ಲಕ್ನೋ: ಲಕ್ನೋದ 10 ಹೋಟೆಲ್‌ಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, 46 ಲಕ್ಷ ರೂ. ಬೇಡಿಕೆಯನ್ನು ಇಟ್ಟಿದ್ದಾರೆ.
ಮ್ಯಾರಿಯಟ್, ಫಾರ್ಚೂನ್ ಪಾರ್ಕ್ ಬಿಬಿಡಿ, ಸರಕಾ ಹೋಟೆಲ್, ದಿ ಪಿಕ್ಯಾಡಿಲಿ, ಕಂಫರ್ಟ್ ಹೋಟೆಲ್ ವಿಸ್ಟಾ, ಕ್ಲರ್ಕ್ ಅವಧ್, ದಯಾಳ್ ಗೇಟ್‌ವೇ, ಹೋಟೆಲ್ ಸಿಲ್ವೆಟ್ ಸೇರಿದಂತೆ ಇನ್ನಿತರ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.ಇದನ್ನೂ ಓದಿ: ಡಿಕೆಶಿಗೆ ಸಿಎಂ ಆಗುವ ಅವಕಾಶ ಇದೆ, ಯೋಗೇಶ್ಬರ್ ಗೆಲ್ಲಿಸಿದ್ರೆ ಶಕ್ತಿ ಬರುತ್ತೆ: ಎಂಎಲ್‌ಸಿ ಪುಟ್ಟಣ್ಣ
ಭಾನುವಾರ (ಅ.27ರಂದು) ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದ್ದು, 45 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಜೊತೆಗೆ ನೆಲಮಹಡಿಯಲ್ಲಿರುವ ಕಪ್ಪು ಚೀಲವೊಂದರಲ್ಲಿ ಸ್ಫೋಟಕ ವಸ್ತುಗಳಿವೆ. ಒಂದು ವೇಳೆ ನೀವು ಹಣ ಕೊಡದೇ ಇದ್ದರೆ ನಿಮ್ಮ ಹೋಟೆಲ್ ಸ್ಫೋಟಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನನಗೆ ಹಣ ಬೇಕು ಇಲ್ಲವಾದರೆ ನಾನು ಸ್ಫೋಟಕಗಳನ್ನು ಸ್ಫೋಟಿಸುತ್ತೇನೆ. ರಕ್ತಪಾತವಾಗುತ್ತದೆ. ನೀವು ಏನೇ ಪ್ರಯತ್ನ ಮಾಡಿದರೂ ಅದು ವ್ಯರ್ಥವಾಗುತ್ತದೆ ಎಂದು ಬರೆದಿದ್ದಾರೆ. ಜೊತೆಗೆ ಹಣ ಕಳುಹಿಸಲು ಹೆಚ್ಚಿನ ಮಾಹಿತಿಗಾಗಿ ಈ ಇಮೇಲ್‌ಗೆ shaikha.nasser20077@gmail.com ಸಂಪರ್ಕಿಸುವಂತೆ ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ತಿರುಪತಿಯ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಇದಕ್ಕೂ ಸುಮಾರು ದೇಶ-ವಿದೇಶದ 250ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದ್ದವು. ಈ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವಾಲಯ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.ಇದನ್ನೂ ಓದಿ: ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಲಾಂಛನ ನಾಗರಹಾವು ಅಂದಿದ್ದು ಯಡಿಯೂರಪ್ಪ: ಬಾಲಕೃಷ್ಣ