯಾದಲ್ಲಿ ಬಂಧನ
ಈತ ಪಾಕಿಸ್ತಾನ ಮೂಲದ ಸ್ವಯಂಘೋಷಿತ ಇಂಟರ್‌ನ್ಯಾಷನಲ್ ಸಿಖ್ ಯೂತ್ ಫೆಡರೇಶನ್ (ಐಎಸ್‌ವೈಎಫ್) ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್‌ನ ಸಹವರ್ತಿಯಾಗಿದ್ದು, ಆತನೊಂದಿಗೆ ಸೇರಿಕೊಂಡೇ ಲೂಧಿಯಾನ ಸ್ಫೋಟದ ಸಂಚನ್ನು ರೂಪಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಹರ್‌ಪ್ರೀತ್ ಸಿಂಗ್ ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಎನ್‌ಐಎ ತಿಳಿಸಿದೆ. ಇದನ್ನೂ ಓದಿ: “ಬ್ರಾಹ್ಮಣ ಭಾರತ್ ಛೋಡೋ” – ಜೆಎನ್‍ಯು ಕ್ಯಾಂಪಸ್ ಗೋಡೆಗಳ ಮೇಲೆ ವಿವಾದಾತ್ಮಕ ಬರಹ