ನವದೆಹಲಿ: 2018ರ ಮಾರ್ಚ್ ಒಳಗಡೆ ಎಲ್ಪಿಜಿ ಸಿಲಿಂಡರ್ ಮೇಲೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಲೋಕಸಭೆಗೆ ಉತ್ತರ ನೀಡಿದ ಕೇಂದ್ರ ಪೆಟ್ರೋಲಿಂಯ ಸಚಿವ ಧರ್ಮೇಂದ್ರ ಪ್ರಧಾನ್, ಸಬ್ಸಿಡಿಯನ್ನು ತೆಗೆದು ಹಾಕಲು ಪ್ರತಿ ತಿಂಗಳು, ಪ್ರತಿ ಸಿಲಿಂಡರ್ ಬೆಲೆಯನ್ನು 4 ರೂ. ಏರಿಸಲಾಗುವುದು ಎಂದು ಅವರು ಹೇಳಿದರು.
Advertisement
ತೈಲ ಕಂಪೆನಿಗಳಿಗೆ ಪ್ರತಿ ತಿಂಗಳು ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆಯನ್ನು 2 ರೂ. ಏರಿಸಲು 2016ರ ಜುಲೈ 1 ರಿಂದ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
Advertisement
ಪ್ರಸ್ತುತ ಸಬ್ಸಿಡಿ ಸಹಿತ 14.2 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 477.46 ರೂ. ಇದ್ದರೆ ಕಳೆದ ವರ್ಷದ ಜೂನ್ ನಲ್ಲಿ 419. 18 ರೂ. ಇತ್ತು. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 564 ರೂ. ಇದೆ.
Advertisement
ಪ್ರಸ್ತುತ ದೇಶದಲ್ಲಿ 18.11 ಕೋಟಿ ಜನ ಸಬ್ಸಿಡಿ ಸಹಿತ ಸಿಲಿಂಡರ್ ಬಳಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ದೇಶದ 2.5 ಕೋಟಿ ಬಡ ಮಹಿಳೆಯರಿಗೆ ಗ್ಯಾಸ್ ಕನೆಕ್ಷನ್ ನೀಡಲಾಗಿದೆ. 2.66 ಕೋಟಿ ಬಳಕೆದಾರರು ಸಬ್ಸಿಡಿ ರಹಿತ ಸಿಲಿಂಡರ್ ಬಳಸುತ್ತಿದ್ದಾರೆ.
Advertisement
ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದ್ದೆ ತಡ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಭಾರೀ ಆಗಸ್ಟ್ ಮೊದಲ ವಾರದಲ್ಲಿ ಭಾರೀ ಏರಿಕೆಯಾಗಿತ್ತು. ಕಳೆದ 6 ವರ್ಷದಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, 14.2 ಕೆಜಿ ತೂಕದ ಸಿಲಿಂಡರ್ ಬೆಲೆ 32 ರೂ. ಏರಿಕೆಯಾಗಿತ್ತು. ದೆಹಲಿಯಲ್ಲಿ ಜಿಎಸ್ಟಿ ಜಾರಿಯಾಗುವುದಕ್ಕೂ ಮೊದಲು ಸಬ್ಸಿಡಿ ಸಹಿತ ಪ್ರತಿ ಸಿಲಿಂಡರ್ ಬೆಲೆ 446.65 ರೂ. ಇದ್ದರೆ, ನಂತರ ಈ ಬೆಲೆ 477.46 ರೂ.ಗೆ ತಲುಪಿದೆ.
ಜೂನ್ವರೆಗೆ ಪ್ರತಿ ಸಿಲಿಂಡರ್ಗೆ 119.85 ರೂ. ಸಬ್ಸಿಡಿ ಸಿಗುತಿತ್ತು. ಆದರೆ ಹೊಸ ಅಧಿಸೂಚನೆಯಂತೆ ಈಗ 107 ರೂ. ಹಣ ಸಬ್ಸಿಡಿಯಾಗಿ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. 1 ವರ್ಷದಲ್ಲಿ ಒಂದು ಕುಟುಂಬಕ್ಕೆ 14.2 ಕೆಜಿ ತೂಕದ 12 ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಕೇಂದ್ರ ಸರ್ಕಾರ ವಿತರಿಸುತ್ತಿದೆ.
ದೆಹಲಿಯಲ್ಲಿ ಯಾವ ವರ್ಷ ಎಷ್ಟಿತ್ತು?
ಜನವರಿ 01, 2004 – 241.6 ರೂ.
ಏಪ್ರಿಲ್ 01, 2005 – 294.75 ರೂ.
ಮಾರ್ಚ್ 01, 2007 – 294.75 ರೂ.
ಜೂನ್ 05, 2008 – 346.3 ರೂ.
ಜನವರಿ 29, 2009 – 279.7 ರೂ.
ಜನವರಿ 01, 2010 – 281.2 ರೂ.
ಜೂನ್ 25, 2011 – 399.26 ರೂ.
ಜುಲೈ 25, 2012 – 399 ರೂ.
ಜನವರಿ 01, 2013 – 410.5 ರೂ.
ಜನವರಿ 01, 2014 – 414 ರೂ.
ಜನವರಿ 01, 2015 – 417.82 ರೂ.
ಜನವರಿ 01, 2016 – 419.33 ರೂ.
ಜನವರಿ 01, 2017 – 434. ರೂ.
ಏಪ್ರಿಲ್ 01, 2017 – 440 ರೂ.
ಜೂನ್ 01, 2017 – 446 ರೂ.
ಮಾಹಿತಿ: www.iocl.com