ಪ್ಯಾರಿಸ್: ವಿಶ್ವದ ಅತ್ಯಂತ ಹಿರಿಯ ಮಹಿಳೆ (World’s Oldest Person) ಎಂದು ಎನಿಸಿಕೊಂಡಿದ್ದ 118 ವರ್ಷದ ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ (Lucile Randon) ಅವರು ಮಂಗಳವಾರ ನಿಧರಾಗಿದ್ದಾರೆ.
ವಿಶ್ವದ ಅತ್ಯಂತ ಹಿರಿಯ ಮಹಿಳೆ ಮೊದಲ ಮಹಾಯುದ್ಧಕ್ಕೂ 1 ದಶಕದ ಮೊದಲೇ 1904ರ ಫೆಬ್ರವರಿ 11 ರಂದು ದಕ್ಷಿಣ ಫ್ರಾನ್ಸ್ನಲ್ಲಿ (France) ಜನಿಸಿದ್ದರು. ರಾಂಡನ್ ಮಂಗಳವಾರ ತಮ್ಮ 118 ನೇ ವಯಸ್ಸಿನಲ್ಲಿ ಟೌಲೋನ್ನಲ್ಲಿರುವ ನರ್ಸಿಂಗ್ ಹೊಮ್ನಲ್ಲಿ ನಿದ್ರೆಗೆ ಜಾರಿದ್ದ ವೇಳೆಯೇ ಸಾವನ್ನಪ್ಪಿದ್ದಾರೆ ಎಂದು ನರ್ಸಿಂಗ್ ಹೋಮ್ ವಕ್ತಾರ ಡೇವಿಡ್ ಟವೆಲ್ಲಾ ತಿಳಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕವಾಗಿ ನಾಲ್ವರು ಕಳ್ಳರ ಕೈ ಕಟ್ ಮಾಡಿದ ತಾಲಿಬಾನ್ ಸರ್ಕಾರ
ರಾಂಡನ್ ಸಾವು ತುಂಬಾ ನೋವು ತಂದಿದೆ. ಆದರೆ ಆಕೆಯ ಪ್ರೀತಿಯ ಸಹೋದರನನ್ನು ಸೇರುವುದು ಆಕೆಯ ಬಯಕೆಯಾಗಿತ್ತು. ಆಕೆಯ ಸಾವು ಒಂದು ವಿಮೋಚನೆಯಾಗಿದೆ ಎಂದು ಟವೆಲ್ಲಾ ಹೇಳಿದ್ದಾರೆ.
ಕಳೆದ ವರ್ಷ ಜಪಾನ್ ಮೂಲದ ಕೇನ್ ತನಕಾ ತಮ್ಮ 119ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಅವರ ಸಾವಿನ ಬಳಿಕ ಲುಸಿಲ್ ರಾಂಡನ್ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎನಿಸಿಕೊಂಡರು. ಅದಕ್ಕೂ ಮೊದಲು ರಾಂಡನ್ ಯುರೋಪ್ನ ಅತ್ಯಂತ ಹಿರಿಯ ವ್ಯಕ್ತಿ ಎಂದು ಕರೆಯಲ್ಪಟ್ಟಿದ್ದರು. 2022ರ ಏಪ್ರಿಲ್ನಲ್ಲಿ ಭೂಮಿಯ ಮೇಲೆ ಬದುಕಿರುವ ಅತ್ಯಂತ ಹಿರಿಯ ಮಹಿಳೆ ಎಂದು ರಾಂಡನ್ ಹೆಸರು ಗಿನ್ನೆಸ್ ದಾಖಲೆಯಲ್ಲಿ ಸೇರ್ಪಡೆಗೊಂಡಿತ್ತು. ಇದನ್ನೂ ಓದಿ: ಭಾರತದೊಂದಿಗೆ ಭಿನ್ನಾಭಿಪ್ರಾಯ ಮರೆತು ನಮ್ಮ ಲಸಿಕೆಯನ್ನು ತರಿಸಿಕೊಳ್ಳಿ: ಚೀನಾಗೆ ಪೂನಾವಾಲಾ ಸಲಹೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k