– ಕೆಳಕ್ಕೆ ಬಿದ್ದ ನಂತ್ರ ಮನಬಂದಂತೆ ಗೆಳೆಯರಿಂದ ಥಳಿತ
ಲಕ್ನೋ: ಮದ್ಯ (Alcohol) ಸೇವಿಸಲು ನಿರಾಕರಿಸಿದನೆಂದು ಆತನ ಸ್ನೇಹಿತನೇ ಮನೆಯ ಟೆರೇಸ್‌ನಿಂದ ಕೆಳಕ್ಕೆ ತಳ್ಳಿದ ಘಟನೆ ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ.
ಗಾಯಾಳುವನ್ನು ರಂಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ಈತನನ್ನು ಲಕ್ನೋದ ರುಪ್ಪುರ್ ಖಾದ್ರಾದಲ್ಲಿರುವ ಅವರ ಮನೆಯ ಟೆರೇಸ್‌ನಿಂದ ಓರ್ವ ಕೆಳಕ್ಕೆ ತಳ್ಳಿದ್ದಾನೆ. ಅಲ್ಲದೇ ಕೆಳಗೆ ಬಿದ್ದ ಬಳಿಕ ಇತರ ಮೂವರು ಸೇರಿ ರಂಜೀತ್‌ಗೆ ಮನಬಂದಂತೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ; ಗೋವಾದಲ್ಲಿ ಕನ್ನಡ ನಿರ್ಮಾಪಕರ ಗಲಾಟೆ
ಘಟನೆಯ ಸಂಪೂರ್ಣ ದೃಶ್ಯ ಮನೆಯ ಸುತ್ತಮುತ್ತ ಇರುವ ಕಟ್ಟಡದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋದಲ್ಲಿ ಯುವಕನೊಬ್ಬ ರಂಜೀತ್ ಸಿಂಗ್‌ನನ್ನು ಟೆರೇಸ್‌ನಿಂದ ತಳ್ಳುತ್ತಿರುವುದನ್ನು ತೋರಿಸುತ್ತದೆ. ಇನ್ನು ಇತರ ಮೂವರು ರಸ್ತೆಯಲ್ಲಿ ನಿಂತಿರುವುದನ್ನು ಕಾಣಬಹುದು. ಹಲ್ಲೆ ಅಲ್ಲಿಗೆ ನಿಲ್ಲುವುದಿಲ್ಲ. ರಂಜೀತ್ ಕೆಳಕ್ಕೆ ಬಿದ್ದ ಬಳಿಕ ಆತನ ಮೇಲೆ ಹಿಗ್ಗಾಮುಗ್ಗ ಥಳಿಸುವುದನ್ನು ಕೂಡ ಕಾಣಬಹುದಾಗಿದೆ.
ಘಟನೆ ನಡೆದ ಕೂಡಲೇ ರಂಜೀತ್ ಸಿಂಗ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಡಿಸ್ಚಾರ್ಜ್ ಮಾಡಲಾಗಿದೆ. ಪ್ರಕರಣ ಸಂಬಂಧ ನಾಲ್ವರ ಪೈಕಿ ಮೂವರನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ನಾಲ್ಕನೇ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.