ಲಕ್ನೋ: ಕೊಳಚೆ ನೀರು ಹರಿಯುವ ಕಾಲುವೆಯಲ್ಲಿ ನಾಯಿ ಮರಿಯೊಂದು ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಟೆಕ್ಕಿಯೊಬ್ಬರು ಕೇವಲ 6 ಗಂಟೆಯಲ್ಲಿ ಡ್ರೋಣ್ ತಯಾರಿಸಿ ರಕ್ಷಿಸಿರುವ ಘಟನೆ ಲಕ್ನೋದಲ್ಲಿ ನಡೆದಿದೆ.
ರಾಜ್ ಮಿಲಿಂದರ್ (27) ನಾಯಿ ಮರಿಯನ್ನು ರಕ್ಷಿಸಿದ ಟೆಕ್ಕಿ. ಬೆಳಗ್ಗೆ ವಾಕಿಂಗ್ ಮಾಡಲು ತೆರಳಿದ್ದ ರಾಜ್, ನಾಯಿ ಮರಿ ಮೋರಿಯಲ್ಲಿ ಬಿದ್ದು ಒದ್ದಾಡುವುದನ್ನು ಕಂಡು ರಕ್ಷಿಸಲು ಸ್ಥಳೀಯರ ಸಹಾಯ ಕೇಳಿದ್ದಾರೆ. ಆದರೆ ಯಾರು ಸಹಾಯ ಮಾಡಲು ನಿರಾಕರಿಸಿ ನಾಯಿ ಮರಿ ಅಲ್ಲಿಯೇ ಸಾಯಲಿ ಎಂದು ಹೇಳಿದ್ರಂತೆ. ಈ ವೇಳೆ ನಾಯಿ ಮರಿಯನ್ನು ರಕ್ಷಿಸಬೇಕು ಎಂದು ತೀರ್ಮಾನಿಸಿದ ರಾಜ್ ನೇರ ಲ್ಯಾಬ್‍ಗೆ ತೆರಳಿ ಡ್ರೋಣ್ ತಯಾರಿಸಿದ್ದಾರೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸುವ ರಾಜ್, ನಾಯಿ ಮರಿ ರಕ್ಷಿಸಲು ಸಹಾಯ ಕೇಳಿದ ವೇಳೆ ಎರಡು ದಿನಗಳಿಂದ ಮೋದಿಯಲ್ಲಿ ಅದು ಸಿಕ್ಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವಿಷಯ ತಿಳಿಯಿತು. ಅದ್ದರಿಂದ ಅದನ್ನು ರಕ್ಷಣೆ ಮಾಡಲು ನಿರ್ಧರಿಸಿ ಎಐ ಕಂಟ್ರೋಲ್ ಡ್ರೋಣ್ ತಯಾರಿಸಿದ್ದಾಗಿ ಹೇಳಿದ್ದಾರೆ.
Advertisement
ಡ್ರೋಣ್ ಗೆ ರೊಬೋಟಿಕ್ ಕೈ ಜೋಡಿಸಲಾಗಿತ್ತು, ಬಳಿಕ ರಿಮೋಟ್ ಕಂಟ್ರೋಲ್ ಬಳಸಿ ಅದನ್ನು ನಿಯಂತ್ರಣ ಮಾಡಲಾಯಿತು. ಅಲ್ಲದೇ ಅದಕ್ಕೆ ಸ್ಮಾರ್ಟ್ ಸೆನ್ಸಾರ್ ಅಳವಡಿಸಲಾಗಿತ್ತು. ಇದರಿಂದ ನಾಯಿಯನ್ನು ರಕ್ಷಣೆ ಮಾಡಲು ಸಾಧ್ಯವಾಯಿತು. ಕೊಳಚೆ ಕಾಲುವೆಗೆ ಇಳಿದು ನಾಯಿ ಮರಿಯನ್ನು ರಕ್ಷಿಸುವುದು ಅಸಾಧ್ಯವಾಗಿತ್ತು. ಅದ್ದರಿಂದ ಅನಿವಾರ್ಯವಾಗಿ ಡ್ರೋಣ್ ಸಹಾಯ ಪಡೆಯಬೇಕಾಯಿತು ಎಂದು ಹೇಳಿದ್ದಾರೆ.
Advertisement
Moved by the incident where he found a puppy stuck at the bottom of a 20-feet deep boggy drain last month, Milind Raj, a man from Lucknow, built a machine where a robotic claw was attached to a heavy-lifting drone, to rescue it. (04.05.2018) pic.twitter.com/QO3t20f7Bp
— ANI UP/Uttarakhand (@ANINewsUP) May 4, 2018