ನವದೆಹಲಿ: ಎಲ್‍ಟಿಟಿಇ (ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ) ಮುಖ್ಯಸ್ಥ ಪ್ರಭಾಕರನ್ (Prabhakaran) ಇನ್ನೂ ಜೀವಂತವಾಗಿದ್ದಾನೆ ಎಂದು ಮಾಜಿ ಕಾಂಗ್ರೆಸ್ (Congress) ನಾಯಕ ಪಾಜಾ ನೆಡುಮರನ್ (Pazha Nedumaran) ಸೋಮವಾರ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಪ್ರಭಾಕರನ್ ಆರೋಗ್ಯವಾಗಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದಾರೆ. ಅವರು ತಮಿಳು ಜನರ ಏಳಿಗೆಗಾಗಿ ಮತ್ತೆ ಜನರೆದುರು ಬರಲಿದ್ದಾನೆ. ಅವರನ್ನು ಜನತೆ ಬೆಂಬಲಿಸಬೇಕು ಎಂದಿದ್ದಾರೆ. ನನ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಅವರು ಈ ಮಾಹಿತಿಯನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Advertisement
Advertisement
ಪ್ರಭಾಕರನ್ ಕುಟುಂಬದ ಅನುಮತಿಯೊಂದಿಗೆ ಈ ಸುದ್ದಿ ಹಂಚಿಕೊಳ್ಳುತ್ತಿದ್ದೇನೆ. ಆದರೆ ಈಗ ನೆಲೆಸಿರುವ ಸ್ಥಳವನ್ನು ತಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
Advertisement
ಯಾರು ಈ ಪ್ರಭಾಕರನ್?: ಪೂರ್ವ ಮತ್ತು ಉತ್ತರ ಶ್ರೀಲಂಕಾದ ಭಾಗಗಳಲ್ಲಿ ಸ್ವತಂತ್ರ್ಯ ತಮಿಳು ದೇಶಕ್ಕಾಗಿ 25 ವರ್ಷಗಳ ಕಾಲ ಶ್ರೀಲಂಕಾ ಸರ್ಕಾರದೊಂದಿಗೆ ಎಲ್‍ಟಿಟಿಇ ಹೋರಾಡಿತ್ತು. ಈ ಎಲ್‍ಟಿಟಿಇ (LTTE) ನಿಯಂತ್ರಣಕ್ಕೆ ಪ್ರಧಾನಿ ರಾಜೀವ್ ಗಾಂಧಿ ಸೇನೆಯನ್ನು ಕಳುಹಿಸಿದ್ದರು. ಇದನ್ನೂ ಓದಿ: ಬಡವರು ಬಡವರಾಗೇ ಇರ‍್ಲಿ, ಶ್ರೀಮಂತರಾದ್ರೆ ಐಟಿ, ಇಡಿ, ಸಿಬಿಐ ಸಂಕಷ್ಟ : ಕೆಜಿಎಫ್ ಬಾಬು
Advertisement
ಶ್ರೀಲಂಕಾ ಸರ್ಕಾರಕ್ಕೆ ಸಹಾಯ ಮಾಡಿದ್ದಕ್ಕೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಎಲ್‍ಟಿಟಿಇ ಬೆಂಬಲಿತ ಸದಸ್ಯರು ಹತ್ಯೆಗೈದಿದ್ದರು. ಈ ದಾಳಿಯ ಹಿಂದೆ ಪ್ರಭಾಕರನ್ ಕೈವಾಡವಿತ್ತು. 2009ರಲ್ಲಿ ಸರ್ಕಾರ ಮತ್ತು ಎಲ್‍ಟಿಟಿಇ ನಡುವಿನ ಕಾದಾಟದಲ್ಲಿ ಪ್ರಭಾಕರನ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಇದನ್ನೂ ಓದಿ: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ವಿದ್ಯುತ್ ಪೂರೈಕೆ: ಸುನಿಲ್ ಕುಮಾರ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k