ಲಕ್ನೋ: ಉತ್ತರ ಪ್ರದೇಶ (Uttar Pradesh) ರಾಜಧಾನಿ ಲಕ್ನೋದಲ್ಲಿ (Lucknow) ಸೇನಾ ಅಧಿಕಾರಿಯೊಬ್ಬರ ಕಾರಿಗೆ (Car) ಹೋಟೆಲ್ ಮ್ಯಾನೇಜರ್ವೊಬ್ಬ ಬೆಂಕಿ (Fire) ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೋಟೆಲ್ಗೆ ಬೀಗ ಹಾಕಲಾಗಿದೆ.
ಹೋಟೆಲ್ನಲ್ಲಿ (Hotel) ಮ್ಯೂಸಿಕ್ ಸೌಂಡ್ ಜೋರಾಗಿ ಬರುತ್ತಿದೆ. ಕಿರಿಕಿರಿಯಾಗುತ್ತಿದೆ ಎಂದು ವಿರೋಧಿಸಿದ್ದಕ್ಕೆ ಸೇನಾ ಮೇಜರ್ನ ಕಾರಿಗೆ ಬೆಂಕಿ ಹಚ್ಚಲಾಗಿತ್ತು. ಪರಿಣಾಮವಾಗಿ ಹೋಟೆಲ್ನ್ನು ಸೀಲ್ ಮಾಡಲಾಗಿದೆ. ಇದನ್ನೂ ಓದಿ: ಜೋಶಿಮಠದ ಅಪಾಯಕಾರಿ ಕಟ್ಟಡ ನೆಲಸಮ ಕಾರ್ಯಾಚರಣೆ ಪ್ರಾರಂಭ – 600ಕ್ಕೂ ಹೆಚ್ಚು ಕಡೆ ಗುರುತು
Advertisement
Advertisement
ಮೇಜರ್ ಅಭಿಜಿತ್ ಸಿಂಗ್ ಅವರ ಮನೆಗೆ ಹೋಟೆಲ್ ಸಮೀಪದಲ್ಲಿದೆ. ರಾತ್ರಿ ಹೊತ್ತು ಸಂಗೀತ ಜೋರಾಗಿ ಕೇಳುತ್ತಿದೆ, ನಿಲ್ಲಿಸಿ ಎಂದು ಹೋಟೆಲ್ ಸಿಬ್ಬಂದಿಗೆ ಅಭಿಜಿತ್ ಸಿಂಗ್ ಹೇಳಿದ್ದಾರೆ. ಆದರೆ ಇದಕ್ಕೆ ಹೋಟೆಲ್ನವರು ತಲೆಕೆಡಿಸಿಕೊಂಡಿಲ್ಲ. ಇದರಿಂದ ಪರಸ್ಪರರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಸಂಗೀತವನ್ನು ನಿಲ್ಲಿಸಿದ್ದರು.
Advertisement
Advertisement
ಸಂಗೀತವನ್ನು ನಿಲ್ಲಿಸಿದ ನಂತರ ಸೇನಾಧಿಕಾರಿ ಮನೆಗೆ ವಾಪಸ್ ಆಗಿದ್ದಾರೆ. ಸೋಮವಾರ ಬೆಳಗಿನ ಜಾವ ತಮ್ಮ ಕಾರು ಹೊತ್ತಿ ಉರಿಯುತ್ತಿರುವುದನ್ನು ನೋಡಿದ್ದಾರೆ. ಬೆಂಕಿ ನಂದಿಸುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಇದನ್ನೂ ಓದಿ: ಬಾಲಕಿ ಮನೆಗೆ ನುಗ್ಗಿ ಚಾಕು ತೋರಿಸಿ ಹಣೆಗೆ ಬಿಂದಿಯಿಟ್ಟು ವಿದ್ಯಾರ್ಥಿ ಎಸ್ಕೇಪ್!
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k