ಬಾಗಲಕೋಟೆ: ಪಾಕಿಸ್ತಾನದಲ್ಲಿ (Pakistan) ಎಲ್ಪಿಜಿ ಸಿಲಿಂಡರ್ ಬೆಲೆ 10 ಸಾವಿರ ರೂ. ಆಗಿದೆ. ಆದ್ರೆ ನಮ್ಮಲ್ಲಿ 100 ರೂಪಾಯಿ ಹೆಚ್ಚಾದ್ರೆ ಮೋದಿ (Narendra Modi) ಕಾರಣ ಅಂತಾರೆ. ಪೆಟ್ರೋಲ್ (Petrol) ಬೆಲೆ 10 ರೂ. ಹೆಚ್ಚಾದ್ರೆ ಧಿಕ್ಕಾರ, ಧಿಕ್ಕಾರ, ಮೋದಿಗೆ ಧಿಕ್ಕಾರ ಅಂತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಬಾಗಲಕೋಟೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಪ್ರಸ್ತುತ ಎಲ್ಪಿಜಿ ಸಿಲಿಂಡರ್ (LPG Cylinder) ಬೆಲೆ 10 ಸಾವಿರ ರೂ. ಆಗಿದೆ. ಆದ್ರೆ ನಮ್ಮಲ್ಲಿ 100 ರೂ. ಜಾಸ್ತಿ ಆದ್ರೆ ಮೋದಿ ಕಾರಣ ಅಂತಾರೆ. ಹೋಗ್ರಪ್ಪಾ ಮಕ್ಕಳಾ ಹೋಗಿ ಪಾಕಿಸ್ತಾನಕ್ಕೆ ಹೋಗ್ರಿ.. ನಮ್ಮ ಗಾಂಧಿ ತಾತ ಪಾಕಿಸ್ತಾನ ಮಾಡಿಕೊಟ್ಟದಾನಲ್ಲ ಅಲ್ಲಿಗೆ ಎಲ್ಲರೂ ಗುಳೆ ಹೋಗಿ. ನಾವೆಲ್ಲಾ ಹಿಂದೂಗಳು ಆರಾಮವಾಗಿ ಇರ್ತಿವಿ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ರಾತ್ರೋ ರಾತ್ರಿ ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ!
Advertisement
Advertisement
ಅಂಬೇಡ್ಕರ್ ಆಗಲೇ ಹೇಳಿದ್ದರು, ಪಾಕಿಸ್ತಾನ ಒಡೆಯಬೇಡಿ. ಒಡೆದು ಕೊಡುವುದಾದರೆ ಇಲ್ಲಿಯವರೆನ್ನೆಲ್ಲಾ ಅಲ್ಲಿ ಕಳಿಸಿಬಿಡಿ ಅಂದಿದ್ರು. ಹಾಗೆಯೇ ಅಲ್ಲಿನ ಹಿಂದೂಗಳನ್ನೆಲ್ಲಾ ಇಲ್ಲಿ ತಂದು ಒಗೀರಿ, ಭಾರತ ಸುರಕ್ಷಿತವಾಗಿರುತ್ತೆ ಎಂದು ಯತ್ನಾಳ್ ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು – ನಮ್ಮ ದೇಶ ದಿವಾಳಿಯಾಗಿದೆ ಎಂದ ರಕ್ಷಣಾ ಸಚಿವ
Advertisement
ನಮ್ಮ ಸರ್ಕಾರ ಮರಾಠ ಸಮುದಾಯಕ್ಕಾಗಿ ಅಭಿವೃದ್ಧಿ ಪ್ರಾಧಿಕಾರ ಮಾಡಿದೆ. ಆದ್ರೆ ಇಲ್ಲಿ ಟಿಪ್ಪು ಸುಲ್ತಾನ್ಗೆ (Tipu Sultan) ಹುಟ್ಟಿದ ಕೆಲವು ಜನ ವಿರೋಧ ಮಾಡಿದ್ದಾರೆ. ಅದಕ್ಕೆ ನಾನು ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ದೆ, ಶಿವಾಜಿ ಹುಟ್ಟದೇ ಇದ್ದಿದ್ರೆ ಸದನದಲ್ಲಿ ಕೂತ 224 ಜನರ ಯಾರೂ ಹಿಂದೂಗಳಾಗಿ ಇರುತ್ತಿರಲಿಲ್ಲ. ಗಡ್ಡಬಿಟ್ಟುಕೊಂಡು ಪಾಕಿಸ್ತಾನ ಸೆಷನ್ನಲ್ಲಿ ಕೂರುತ್ತಿದ್ರಿ. ಭಾರತದಲ್ಲಿ ಕ್ಷತ್ರೀಯರು ಇದ್ದಾರೆ ಎನ್ನುವ ಕಾರಣಕ್ಕೆ ಹಿಂದೂ ಸಮಾಜ ಉಳಿದಿದೆ ಎಂದಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k
I don’t think the title of your article matches the content lol. Just kidding, mainly because I had some doubts after reading the article.
Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?