ನವದೆಹಲಿ: ಅಕ್ಟೋಬರ್ ತಿಂಗಳ ಆರಂಭದಲ್ಲಿ ಅನಿಲ ದರ ಹೆಚ್ಚಳದ ಶಾಕ್ ನೀಡಿದ ತೈಲ ಕಂಪನಿಗಳು ಇದೀಗ, ಎಲ್‍ಪಿಜಿ ಸಿಲಿಂಡರ್ ದರ 15 ರೂಪಾಯಿ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಹೊರೆಯಾಗಿಸಿದೆ.
ಎಲ್‍ಪಿಜಿ ಸಿಲಿಂಡರ್ ದರ 15 ರೂಪಾಯಿ ಏರಿಕೆ ಕಾಣುವ ಮೂಲಕ ದೇಶದಾದ್ಯಂತ ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ಮೂಲಕ ಗೃಹಬಳಕೆ ಸಿಲಿಂಡರ್ ದರ 900ರ ಸಮೀಪಕ್ಕೆ ಬಂದಿದೆ. ಇದನ್ನೂ ಓದಿ: ಲಖೀಂಪುರದಲ್ಲಿ ನಾಲ್ವರು ರೈತರನ್ನು ಕೊಂದ ಪ್ರಕರಣ – ಇನ್ನೂ ಅರೆಸ್ಟ್ ಆಗಿಲ್ಲ ಮಂತ್ರಿ ಮಗ
ಈಗಾಗಲೇ ಸಿಲಿಂಡರ್ ದರ 15 ರೂ ಏರಿಕೆ ಬಳಿಕ ಕರ್ನಾಟಕದಲ್ಲಿ ಸಿಲಿಂಡರ್ ದರ 902.2ರೂ ಆಗಲಿದ್ದು, ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ದರ 899.50 ರೂ ಆಗಿದೆ. 5 ಕೆಜಿ ಸಿಲಿಂಡರ್ ದರ 502ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಪೆಟ್ರೋಲ್ ಲೀಟರ್‌ಗೆ 30 ಪೈಸೆ ಏರಿಕೆ ಕಂಡು 102ರೂ ಗಡಿದಾಟಿದೆ. ಡಿಸೇಲ್ ಪ್ರತಿ ಲೀಟರ್‌ಗೆ 34-37 ಪೈಸೆ ಏರಿಕೆ ಕಂಡು 91.42ರೂಪಾಯಿ ತಲುಪಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಲಖೀಂಪುರ್ ಭೇಟಿಗೆ ಅವಕಾಶವಿಲ್ಲವೆಂದ ಯೋಗಿ ಸರ್ಕಾರ