– ಐದು ತಿಂಗಳಿನಲ್ಲಿ 139.50 ರೂ. ಏರಿಕೆ
ನವದೆಹಲಿ: ಸತತ ಐದನೇ ತಿಂಗಳು ಗೃಹಬಳಕೆ ಎಲ್‍ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಹೊಸ ವರ್ಷದ ಮೊದಲ ದಿನವೇ ಗ್ರಾಹಕರಿಗೆ ಆಘಾತ ಉಂಟಾಗಿದೆ.
1 ಜನವರಿ 2020ರಿಂದ ಸಿಲಿಂಡರ್‌ಗಳು ದುಬಾರಿಯಾಗಿವೆ. ಮಹಾನಗರಗಳಲ್ಲಿ ಇದರ ಬೆಲೆ 21.50 ರೂ.ಗೆ ಏರಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್‍ನ ವೆಬ್‍ಸೈಟ್‍ನ ಪ್ರಕಾರ, ಮಹಾನಗರಗಳಲ್ಲಿ 14.2 ಕೆಜಿ ಇಂಡೇನ್ ಅನಿಲವು 22 ರೂ. ಏರಿಕೆಯಾಗಿದೆ. ಇತ್ತ ದೆಹಲಿಯಲ್ಲಿ 14.2 ಕೆಜಿ ಎಲ್‍ಪಿಜಿ ಸಿಲಿಂಡರ್‌ಗೆ 714 ರೂ., ಕೋಲ್ಕತ್ತಾದಲ್ಲಿ 747 ರೂ., ಮುಂಬೈನಲ್ಲಿ 684.50 ಮತ್ತು ಚೆನ್ನೈನಲ್ಲಿ 734 ರೂ. ಆಗಿದೆ.
Advertisement
Advertisement
ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಡಿಸೆಂಬರ್‍ನಲ್ಲಿ 14.2 ಕೆಜಿ ಅನಿಲದ ಬೆಲೆ ದೆಹಲಿಯಲ್ಲಿ 695 ರೂ., ಕೋಲ್ಕತ್ತಾದಲ್ಲಿ 725.50 ರೂ., ಮುಂಬೈನಲ್ಲಿ 665 ರೂ. ಮತ್ತು ಚೆನ್ನೈನಲ್ಲಿ 714 ರೂ. ಇತ್ತು. ಆದರೆ ಆಗಸ್ಟ್ ತಿಂಗಳಲ್ಲಿ ಸುಮಾರು 62 ರೂ. ಏರಿಕೆ ಬಳಿಕ ಪ್ರತಿ ತಿಂಗಳು ಬೆಲೆ ಹೆಚ್ಚಾಗುತ್ತಲೇ ಹೋಯಿತು. ಈ ಮೂಲಕ ಕಳೆದ ಐದು ತಿಂಗಳಿನಲ್ಲಿ 139.50 ರೂ. ಏರಿಕೆ ಕಂಡಿದೆ.
Advertisement
ಇದೇ ಸಮಯದಲ್ಲಿ, 19 ಕೆಜಿ ಸಿಲಿಂಡರ್ ಬೆಲೆಯೂ ಸುಮಾರು 33 ರೂ. ಏರಿಕೆ ಕಂಡಿದೆ. ಜನವರಿ 1ರಿಂದ 19 ಕೆಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 1,241 ರೂ., ಕೋಲ್ಕತ್ತಾದಲ್ಲಿ 1,308.50 ರೂ., ಮುಂಬೈನಲ್ಲಿ 1,190 ರೂ. ಮತ್ತು ಚೆನ್ನೈನಲ್ಲಿ 1,363 ರೂ. ನಿಗದಿಯಾಗಿದೆ. ಡಿಸೆಂಬರ್ ನಲ್ಲಿ 19 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1,211.50 ರೂ., ಕೋಲ್ಕತ್ತಾದಲ್ಲಿ 1,275.50 ರೂ., ಮುಂಬೈನಲ್ಲಿ 1,160.50 ರೂ. ಮತ್ತು ಚೆನ್ನೈನಲ್ಲಿ 1,333 ರೂ. ಇತ್ತು.