ಅಹಮದಾಬಾದ್: 45,000 ಮೆಟ್ರಿಕ್ ಟನ್ ಎಲ್‌ಪಿಜಿ (LPG) ಹೊತ್ತ ಶಿವಾಲಿಕ್ ಹಡಗು (Shivalik Ship) ಗುಜರಾತ್‌ನ ಮುಂದ್ರಾ ಬಂದರಿಗೆ (Mundra Port) ಬಂದು ತಲುಪಲಿದೆ.
ಈ ಬಗ್ಗೆ ಮಾಹಿತಿ ನೀಡಿದ್ದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ, ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ನಂದಾ ದೇವಿ ಮತ್ತು ಶಿವಾಲಿಕ್ ಎಂಬ ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಬರುತ್ತಿವೆ. ಶಿವಾಲಿಕ್ ಮಾರ್ಚ್ 16 ರಂದು ಮತ್ತು ನಂದಾ ದೇವಿ ಮಾರ್ಚ್ 17 ರಂದು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿತ್ತು. ಈಗ ಆ ನಿರೀಕ್ಷೆಯಂತೆ ಇಂದು ಮಾ.16 ರಂದು ಶಿವಾಲಿಕ್ ಹಡಗು ಭಾರತಕ್ಕೆ ಬಂದು ತಲುಪಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಸಂಘರ್ಷ: ನೇಪಾಳದಲ್ಲೀಗ ಲೀಟರ್ ಪೆಟ್ರೋಲ್‌ಗೆ 188 ರೂ., ಡೀಸೆಲ್‌ಗೆ 196 ರೂ.
ಅಮೆರಿಕ – ಇರಾನ್ ಯುದ್ಧದಿಂದ ಅಡುಗೆ ಅನಿಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯ ಹಲವಾರು ವಲಯಗಳ ಮೇಲೆ ಪರಿಣಾಮ ಬೀರುತ್ತಿದೆ. ರೆಸ್ಟೋರೆಂಟ್‌ಗಳು, ಹಾಸ್ಟೆಲ್‌ಗಳು ಮತ್ತು ಕೆಲವು ಕಂಪನಿಗಳು, ಮನೆಗಳು ಮತ್ತು ಹೋಟೆಲ್‌ಗಳಲ್ಲಿ ಭಾರೀ ಸಮಸ್ಯೆ ಎದುರಾಗಿದೆ. ಎಲ್‌ಪಿಜಿ ಸರಬರಾಜಲ್ಲಿ ವಿಳಂಬವಾದರೆ ಮತ್ತಷ್ಟು ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಇದರ ನಡುವೆ ಶಿವಾಲಿಕ್ ಹಡಗು ಭಾರತ ತಲುಪಿದೆ. ಮತ್ತೊಂದು ಹಡಗು ನಂದಾ ದೇವಿ ಮಾರ್ಚ್ 17 ರಂದು ಕಾಂಡ್ಲಾ ಬಂದರಿಗೆ ಆಗಮಿಸಲಿದೆ. ಇದರಿಂದ ಗ್ಯಾಸ್ ಸಮಸ್ಯೆಗೆ ಕೊಂಚ ರಿಲೀಫ್ ಸಿಗಲಿದೆ.
ಡಾ. ಎಸ್. ಜೈಶಂಕರ್ ಮತ್ತು ಇರಾನಿನ ವಿದೇಶಾಂಗ ಸಚಿವರ ನಡುವಿನ ಚರ್ಚೆಗಳ ನಂತರ ಈ ಬೆಳವಣಿಗೆ ನಡೆದಿದೆ. ಈ ಮಾತುಕತೆ ಬಳಿಕ ಭಾರತದ ಹಡಗುಗಳಿಗೆ ಹಾರ್ಮೋಜ್ ಮಾರ್ಗವನ್ನು ಸುರಕ್ಷಿತವಾಗಿ ದಾಟಲು ಅನುಮತಿ ದೊರೆತಿತ್ತು. ಇದನ್ನೂ ಓದಿ: ದುಬೈ ಏರ್‌ಪೋರ್ಟ್ ಬಳಿ ಇರಾನ್ ಡ್ರೋನ್ ದಾಳಿ – ವಿಮಾನಗಳ ಹಾರಾಟ ಸ್ಥಗಿತ

