ನವದೆಹಲಿ: 2024-25ರ ಆರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ ದೇಶದ ಬೆಳವಣಿಗೆ (GDP Growth) ದರವು 5.4% ರಷ್ಟಿದೆ. ಈ ಅಂಕಿ ಅಂಶವು ನಿರೀಕ್ಷೆಗಿಂತ ಕಡಿಮೆಯಾಗಿದೆ. ಆದರೆ ಮುಂಬರುವ ತ್ರೈಮಾಸಿಕಗಳಲ್ಲಿ ಇದು ಸುಧಾರಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ (Lok Sabha) ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಮೊದಲ ಬ್ಯಾಚ್‌ನ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ಭಾರತವು ಸ್ಥಿರ ಮತ್ತು ನಿರಂತರ ಬೆಳವಣಿಗೆ ಕಂಡಿದೆ ಮತ್ತು ಅದರ GDP ಬೆಳವಣಿಗೆ ದರವು ಕಳೆದ ಮೂರು ವರ್ಷಗಳಲ್ಲಿ ಸರಾಸರಿ 8.3% ಹೊಂದಿದೆ ಎಂದು ಹೇಳಿದ್ದಾರೆ.
Advertisement
Advertisement
ಆದಾಗ್ಯೂ ಭಾರತವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ. 2ನೇ ತ್ರೈಮಾಸಿಕ ಬೆಳವಣಿಗೆ ದರವು ಕೇವಲ ತಾತ್ಕಾಲಿಕ ಕುಸಿತ ಮತ್ತು ಮುಂಬರುವ ತ್ರೈಮಾಸಿಕಗಳಲ್ಲಿ ಆರ್ಥಿಕತೆಯು ಉತ್ತಮ ಬೆಳವಣಿಗೆಯನ್ನು ಕಾಣಲಿದೆ ಎಂದು ಸೀತಾರಾಮನ್ ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: Delhi Assembly Election | ಚುನಾವಣಾ ಆಯೋಗದಿಂದ ಪೂರ್ವಸಿದ್ಧತಾ ಸಭೆ – ಮುಂದಿನ ವಾರವೇ ದಿನಾಂಕ ಪ್ರಕಟ ಸಾಧ್ಯತೆ
Advertisement
Advertisement
ಉತ್ಪಾದನಾ ವಲಯದಲ್ಲಿ ಯಾವುದೇ ವ್ಯಾಪಕವಾದ ಮಂದಗತಿ ಇಲ್ಲ, ಒಟ್ಟಾರೆ ಉತ್ಪಾದನಾ ವಲಯದ ಅರ್ಧದಷ್ಟು ಬಲವಾಗಿ ಉಳಿದಿದೆ. ಭಾರತದ ಆರ್ಥಿಕತೆಯು ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) 6.7 ಪ್ರತಿಶತ ಮತ್ತು ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 5.4 ಪ್ರತಿಶತದಷ್ಟು ಬೆಳೆದಿದೆ. ಇದನ್ನೂ ಓದಿ: ಫಾಲೋ ಆನ್‌ನಿಂದ ಭಾರತ ಬಚಾವ್ – ಕೊನೆಯ ವಿಕೆಟ್‌ಗೆ 39 ರನ್‌ಗಳ ಜೊತೆಯಾಟ ಉಳಿಸಿತು ಮಾನ!
ಹಣದುಬ್ಬರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸೀತಾರಾಮನ್, ಎನ್‌ಡಿಎ ಆಡಳಿತದಲ್ಲಿ ಇದನ್ನು ಉತ್ತಮವಾಗಿ ನಿಯಂತ್ರಿಸಲಾಗಿತ್ತು, ಆದ್ರೆ ಯುಪಿಎ ಆಡಳಿತದಲ್ಲಿ ಇದು ಎರಡಂಕಿಗಳನ್ನು ಮುಟ್ಟಿತ್ತು ಎಂದು ಹೇಳಿದರು. 2017-18ರಲ್ಲಿ ನಿರುದ್ಯೋಗ ದರವು ಶೇ.6 ರಿಂದ ಈಗ ಶೇ. 3.2ಕ್ಕೆ ಇಳಿದಿದೆ ಎಂದು ಹೇಳಿದರು.