ನವದೆಹಲಿ: ಜನ ಸಾಮಾನ್ಯರ ಜೇಬಿಗೆ ಮತ್ತೊಮ್ಮೆ ಕತ್ತರಿ ಬಿದ್ದಿದೆ. ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ ಮತ್ತೊಮ್ಮೆ ಏರಿಕೆಯಾಗಿದ್ದು, ಸಿಲಿಂಡರ್ ಬೆಲೆ 1,000ರೂ. ದಾಟಿದೆ. ಅಲ್ಲದೇ ವಾಣಿಜ್ಯ ಎಲ್‍ಪಿಜಿ ಗ್ಯಾಸ್ ದರ ಕೂಡ ಏರಿಕೆಯಾಗಿದೆ.
Advertisement
ಗುರುವಾರದಿಂದ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆ 3 ರೂಪಾಯಿ 50 ಪೈಸೆ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆ 8 ರೂಪಾಯಿಯಷ್ಟಾಗಿದೆ. ಇಂದಿನಿಂದ ದೆಹಲಿ ಮತ್ತು ಮುಂಬೈಯಲ್ಲಿ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‌ನ ಬೆಲೆ 1,003 ರೂ. ಆಗಿದ್ದು, ಕೋಲ್ಕತ್ತಾದಲ್ಲಿ 1,029 ರೂ. ಮತ್ತು ಚೆನ್ನೈನಲ್ಲಿ 1,018.5 ರೂ. ಆಗಿದೆ. ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – 9 ಮಂದಿ ಸಾವು, ಸಂಕಷ್ಟದಲ್ಲಿ ಲಕ್ಷಾಂತರ ಜನ
Advertisement
The price of a 14.2 kg domestic LPG cylinder increased by Rs 3.5 with effect from today. The domestic cylinder will cost Rs 1003/cylinder from today. Earlier it was Rs 999.50.
— ANI (@ANI) May 19, 2022
Advertisement
ಈ ಮುನ್ನ ಮೇ 7ರಂದು ಸಿಲಿಂಡರ್ ಬೆಲೆ 50 ರೂ. ಏರಿಕೆಯಾಗಿತ್ತು. ಗೃಹಬಳಕೆಯ ಸಿಲಿಂಡರ್ ಜೊತೆಗೆ ವಾಣಿಜ್ಯ ಸಿಲಿಂಡರ್ ಕೂಡ ದುಬಾರಿಯಾಗಿತ್ತು. ಇದನ್ನೂ ಓದಿ: ಮಹಾಮಳೆಗೆ ನಲುಗಿದ ಬೆಂಗಳೂರು – ಇಂದು ಸಿಎಂ ಸಿಟಿ ರೌಂಡ್ಸ್