ಬೆಂಗಳೂರು: ಪೆನ್‌ಡ್ರೈವ್‌ಗಳನ್ನ ದೇವರಾಜೇಗೌಡ (Devarajegowda), ಕಾರ್ತಿಕ್ ಅವರೇ ಮಾರಾಟಕ್ಕಿಟ್ಟಿದ್ದರು. ನಾನು ಅವನನ್ನ ಡಿಕೆ ಶಿವಕುಮಾರ್ ಅವರೊಂದಿಗೆ ಮಾತನಾಡಿಸಿ ತಪ್ಪು ಮಾಡಿದೆ ಎಂಬ ನೋವು ಕಾಡುತ್ತಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ (LR Shivaramegowda) ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೆನ್ ಡ್ರೈವ್ ಕೇಸಲ್ಲಿ (Pen Drive Case) ಡಿಸಿಎಂ ಡಿಕೆಶಿ 100 ಕೋಟಿ ಆಫರ್ ನೀಡಿದ್ದರು. ಆಫರ್ ತಂದವರು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಎಂಬ ವಕೀಲ ದೇವರಾಜೇಗೌಡ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಡಿ.ಕೆ ಶಿವಕುಮಾರ್ (DK Shivakumar) ಅವರ ಜೊತೆ ಮಾತನಾಡಿಸಿ ಎಲ್ಲೋ ತಪ್ಪು ಮಾಡಿದೆನೇನೋ ಅನ್ನೋ ನೋವು ನನಗೆ ಕಾಡುತ್ತಿದೆ. ನನಗೂ ಪೆನ್‌ಡ್ರೈವ್‌ಗೂ ಸಂಬಂಧ ಇಲ್ಲ. ಗೆಸ್ಟ್ ಅಪಿಯರೆನ್ಸ್ ತರ 2 ದಿನ ನಾನು ಸಿಲುಕಿದ್ದೆ, ಆದರೆ ಮೊನ್ನೆ ದಿನ ಏನೋ ಬುಲ್ಲೆಟ್ ಹೊಡೆದಿದ್ದಾನೆ. ಅದಕ್ಕೆ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ಡಿ.ಕೆ ಶಿವಕುಮಾರ್ ಅವರು ಮಾತನಾಡಬೇಕು ಅಂದಿರಲಿಲ್ಲ ಇವನೇ ಮಾತನಾಡಬೇಕು ಅಂದ ಅವರು ಹಲೋ ದೇವರಾಜೇಗೌಡ ಅಂದಿದ್ದರು ಅಷ್ಟೇ . ಈಗ ಡಿ.ಕೆ ಶಿವಕುಮಾರ್ ಅವರ ಜೊತೆಗೆ ಮಾತನಾಡಿಸಿ ಎಲ್ಲೋ ತಪ್ಪು ಮಾಡಿದೆನೇನೋ ಅನ್ನೋ ನೋವು ನನಗೆ ಕಾಡುತ್ತಿದೆ. ದೇವರಾಜೇಗೌಡ ಮೋಸ್ಟ್ ಕ್ರಿಮಿನಲ್ ಮ್ಯಾನ್. ಮುಂದಾದರೂ ಅವನ ಜೊತೆ ವ್ಯವಹಾರ ಮಾಡೋರು ಜಾಗರೂಕರಾಗಿರಿ. ದೇವರಾಜೇಗೌಡ ಬರೀ ಫೋನ್‌ನಲ್ಲಿ ರೆಕಾರ್ಡ್ ಮಾಡಲ್ಲ, ಅವನ ಬಾಡಿನೇ ರೆಕಾರ್ಡ್ ಮಾಡುತ್ತೆ. ಆ ರೀತಿ ವ್ಯವಸ್ಥೆ ಇರುವ ಮನುಷ್ಯ. ಅವನು ಒಳಗೆ ಹೋದಾಗ, ನಂತರ ಸದ್ಯ ಹುಚ್ಚು ನಾಯಿ ಒಳಗೆ ಹೋಯ್ತಲ್ಲ ಅಂತ ತಿರುಪತಿ ತಿಮ್ಮಪ್ಪನಿಗೆ ಕೈಮುಗಿದೆ ಎಂದು ಏಕವಚದಲ್ಲೇ ವಾಗ್ದಾಳಿ ನಡೆಸಿದ್ದಾರೆ.
Advertisement
ಪೆನ್‌ಡ್ರೈವ್ ಪ್ರಕರಣ ಪ್ರಾಮಾಣಿಕವಾಗಿ ತನಿಖೆ ನಡೆಯಲಿ. ಈ ಪೆನ್‌ಡ್ರೈವ್‌ಗಳನ್ನ ವ್ಯಾಪಾರಕ್ಕೆ ಇಟ್ಟುಕೊಂಡಿದ್ದೇ ದೇವರಾಜೇಗೌಡ ಮತ್ತು ಕಾರ್ತಿಕ್. ಪೊಲೀಸ್ ಭಾಷೆಯಲ್ಲಿ ಕೇಳಿದರೆ ಎಲ್ಲಾ ಹೊರಗೆ ಬರುತ್ತೆ. ನನಗೂ, ಡಿ.ಕೆ ಶಿವಕುಮಾರ್‌ಗೂ ಈ ಪ್ರಕರಣಕ್ಕೆ ಯಾವುದೇ ಸಂಬಧ ಇಲ್ಲ. ನಾನು ಬೌರಿಂಗ್ ಕ್ಲಬ್‌ಗೆ ಹೋಗಿಯೇ 4 ವರ್ಷಗಳಾಗಿವೆ. ಅವನು ಬೌರಿಂಗ್ ಕ್ಲಬ್‌ನಲ್ಲಿ ಕೂತಿದ್ದ ಜಾಗದಲ್ಲಿ ಮೊದಲು ಔಷಧಿ ಸಿಂಪಡಿಸಬೇಕು ಎಂದು ಲೇವಡಿ ಮಾಡಿದ್ದಾರೆ.
ಒಕ್ಕಲಿಗ ನಾಯಕತ್ವ ವಿಚಾರ ಎಳೆಯೋದು ಬೇಡ:
ಇದೇ ವೇಳೆ ಹೆಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪೆನ್‌ಡ್ರೈವ್ ಪ್ರಕರಣದ ಮಧ್ಯೆ ಒಕ್ಕಲಿಗ ನಾಯಕತ್ವದ ವಿಚಾರವನ್ನ ಎಳೆದು ತರೋದು ಬೇಡ. ಕುಮಾರಸ್ವಾಮಿ ಸಿಎಂ ಆಗಿದ್ದವರು. ಅವರಿಗೆ ಏನೇನು ಮಾಹಿತಿ ಇದೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಒಕ್ಕಲಿಗ ನಾಯಕತ್ವ ಇದರ ಮಧ್ಯೆ ತರುವುದು ಸರಿಯಲ್ಲ. ಜೆಡಿಎಸ್‌ನಲ್ಲಿ ಅಧಿಕಾರನೂ ಕೊಡ್ತಾರೆ ಹಾಗೆಯೆ ರುಬ್ಬಿ ಕಳುಹಿಸ್ತಾರೆ ಎಂದು ತಿರುಗೇಟು ನೀಡಿದ್ದಾರೆ.