Connect with us

International

ತನ್ನ ಮಾಲಕಿಯ ಮೇಲೆ ಅತ್ಯಾಚಾರ ನಡೆಯೋದನ್ನ ತಪ್ಪಿಸಿದ ನಾಯಿ

Published

on

ಇಂಗ್ಲೆಂಡ್: ನಾಯಿಗಳಿಗೆ ಮತ್ತೊಂದು ಹೆಸರೇ ನಿಯತ್ತು. ಅವುಗಳ ನಿಷ್ಠೆಗೆ ಯಾವುದೇ ಪ್ರಾಣಿಯೂ ಸರಿಸಾಟಿ ಇಲ್ಲ. ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ತನ್ನ ಯಜಮಾನಿಯ ಮೇಲೆ ಆಗುತ್ತಿದ್ದ ಅತ್ಯಾಚಾರವನ್ನು ನಾಯಿಯೊಂದು ತಡೆದಿದೆ.

ಇಂಗ್ಲೆಂಡಿನ ಬರ್ಕ್‍ಶೈರ್‍ನ ವಿನ್ನೇರ್ಶ್‍ನ ಪಾರ್ಕ್‍ನಲ್ಲಿ ಈ ಘಟನೆ ನಡೆದಿದೆ.

ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ 36 ವರ್ಷದ ಮಹಿಳೆ ತನ್ನ ನಾಯಿ ಜೊತೆ ಸಮೀಪದ ಪಾರ್ಕ್‍ವೊಂದರಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕಾಮುಕನೋಬ್ಬ ಹಿಂಬದಿಯಿಂದ ಬಂದು ಆಕೆಯನ್ನು ಪಕ್ಕಕ್ಕೆ ಎಳೆದೊಯ್ದಿದ್ದಾನೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕಾಮುಕ ಸಂತ್ರಸ್ತೆಯ ಜೊತೆ ಅಸಭ್ಯವಾಗಿ ನಡೆದುಕೊಂಡು ಆಕೆಯ ಬಟ್ಟೆಯನ್ನು ತೆಗೆಯಲು ಹಾಗೂ ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ್ದಾನೆ. ಈ ವೇಳೆ ನಾಯಿ ರೋಷದಿಂದ ಕಾಮುಕನ ಮೇಲೆ ಆಕ್ರಮಣ ಮಾಡಿದೆ. ನಂತರ ನಾಯಿ ದಾಳಿಯಿಂದ ಭಯಗೊಂಡು ಆರೋಪಿ ಪರಾರಿಯಾಗಿದ್ದಾನೆ.


ಈ ಘಟನೆಯಿಂದ ಸಂತ್ರಸ್ತ ಮಹಿಳೆ ಆಘಾತಗೊಂಡಿದ್ದು, ನಂತರ ಅಧಿಕಾರಿಗಳು ಆಕೆಯನ್ನು ಸಂತೈಸಿ ಧೈರ್ಯ ತುಂಬಿದ್ದಾರೆ. ಆರೋಪಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಆದಷ್ಟು ಬೇಗ ಆತನನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನು ಓದಿ: 7 ವರ್ಷದ ನಂತರ ತನ್ನ ಪೋಷಕನನ್ನು ಗುರುತಿಸಿದ ಬಳ್ಳಾರಿಯ ಜಿಂಕೆ!

Click to comment

Leave a Reply

Your email address will not be published. Required fields are marked *