ಚಿಕ್ಕಬಳ್ಳಾಪುರ: ಎಲ್‌ಪಿಜಿ ಗ್ಯಾಸ್ ಸಿಗದೇ ಬಹುತೇಕ ಹೋಟೆಲ್‌ಗಳು ಮುಚ್ಚಿದ್ದಾರೆ. ಇತ್ತ ಚಿಕ್ಕಬಳ್ಳಾಪುರದಲ್ಲಿ ಹೋಟೆಲ್ ಮಾಲೀಕನೊರ್ವ ಎಲೆಕ್ಟ್ರಿಕ್ ಹೊಗೆರಹಿತ ಸೌದೆ ಒಲೆ ಬಳಸಿ ಆಡುಗೆ ಮಾಡುವ ಮೂಲಕ ನಮಗೇ ಈ ಗ್ಯಾಸ್ ಸಹವಾಸವೇ ಬೇಡ ಇದು ಸಾಕು ಅಂತ ಮಾದರಿಯಾಗುತ್ತಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಜೈನ್ ಆಸ್ಪತ್ರೆಯ ಮುಂಭಾಗದ ಆಂಧ್ರ ಮೆಸ್ ಹೋಟೆಲ್ ಮಾಲೀಕ ಮಂಜುನಾಥ್ ಗ್ಯಾಸ್ ಇಲ್ಲ ಅಂತ ಹೋಟೆಲ್ ಬಾಗಿಲು ಹಾಕದೆ, ಎಲೆಕ್ಟ್ರಿಕ್ ಹೊಗೆರಹಿತ ಸೌದೆ ಒಲೆಯ ಮೂಲಕ ಆಡುಗೆ ಮಾಡಿ ಹೋಟೆಲ್ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಾರದಲ್ಲಿ ಆಟೋ LPG ದರ 30 ರಿಂದ 40 ರೂ. ಏರಿಕೆ – ಕಲಬುರಗಿಯಲ್ಲಿ ಚಾಲಕರ ಆಕ್ರೋಶ

ಇನ್ನೂ ಈ ಆಸ್ಪತ್ರೆ ಮುಂಭಾಗವೇ ಹೋಟೆಲ್ ಇದ್ದು ಈ ಹೋಟೆಲ್ ಗೆ ಬರೋ ಗರ್ಭಿಣಿಯರಿಗೆ ಉಚಿತ ಊಟ ಸಹ ಕೊಡ್ತಾ ಬರ್ತಿದ್ದಾರೆ. ರೋಗಿಗಳಿಗೆ ಗರ್ಭಿಣಿಯರಿಗೆ ಹೊಟ್ಟೆ ಹಸಿದವರಿಗೆ ತೊಂದರೆ ಆಗಬಾರದು ಅಂತ ಈ ಹೊಗೆರಹಿತ ಎಲೆಕ್ಟ್ರಿಕ್ ಸೌದೆ ಒಲೆ ಮೂಲಕ ಆಡುಗೆ ಮಾಡ್ತಿದ್ದೇವೆ ಅಂತಾರೆ ಹೋಟೆಲ್ ಮಾಲೀಕ ಮಂಜುನಾಥ್. ಇದನ್ನೂ ಓದಿ: ರಾಜ್ಯ ಸರ್ಕಾರಗಳು ವಿಶ್ವಾಸದಿಂದ ಹೆಜ್ಜೆ ಇಡಬೇಕು – ತೈಲ ಅಭಾವ ವದಂತಿಗೆ ಜನ ಕಿವಿಗೊಡಂತೆ ಮೋದಿ ಕರೆ

ಈ ಎಲೆಕ್ಟ್ರಿಕ್ ಸೌದೆ ಒಲೆ ನೋಡಿರೋ ಇತರೆ ಹೋಟೆಲ್ ಮಾಲೀಕರು ಸಹ ಇದೇ ಬೇಕು ಅಂತ ಖರೀದಿಗೆ ಮುಂದಾಗಿದ್ದಾರಂತೆ. ಇದನ್ನೂ ಓದಿ: ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ 1 ಸಿಲಿಂಡರ್: ಸಚಿವ ಕೆ.ಹೆಚ್ ಮುನಿಯಪ್ಪ

