ಲಕ್ನೋ: ಶಾಲೆ ಹೊರಗೆ ಇನ್ಮುಂದೆ ವಿದ್ಯಾರ್ಥಿಗಳು ಫಾಸ್ಟ್ ಫುಡ್, ಐಸ್‌ಕ್ರೀಮ್, ಬಲೂನ್ ಪಡೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಲಕ್ನೋ ಆಡಳಿತವು ಶಾಲೆಗಳ ಹೊರಗೆ ಐಸ್ ಕ್ರೀಮ್ ಮತ್ತು ಫಾಸ್ಟ್ ಫುಡ್ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ವಿವಿಧ ಶಾಲೆಗಳ ನೋಡಲ್ ಅಧಿಕಾರಿಗಳು ಮತ್ತು ನಗರ ಸಂಚಾರ ಪೊಲೀಸರು ಮತ್ತು ಜಿಲ್ಲಾಡಳಿತದ ನಡುವಿನ ಚರ್ಚೆಯ ನಂತರ ಪೀಕ್ ಅವರ್‌ನಲ್ಲಿ ಶಾಲೆಯ ಸುತ್ತಮುತ್ತ ಟ್ರಾಫಿಕ್ ತಪ್ಪಿಸಲು ಮಾರ್ಗಸೂಚಿಗಳನ್ನು ಹೊರಡಿಸಿತು. ಇದನ್ನೂ ಓದಿ: ಮೂರು ಮುದ್ದಾದ ಹುಲಿ ಮರಿಗಳನ್ನ ಅಮ್ಮನಂತೆ ಅಪ್ಪಿ ಮುದ್ದಾಡುವ ಚಿಂಪಾಂಜಿ
Advertisement
Advertisement
ಮಾರ್ಗಸೂಚಿಯಲ್ಲಿ ಏನಿದೆ?
ಶಾಲಾ ಸಮಯದ ನಂತರ ಟ್ರಾಫಿಕ್ ಜಾಮ್ ಉಂಟುಮಾಡುವ ಐಸ್ ಕ್ರೀಮ್, ಚಾಟ್, ಬಲೂನ್ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡಲು ಶಾಲೆಗಳ ಸುತ್ತಲೂ ಯಾವುದೇ ಅಂಗಡಿಗಳಿಗೆ ಅನುಮತಿಸಲಾಗುವುದಿಲ್ಲ.
Advertisement
Advertisement
ಶಾಲೆ ಬಿಟ್ಟ ನಂತರ ವಿದ್ಯಾರ್ಥಿಗಳು ರಸ್ತೆಯಲ್ಲಿ ತಿರುಗಾಡುವ ಬದಲು ನೇರವಾಗಿ ತಮ್ಮ ಶಾಲಾ ಕ್ಯಾಬ್ ಅಥವಾ ಬಸ್‍ನಲ್ಲಿ ಕುಳಿತುಕೊಳ್ಳಬೇಕು. ಶಾಲೆ ಮುಗಿಯುವ ಮುನ್ನವೇ ಮಕ್ಕಳಿಗಾಗಿ ಕಾಯುವ ಪೋಷಕರು ತಮ್ಮ ವಾಹನಗಳನ್ನು ಶಾಲೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ನಿಲ್ಲಿಸಬೇಕು. ಇದನ್ನೂ ಓದಿ: ಆರೋಗ್ಯ ಸಚಿವರಿಂದ ಛೀಮಾರಿ – ಪಂಜಾಬ್ ಮಾಜಿ ಸಿಎಂ ಅತ್ತಿಗೆ ರಾಜೀನಾಮೆ
ಶಾಲೆಯ ಸಮಯ ಮುಗಿದ ತಕ್ಷಣ, ಅವರು ಶಾಲೆಯ ಗೇಟ್ ಒಳಗೆ ಬರಬೇಕು. ಹೆಚ್ಚು ಸಮಯ ತೆಗೆದುಕೊಳ್ಳದೆ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕು. ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಯಾವುದೇ ವಾಹನ ನಿಲುಗಡೆ ಮಾಡುವಂತಿಲ್ಲ. ಪೋಷಕರು-ಶಿಕ್ಷಕರ ಸಭೆಯ ಸಮಯದಲ್ಲಿ ಮಾರ್ಗಸೂಚಿಗಳ ಬಗ್ಗೆ ಶಾಲೆಗಳು ಪೋಷಕರಿಗೆ ತಿಳಿಸಬೇಕು ಎಂದು ಆದೇಶವನ್ನು ಹೊರಡಿಸಿದೆ.