ನವದೆಹಲಿ: ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್ (General Bipin Rawat) ಹುತಾತ್ಮರಾದ 9 ತಿಂಗಳ ಬಳಿಕ ಕೇಂದ್ರ ಸರ್ಕಾರ (Central Government Of India) ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (Anil Chauhan) (ನಿವೃತ್ತ) ಅವರನ್ನ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ (CDS)ರಾಗಿ ನೇಮಕ ಮಾಡಿದೆ.
ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ 2021ರ ಮೇ ತಿಂಗಳಲ್ಲಿ ಪೂರ್ವ ಕಮಾಂಡ್ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಇದನ್ನೂ ಓದಿ: 500 ರೂ. ಕೊಟ್ರೆ ಒಂದು ರಾತ್ರಿ ಜೈಲಲ್ಲಿ ಇರಲು ಅವಕಾಶ
Advertisement
Advertisement
ತಮಿಳುನಾಡಿನ (Tamilnadu) ಕುನೂರು ಬಳಿ ವಾಯುಸೇನೆಯ MI17V5 ಹೆಲಿಕಾಪ್ಟರ್ ಪತನವಾಗಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹುತಾತ್ಮರಾದರು. ಇದರೊಂದಿಗೆ ದುರಂತದಲ್ಲಿ 13 ಜನರೂ ಹುತಾತ್ಮರಾದರು. ಇದರಲ್ಲಿ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಕೂಡ ಕೊನೆಯುಸಿರೆಳೆದರು. ಸೇನಾ ಸಿಬ್ಬಂದಿಯ ಮೊದಲ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ದೇಶದ ರಕ್ಷಣೆಗಾಗಿ 4 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು.
Advertisement
Advertisement
ಅವರು ಮೃತಪಟ್ಟ 9 ತಿಂಗಳ ಬಳಿಕ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಚೌಹಾಣ್ ಅವರನ್ನು ನೇಮಕ ಮಾಡಲಾಗಿದೆ.