ನ್ಯೂಜೆರ್ಸಿ: ಅದೃಷ್ಟದ ಬಾಗಿಲು ಯಾರಿಗೆ ಯಾವಾಗ ತಟ್ಟುತ್ತದೆ ಎನ್ನುವುದನ್ನು ಹೇಳಲು ಆಗೋಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಸ್ಥಳೀಯ ವ್ಯಕ್ತಿಯೊಬ್ಬರು ಮೂರು ಬಾರಿ ಖರೀದಿಸಿದ್ದ ಟಿಕೆಟ್ಗೆ ಅದೃಷ್ಟ ಹೊಡೆದಿದ್ದು, ಒಟ್ಟು 5 ಮಿಲಿಯನ್ ಡಾಲರ್(ಅಂದಾಜು 36 ಕೋಟಿ ರೂ.) ಹಣವನ್ನು ಗೆದ್ದಿದ್ದಾರೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ನ್ಯೂಜೆರ್ಸಿ ಲಾಟರಿ ಟಿಕೆಟನ್ನು ಖರೀದಿಸಿದ್ದ ರಾಬಾರ್ಟ್ ಅವರ ಅದೃಷ್ಟ ಚೆನ್ನಾಗಿಯೇ ಹೊಡೆದಿದ್ದು ಖರೀದಿಸಿದ ಟೆಕೆಟ್ ಗೆ 5 ಮಿಲಿಯನ್ ಡಾಲರ್ (36 ಕೋಟಿ ರೂ.) ಸಿಕ್ಕಿದೆ.
Advertisement
ರಾಬಾರ್ಟ್ ಅವರು ಕಟ್ಟಡ ನಿರ್ಮಾಣದ ವಸ್ತುಗಳನ್ನ ಸಾಗಿಸುವ ನಿವೃತ್ತ ಚಾಲಕನಾಗಿದ್ದು, ಲಾಟರಿ ಟೆಕೆಟ್ನಲ್ಲಿ 5 ಮಿಲಿಯನ್ ಡಾಲರ್ ಹಣ ಗೆದ್ದ ಸುದ್ದಿಯನ್ನ ಕೇಳುತ್ತಿದಂತೆ ಮತ್ತೆ ಎರಡು ಟೆಕೆಟ್ ಖರೀದಿಸಿದ್ದಾರೆ. ಇದರಲ್ಲಿ ತಲಾ 500 ಮತ್ತು 100 ಡಾಲರ್ ಹಣವನ್ನು ಗೆದ್ದಿದ್ದಾರೆ.
Advertisement
ಲಾಟರಿಯಲ್ಲಿ ಗೆದ್ದ ಸುದ್ದಿಯನ್ನ ತನ್ನ ತಾಯಿಗೆ ರಾಬರ್ಟ್ ತಿಳಿಸಿದಾಗ ತಾಯಿ ಆರಂಭದಲ್ಲೇ ನಂಬಲೇ ಇಲ್ಲ ಎಂದು ವರದಿಯಾಗಿದೆ. ಈ ಹಣದಿಂದ ಕಷ್ಟದಲ್ಲಿರುವ ತನ್ನ ಕುಂಟುಂಬ ಮತ್ತು ಸ್ನೇಹಿತರಿಗೆ ನೆರವು ನೀಡಲಿದ್ದೇನೆ ಎಂದು ಹೇಳಿದ್ದಾರೆ.
Advertisement
ರಾಬಾರ್ಟ್ ಅವರು ಇದೇ ಮೊದಲ ಬಾರಿಗೆ ಲಾಟರಿ ಟಿಕೆಟ್ ಗೆದ್ದಿಲ್ಲ. ಈ ಹಿಂದೆ 2,500 ಡಾಲರ್ ಹಣವನ್ನ ಗೆದ್ದಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews