ಲಕ್ನೋ: ಬುರ್ಖಾ ಧರಿಸಿದ್ದ ಮಹಿಳೆಯರ ಚೆಕಿಂಗ್ ಮಾಡುವ ವೇಳೆ ಅವರು ಹಾಕಿದ್ದ ವೇಲ್ ತೆಗಿಯಿರಿ ಎಂದು ಪುರುಷ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಲಕ್ನೋ ಮೆಟ್ರೋ ನಿಲ್ದಾಣದ ಸಿಬ್ಬಂದಿ ವಿರುದ್ಧ ಕೇಳಿಬಂದಿದೆ.
ಲಕ್ನೋ ಮಾವಯ್ಯ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ 6 ಮಂದಿ ಮಹಿಳೆಯರನ್ನು ಚೆಕಿಂಗ್ ಮಾಡಲಾಗುತ್ತಿತ್ತು. ಈ ವೇಳೆ ಮಹಿಳಾ ಸಿಬ್ಬಂದಿ ಬದಲು ಪುರುಷ ಸಿಬ್ಬಂದಿ ಮಹಿಳೆಯರಿಗೆ ಚೆಕಿಂಗ್ ಮಾಡಿದ್ದಲ್ಲದೇ, ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸೋಮವಾರದಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
Advertisement
Advertisement
ಅಲಾಂಭಾಗ್‍ನ ನಿವಾಸಿ ಮಾಜ್ ಮೊಹಮದ್ ತನ್ನ ಮಹಿಳಾ ಸಂಬಂಧಿಕರೊಂದಿಗೆ ಮಾವಯ್ಯ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ತಪಾಸಣೆ ನಡೆಸಬೇಕಿದ್ದ ಸಿಬ್ಬಂದಿ ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಲಕ್ನೋ ಮೆಟ್ರೋದ ಎಂಡಿಗೆ ಮಾಜ್ ಮೊಹಮದ್ ದೂರು ನೀಡಿದ್ದಾರೆ.
Advertisement
Advertisement
ನಾನು ಮಾವಯ್ಯ ಸ್ಟೇಷನ್ ನಿಂದ ಅಲಾಂಭಗ್ ನಿಲ್ದಾಣಕ್ಕೆ ನನ್ನ 5 ಜನ ಸಂಬಂಧಿಕರೊಂದಿಗೆ ತೆರಳುತ್ತಿದ್ದೆ. ನನ್ನನ್ನು ಸೇರಿಸಿ 6 ಜನರಿಗೆ ಟಿಕೆಟ್ ಪಡೆದುಕೊಂಡಿದ್ದೆ. ಚೆಕಿಂಗ್ ಪಾಯಿಂಟ್ ಹತ್ತಿರ ತೆರಳಿದಾಗ, ಪರಿಶೀಲನೆ ಮಾಡಲು ಮುಂದಾದ ಪುರುಷ ಸಿಬ್ಬಂದಿ ಮೊದಲಿಗೆ ಬುರ್ಖಾ ತೆಗೆಯಲು ಹೇಳಿದ್ದಾರೆ. ನನ್ನನ್ನು ಸೇರಿಸಿ ಎಲ್ಲರೂ ಬುರ್ಖಾ ತೆಗೆಯುತ್ತೇವೆ. ಆದರೆ ಮಹಿಳೆಯರಿಗೆ ಮೀಸಲಿರುವ ಕ್ಯಾಬಿನ್‍ನಲ್ಲಿ ತೆಗೆಯುತ್ತೇವೆ ಎಂದು ಹೇಳಿದೆವು. ಈ ವೇಳೆ ಸಿಬ್ಬಂದಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು ಬುರ್ಖಾವಷ್ಟೆ ಅಲ್ಲ ವೇಲ್ ಕೂಡ ತೆಗೆಯಲು ಹೇಳಿದರು ಎಂದು ಮಹಿಳೆ ಆರೋಪಿಸಿದ್ದಾರೆ.
ಇಷ್ಟೆಲ್ಲ ಆದ ಮೇಲೆ ನಾವು ಟಿಕೆಟ್ ವಾಪಸ್ ಮಾಡಲು ಹೋದಾಗಲೂ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಲಕ್ನೋ ಮೆಟ್ರೋ ಅಧಿಕಾರಿ ಈ ಬಗ್ಗೆ ತನಿಖೆ ನಡೆಯುತ್ತಿದೆ. ಸಿಬ್ಬಂದಿ ತಪ್ಪು ಮಾಡಿರುವುದು ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.