ಡೆಹ್ರಾಡೂನ್: ಇಂದು ಮುಂಜಾನೆ ಉತ್ತರಾಖಂಡದ (Uttarakhand) ರೂರ್ಕಿ ಬಳಿ ರೈಲ್ವೇ ಹಳಿಯ ಮೇಲೆ ಖಾಲಿ ಎಲ್‌ಪಿಜಿ ಸಿಲಿಂಡರ್ (LPG Cylinder) ಇರಿಸಿ ರೈಲನ್ನು (Indian Railway) ಹಳಿ ತಪ್ಪಿಸಲು ಯತ್ನಿಸಲಾಗಿದೆ.
ಅದೃಷ್ಟವಶಾತ್ ಗೂಡ್ಸ್ ರೈಲಿನ ಲೋಕೋ ಪೈಲಟ್ ಸಿಲಿಂಡರ್‌ನ್ನು ಗುರುತಿಸಿದ್ದಾರೆ. ಇದರಿಂದ ಸಂಭಾವ್ಯ ಹಳಿತಪ್ಪುವಿಕೆಯನ್ನು ತಪ್ಪಿದೆ. ಬಳಿಕ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.
Advertisement
ಧಂಧೇರಾದಿಂದ ಸರಿಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಲಂಡೌರಾ ಮತ್ತು ಧಂಧೇರಾ ನಿಲ್ದಾಣಗಳ ನಡುವೆ ಬೆಳಿಗ್ಗೆ 6:35 ಕ್ಕೆ ಈ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಸಿಬ್ಬಂದಿಯನ್ನು ಕಳುಹಿಸಲಾಯಿತು. ಸಿಲಿಂಡರ್ ಖಾಲಿಯಾಗಿದೆ ಎಂಬುದ್ನು ಖಚಿತಪಡಿಸಿಕೊಂಡು ಧಂಧೇರಾದಲ್ಲಿ ಸ್ಟೇಷನ್‌ಗೆ ತರಲಾಯಿತು. ಈ ಬಗ್ಗೆ ಸ್ಥಳೀಯ ಪೊಲೀಸರು ಹಾಗೂ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಭಾರತದಾದ್ಯಂತ ರೈಲು ಹಳಿತಪ್ಪಿಸುವ ಪ್ರಯತ್ನಗಳು ಇತ್ತೀಚಿಗೆ ಹೆಚ್ಚಾಗಿದೆ. ಆಗಸ್ಟ್‌ನಿಂದ ದೇಶಾದ್ಯಂತ ಇಂತಹ 18 ಪ್ರಯತ್ನಗಳು ನಡೆದಿವೆ ಎಂದು ಭಾರತೀಯ ರೈಲ್ವೆ ಇಲಾಖೆ ಬಹಿರಂಗಪಡಿಸಿದೆ.
Advertisement
ಜೂನ್ 2023ರಿಂದ ಎಲ್‌ಪಿಜಿ ಸಿಲಿಂಡರ್‌ಗಳು, ಸೈಕಲ್‌ಗಳು, ಕಬ್ಬಿಣದ ರಾಡ್‌ಗಳು ಮತ್ತು ಸಿಮೆಂಟ್ ಬ್ಲಾಕ್‌ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಇರಿಸಿದ 24 ಪ್ರಕರಣಗಳು ನಡೆದಿವೆ. ಇವುಗಳಲ್ಲಿ 15 ಘಟನೆಗಳು ಆಗಸ್ಟ್‌ನಲ್ಲಿ ಸಂಭವಿಸಿವೆ. ಸೆಪ್ಟೆಂಬರ್‌ನಲ್ಲಿ 5 ಘಟನೆಗಳು ನಡೆದಿವೆ.