ಮಹಿಳೆಗೆ ಮಳೆ ನೀರು ಎರಚಿ ಕಿರುಕುಳ; ಯುಪಿಯಲ್ಲಿ ಪೊಲೀಸ್‌ ಠಾಣೆಯ ಎಲ್ಲಾ ಸಿಬ್ಬಂದಿ ಅಮಾನತು

Public TV
1 Min Read
UP police chowki suspended

ಲಕ್ನೋ: ರಸ್ತೆಯಲ್ಲಿ ಹರಿಯುತ್ತಿದ್ದ ಮಳೆ ನೀರನ್ನು ಎರಚಿ ಮಹಿಳೆಯರಿಗೆ ಯುವಕರು ಕಿರುಕುಳ ನೀಡಿದ್ದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಯೊಂದರ ಎಲ್ಲಾ ಸಿಬ್ಬಂದಿಯನ್ನು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಪೊಲೀಸ್‌ ಠಾಣೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ ಎಂದು ವಿಧಾನಸಭೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ತಿಳಿಸಿದ್ದಾರೆ. ಮೂವರು ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. 16 ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: Electoral Bonds | ನಿವೃತ್ತ ಜಡ್ಜ್‌ ನೇತೃತ್ವದಲ್ಲಿ ಎಸ್‌ಐಟಿ ತನಿಖೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಜಾ

yogi adityanath

ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದ ರಸ್ತೆಯ ಮೂಲಕ ವಾಹನಗಳು ಚಲಿಸುತ್ತಿದ್ದವು. ಈ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆಗೆ ಯುವಕರ ಗುಂಪೊಂದು ನೀರು ಎರಚಿತ್ತು. ಪುರುಷ ಬೈಕ್‌ ಚಲಾಯಿಸುತ್ತಿದ್ದ. ಹಿಂದೆ ಮಹಿಳೆ ಕೂತಿದ್ದಳು. ಚಲಿಸುತ್ತಿದ್ದ ಬೈಕ್‌ ಹಿಡಿದುಕೊಂಡು ಯುವಕರು ಸುತ್ತುವರಿದು ನೀರು ಎರಚಿದ್ದಾರೆ. ಈ ವೇಳೆ ಬೈಕ್‌ ಜೊತೆಗೆ ಕೆಳಗೆ ಬೀಳುತ್ತಿದ್ದ ಮಹಿಳೆಯನ್ನು ಹಿಂದುಗಡೆಯಿಂದ ಯುವಕ ಹಿಡಿದು ಮೇಲೆತ್ತಿದ್ದಾನೆ. ಈ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು.

ಬಂಧಿತ 16 ಮಂದಿಯನ್ನು ಪವನ್ ಯಾದವ್, ಸುನಿಲ್ ಕುಮಾರ್ ಬಾರಿ, ಮೊಹಮ್ಮದ್ ಅರ್ಬಾಜ್, ವಿರಾಜ್ ಸಾಹು, ಅರ್ಜುನ್ ಅಗ್ರಿಹರಿ, ರತನ್ ಗುಪ್ತಾ, ಅಮನ್ ಗುಪ್ತಾ, ಅನಿಲ್ ಕುಮಾರ್, ಪಿಯಾನ್ಶು ಶರ್ಮಾ, ಆಶಿಶ್ ಸಿಂಗ್, ವಿಕಾಸ್ ಭಂಡಾರಿ, ಮನೀಶ್ ಕುಮಾರ್ ಸರೋಜ್, ಅಭಿಷೇಕ್ ತಿವಾರಿ, ಕೃಷ್ಣ ಕಾಂತ್ ಗುಪ್ತಾ, ಜೈ ಕಿಶನ್ ಮತ್ತು ಅಭಿಷೇಕ್ ಸಾಹು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Wayanad Landslide | ಸರ್ಕಾರದ ಅನುಮತಿ ಇಲ್ಲದೇ ಅಭಿಪ್ರಾಯ ಹೇಳುವಂತಿಲ್ಲ: ವಿಜ್ಞಾನಿಗಳಿಗೆ ಕೇರಳ ಸರ್ಕಾರ ನಿರ್ಬಂಧ

ಮಹಿಳೆಯ ಮಾನಹಾನಿಗೆ ಯತ್ನಿಸಿದ ಆರೋಪ, ಗಲಭೆ ಮತ್ತಿತರ ಅಪರಾಧಗಳ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಗುರುತಿಸಲು ಮತ್ತು ಅವರನ್ನು ಬಂಧಿಸಲು ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಲಕ್ನೋ) ರವೀನಾ ತ್ಯಾಗಿ ತಿಳಿಸಿದ್ದಾರೆ.

Share This Article