ಮಂಡ್ಯ: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಬಳಿಕ ಇದೀಗ ಮೈಸೂರು (Mysuru) ಜನತೆಗೂ ಕುಡಿಯುವ ನೀರಿಗೆ (Drinking Water) ಕ್ಷಾಮ ಉಂಟಾಗುವ ಭೀತಿ ಶುರುವಾಗಿದೆ.
ಈ ಬಾರಿ ಮುಂಗಾರು ಕೈಕೊಟ್ಟಿದ್ದು, ಕೆಆರ್‌ಎಸ್ (KRS) ಜಲಾಶಯದ ಒಡಲು ಬರಿದಾಗಿದೆ. ಇದರಿಂದ ಮಂಡ್ಯ ಜಿಲ್ಲೆಯ ರೈತರು (Mandya Farmers) ಬೆಳೆ ಬೆಳೆಯೋದಕ್ಕೂ ನೀರಿಲ್ಲದೇ ಆತಂಕಗೊಂಡಿದ್ದಾರೆ. ಇದನ್ನೂ ಓದಿ: ಬೆಂ-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ 2ನೇ ಹಂತದ ಟೋಲ್ ಆರಂಭ- ಮೊದಲ ದಿನವೇ ಕೈಕೊಟ್ಟ ಸ್ಕ್ಯಾನರ್
Advertisement
Advertisement
ಕಳೆದ ವರ್ಷ ಜುಲೈ ತಿಂಗಳ ವೇಳೆಗೆಲ್ಲಾ ರೈತರು ಕಬ್ಬು, ಭತ್ತ ಬಿತ್ತನೆ ಕಾರ್ಯದಲ್ಲಿ ತೊಡಗುತ್ತಿದ್ದರು. ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆ ಗರಿಗೆದರುತ್ತಿತ್ತು. ಆದ್ರೆ ಈ ಬಾರಿ ಬಿತ್ತನೆ ಕಾರ್ಯವೂ ಇಲ್ಲದೇ, ಕುಡಿಯುವ ನೀರಿಗೂ ಸಮಸ್ಯೆಯಾಗುವ ಪರಿಸ್ಥಿತಿ ಬಂದೊದಗಿದೆ. ಇದನ್ನೂ ಓದಿ: ಬೆಂ-ಮೈ ಹೆದ್ದಾರಿ ಪರಿಶೀಲನೆ – ಇನ್ನು ಮುಂದೆ ಟೋಲ್ ಬಳಿ ಡ್ರಿಂಕ್ ಆಂಡ್ ಡ್ರೈವ್ ತಪಾಸಣೆ: ಅಲೋಕ್ ಕುಮಾರ್
Advertisement
Advertisement
ಬಿತ್ತನೆ ಕಾರ್ಯಕ್ಕೆ ಮುಂದಾಗದಂತೆ ಅಧಿಕಾರಿಗಳಿಂದಲೂ ಸೂಚನೆ ನೀಡಲಾಗಿದೆ. ಕಾವೇರಿ ನೀರಾವರಿ ನಿಗಮದ ಸೂಪರ್ಡೆಂಟ್ ಇಂಜಿನಿಯರ್ ಆನಂದ್ ಬಿತ್ತನೆ ಕಾರ್ಯದಲ್ಲಿ ತೊಡಗದಂತೆ ಮನವಿ ರೈತರಿಗೆ ಮನವಿ ಮಾಡಿದ್ದಾರೆ. ಮುಂದೆ ಮಳೆ ನೋಡಿಕೊಂಡು ಬಿತ್ತನೆ ಕಾರ್ಯ ಶುರು ಮಾಡಿ, ಈಗಿನ ಪರಿಸ್ಥಿತಿಯಲ್ಲಿ ಬೆಳೆಗೆ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದು ಮನವರಿಕೆ ಮಾಡಿದ್ದಾರೆ.
ಮೈಸೂರು ಜನ ಕುಡಿಯುವ ನೀರಿಗಾಗಿ ಕೆಆರ್‌ಎಸ್ ಜೊತೆಗೆ ಕಬಿನಿ ಜಲಾಶಯದ ನೀರನ್ನ ಅವಲಂಬಿಸಿದ್ದಾರೆ. ಮೈಸೂರು ನಗರ ಪ್ರದೇಶಗಳಿಗೆ ನಿತ್ಯ ಕುಡಿಯಲು ಬರೋಬ್ಬರಿ 305 ಎಂಎಲ್‌ಡಿ ನೀರು ಬೇಕು. ಆದ್ರೆ ಜಲಾಶಯದಲ್ಲಿ ನೀರಿನ ಕೊರತೆ ಭಾರೀ ಪ್ರಮಾಣದಲ್ಲಿ ಉಂಟಾಗಿದ್ದು, ಸದ್ಯದಲ್ಲೇ ಮಳೆಯಾಗದಿದ್ದರೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಲಿದೆ.
Web Stories