ಲಕ್ನೋ: ರೈಲ್ವೇ ಮೇಲ್ಸೇತುವೆಯಿಂದ ಕೆಳಗೆ ಇಳಿಯುವಾಗ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಉರುಳಿ ಬಿದ್ದ ಪರಿಣಾಮ 4 ಜನರು ಸಾವನ್ನಪ್ಪಿದ್ದು, 48 ಜನ ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದಲ್ಲಿ ನಡೆದಿದೆ.
ಉತ್ತರ ಪ್ರದೇಶ ರಾಜ್ಯದ ಲಕ್ನೋ ಜಿಲ್ಲೆಯ ಪಾರಾ ಕ್ಷೇತ್ರದ ಭಾಪರಮೂ ರೈಲ್ವೆ ಕ್ರಾಸಿಂಗ್ ಬಳಿ ಅಪಘಾತ ನಡೆದಿದೆ. ಟ್ರಾಕ್ಟರ್ ನಲ್ಲಿದ್ದವರೆಲ್ಲರೂ ಕನೌಜ್ ಪಟ್ಟಣದ ದೇವ ಶರೀಫ ಜಾತ್ರೆ ನೋಡಿಕೊಂಡು ಹಿಂದಿರುಗುತ್ತಿದ್ರು. ಈ ವೇಳೆ ರೈಲ್ವೆ ಕ್ರಾಸಿಂಗ್ ನ ಓವರ್ ಬ್ರಿಡ್ಜ್ ದಾಟುವಾಗ ಅಪಘಾತ ಸಂಭವಿಸಿದೆ.
Advertisement
ಅದೃಷ್ಟವಶಾತ್ ಟ್ರ್ಯಾಕ್ಟರ್ ಬ್ರಿಡ್ಜ್ ನಿಂದ ಬೀಳುವಾಗ ಕೆಳಗೆ ಯಾವುದೇ ರೈಲು ಸಂಚರಿಸುತ್ತಿರಲಿಲ್ಲ. ಮಹಿಳೆ ಸೇರಿದಂತೆ ಮೂವರು ಪುರಷರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 20 ಮಕ್ಕಳು ಸೇರಿದಂತೆ ಒಟ್ಟು 48 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಲಕ್ನೋ ಟ್ರಾಮಾ ಸೆಂಟರ್ ಆಸ್ಪತ್ರೆಗೆ ರವಾನಿಸಲಾಗಿದೆ.
Advertisement
ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಎಸ್‍ಎಸ್‍ಪಿ ದೀಪಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಸ್ಥಳೀಯರ ನೆರವಿನಿಂದ ಎಲ್ಲ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
Advertisement
Advertisement
ಓವರ್ ಬ್ರಿಡ್ಜ್ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಡಿವೈಡರ್ ಗಳ ನಿರ್ಮಾಣವಾಗಿಲ್ಲ. ಈ ಹಿಂದೆಯೂ ಇದೇ ಸ್ಥಳದಲ್ಲಿ ಅಪಘಾತಗಳು ನಡೆದಿವೆ. ಆದ್ರೂ ಅಧಿಕಾರಿಗಳು ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
Lucknow: 4 people dead, 48 injured after a tractor trolley fell off a bridge in Para Police Station circle.
— ANI UP/Uttarakhand (@ANINewsUP) March 20, 2018
#Visuals from Lucknow: 4 people dead, 48 injured after a tractor trolley fell off a bridge in Para Police Station circle. pic.twitter.com/KVfcLAaCZ7
— ANI UP/Uttarakhand (@ANINewsUP) March 20, 2018