ಲಕ್ನೋ: ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಅಧ್ಯಕ್ಷ ವಾಸಿಮ್ ರಿಜ್ಮಿ ಅವರು ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ 51 ಸಾವಿರ ರೂ. ದೇಣಿಗೆ ನೀಡಲು ತೀರ್ಮಾನ ಮಾಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನೀರ್ಮಾಣ ಮಾಡಲು ಕೋರ್ಟ್ ತೀರ್ಪು ನೀಡಿದ ಬಳಿಕ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಈಗ ಈ ಮಂದಿರ ನಿರ್ಮಾಣ ಮಾಡಲು ಶಿಯಾ ಕೇಂದ್ರ ವಕ್ಫ್ ಮಂಡಳಿಯ ಅಧ್ಯಕ್ಷರು ದೇಣಿಗೆ ನೀಡುವುದಾಗಿ ಹೇಳಿದ್ದಾರೆ.
Advertisement
Advertisement
ಈ ವಿಚಾರವಾಗಿ ಮಾತನಾಡಿರುವ ರಿಜ್ವಿ ಅವರು, ದಶಕಗಳಷ್ಟು ಹಳೆಯದಾದ ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ‘ಅತ್ಯುತ್ತಮ ತೀರ್ಪು’ ಎಂದು ಬಣ್ಣಿಸಿದ್ದಾರೆ. ಈಗ ರಾಮ ಜನ್ಮಸ್ಥಾನದಲ್ಲಿ ಭವ್ಯವಾದ ದೇವಾಲಯ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ‘ವಾಸಿಮ್ ರಿಜ್ವಿ ಫಿಲ್ಮ್ಸ್’ ಪರವಾಗಿ 51 ಸಾವಿರ ರೂ. ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
Advertisement
ಸುಪ್ರೀಂ ತೀರ್ಪಿನ ಮುಖ್ಯಾಂಶಗಳು:
ರಾಮ ಜನಿಸಿದ್ದು ಅಯೋಧ್ಯೆಯಲ್ಲೇ ಎನ್ನುವ ನಂಬಿಕೆ ಇದ್ದು ವಿವಾದಿತ 2.77 ಎಕರೆ ರಾಮಲಲ್ಲಾಗೆ ಸೇರಿದ್ದಾಗಿದೆ. ಮಂದಿರ ನಿರ್ಮಾಣಕ್ಕೆ ನಿಯಮ ರೂಪಿಸಬೇಕು. 3 ತಿಂಗಳಲ್ಲಿ ಟ್ರಸ್ಟ್ ಮೂಲಕವೇ ನಿರ್ಮಿಸಬೇಕು. ಸರ್ಕಾರವೇ ರಾಮಮಂದಿರದ ಹೊಣೆ ಹೊರಬೇಕು.
Advertisement
ಮಸೀದಿಯನ್ನು ಕೆಡವಿದ್ದು ಕಾನೂನು ಉಲ್ಲಂಘನೆಯಾಗಿದೆ. ಸುನ್ನಿ ವಕ್ಫ್ ಬೋರ್ಡಿಗೆ ಅಯೋಧ್ಯೆಯಲ್ಲೇ 5 ಎಕ್ರೆ ಪರ್ಯಾಯ ಭೂಮಿಯನ್ನು ನೀಡಬೇಕು. ವಿಶೇಷಾಧಿಕಾರ ಬಳಸಿ ನೀಡುವ ಪರ್ಯಾಯ ಭೂಮಿ 3 ತಿಂಗಳಲ್ಲಿ ನಿರ್ಧರಿಸಬೇಕು. ವಿವಾದಿತ ಭೂಮಿಯನ್ನು ಮೂರು ಭಾಗಗಳಾಗಿ ಮಾಡಿದ ಅಲಹಾಬಾದ್ ಹೈಕೋರ್ಟ್ ತೀರ್ಪು ನ್ಯಾಯ ಸಮ್ಮತವಲ್ಲ. ಯಾತ್ರಿಗಳ ಅಭಿಪ್ರಾಯ, ಪುರಾತತ್ವ ಸಾಕ್ಷ್ಯ ಹಿಂದೂಗಳ ಪರವಾಗಿದೆ. ಮಸೀದಿಯ ಒಳಭಾಗದಲ್ಲಿ ಹಿಂದೂಗಳ ಪೂಜೆ ನಡೆಯುತಿತ್ತು.